ಬೌಲರ್ ಜೇಮ್ಸ್ ಆಯಂಡರ್ಸನ್ ಹೊಸ ದಾಖಲೆ ಮಾಡಿದ್ದಾರೆ. - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಏಪ್ರಿಲ್ 3, 2018

ಬೌಲರ್ ಜೇಮ್ಸ್ ಆಯಂಡರ್ಸನ್ ಹೊಸ ದಾಖಲೆ ಮಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ವೇಗದ ಬೌಲರ್ ಜೇಮ್ಸ್ ಆಯಂಡರ್ಸನ್ ಹೊಸ ದಾಖಲೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಲೀಗಲ್ ಬಾಲ್ ಹಾಕಿದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ನ ಕರ್ಟ್ನಿ ವಾಲ್ಷ್ ರನ್ನು ಆಯಂಡರ್ಸನ್ ಹಿಂದಿಕ್ಕಿದ್ದಾರೆ. ಪಂದ್ಯದ 56ನೇ ಓವರ್ ನಲ್ಲಿ ಆಯಂಡರ್ಸನ್ ಈ ದಾಖಲೆ ಮಾಡಿದ್ರು. ಅವರು ಎಸೆದಿರೋ ಲೀಗಲ್ ಡೆಲಿವರಿಗಳ ಸಂಖ್ಯೆ 30,020. ಅಷ್ಟೇ ಅಲ್ಲ ಟೆಸ್ಟ್ ಕ್ರಿಕೆಟ್ ನಲ್ಲಿ 5000 ಓವರ್ ಬೌಲಿಂಗ್ ಮಾಡಿದ ದಾಖಲೆ ಸಹ ಆಯಂಡರ್ಸನ್ ಪಾಲಾಗಿದೆ.
ಈ ಹಿಂದೆ ಕರ್ಟ್ನಿ ವಾಲ್ಷ್ 30,019 ಲೀಗಲ್ ಬಾಲ್ ಗಳನ್ನು ಹಾಕಿದ್ದರು. ಸ್ಪಿನ್ನರ್ ಗಳ ಪೈಕಿ ಮೊದಲ ಸ್ಥಾನದಲ್ಲಿರೋ ಮುತ್ತಯ್ಯ ಮುರಳೀಧರನ್ 44,039, ಅನಿಲ್ ಕುಂಬ್ಳೆ 40,850 ಹಾಗೂ ಶೇನ್ ವಾರ್ನ್ 40,705 ಲೀಗಲ್ ಡೆಲಿವರಿಗಳನ್ನು ಎಸೆದಿದ್ದಾರೆ.
ಕರ್ಟ್ನಿ ವಾಲ್ಷ್ 24.4ರ ಸರಾಸರಿಯಲ್ಲಿ ಒಟ್ಟು 519 ವಿಕೆಟ್ ಗಳನ್ನು ಪಡೆದಿದ್ದರು. ಆಯಂಡರ್ಸನ್ 27.34ರ ಸರಾಸರಿಯಲ್ಲಿ 534 ವಿಕೆಟ್ ಗಳನ್ನು ಈಗಾಗ್ಲೇ ಕಬಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here