ಭವಿಷ್ಯ 04-10-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಅಕ್ಟೋಬರ್ 3, 2017

ಭವಿಷ್ಯ 04-10-2017

ಭವಿಷ್ಯ
ಮೇಷ ರಾಶಿ
ಅನಾವಶ್ಯಕ ಉದ್ವೇಗ ಮತ್ತು ಚಿಂತೆ ನಿಮ್ಮ ಜೀವನದ ರಸ ಹೀರಬಹುದು ಮತ್ತು ನಿಮ್ಮನ್ನು ಖಾಲಿಯಾಗಿಸಬಹುದು. ಇವುಗಳನ್ನು ತೊಡೆದುಹಾಕದಿದ್ದಲ್ಲಿ ಅವು ಕೇವಲ ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸುತ್ತವೆ. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ಪ್ರೀತಿ – ಸಾಂಗತ್ಯ ಮತ್ತು ಬಂಧ ಏರಿಕೆಯಲ್ಲಿರುತ್ತವೆ. ಏಕಪಕ್ಷೀಯ ಪ್ರೇಮ ನಿಮ್ಮನ್ನು ನಿರಾಸೆಗೊಳಿಸುತ್ತದೆ. ನೀವು ನಿಮ್ಮ ಫಾರ್ಮ್‌ನಲ್ಲಿದಿದ್ದರಿಂದ ನಿಮ್ಮ ಮೇಲಿನವರು ನಿಮ್ಮ ಜೊತೆ ಇಂದು ತಂಬಾ ಕಠಿಣವಾಗಿ ವರ್ತಿಸುತ್ತಿದ್ದಾರೆಂದು ನೀವು ಅಂದುಕೊಳ್ಳಬಹುದು. ನಿಮ್ಮ ಯೋಜನೆಗಳಿಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಒಂದು ದಿನ. ವೈವಾಹಿಕ ಜೀವನ ಕೆಲವೊಮ್ಮೆ ಬಹಳ ಬೇಡಿಕೆಗಳನ್ನಿಡುತ್ತದೆ. ನೀವು ಬೇಡಿಕೆಗಳನ್ನು ಪೂರೈಸದಿದ್ದಲ್ಲಿ, ನೀವು ಪರಿಣಾಮಗಳನ್ನು ಅನುಭವಿಸುತ್ತೀರಿ. ಆದ್ದರಿಂದ, ಎಚ್ಚರದಿಂದಿರಿ.
ವೃಷಭ ರಾಶಿ
ಒತ್ತಡ ಸಣ್ಣ ಅನಾರೋಗ್ಯಕ್ಕೆ ಕಾರಣವಾಗಬಹುದು. ಆರಾಮವಾಗಿರಲು ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಜೊತೆಗಿರಿ. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಮಕ್ಕಳು ಅಧ್ಯಯನದಲ್ಲಿ ಅವರ ನಿರಾಸಕ್ತಿಯಿಂದಾಗಿ ಶಾಲೆಯಲ್ಲಿ ನಿರಾಸೆಯುಂಟುಮಾಡಬಹುದು. ಏಕಪಕ್ಷೀಯ ವ್ಯಾಮೋಹ ನಿಮ್ಮ ಸಂತೋಷವನ್ನು ಹಾಳುಮಾಡುತ್ತದೆ. ಸಹೋದ್ಯೋಗಿಗಳು ಮತ್ತು ಹಿರಿಯರ ಸಂಪೂರ್ಣ ಸಹಕಾರದಿಂದ ಕಛೇರಿಯಲ್ಲಿ ಕೆಲಸ ಬೇಗ ಮುಗಿಯುತ್ತದೆ. ನಿಮ್ಮ ಪ್ರಖರ ವೀಕ್ಷಣೆ ನಿಮ್ಮನ್ನು ಇತರರಿಗಿಂತ ಮುಂದಿರಲು ಸಹಾಯ ಮಾಡುತ್ತದೆ. ಕೆಲಸದಲ್ಲಿ ವಿಚಿತ್ರಗಳಾಗಬಹುದು; ನೀವು ಎಲ್ಲವೂ ನಿಮ್ಮ ವಿರುದ್ಧ ಹೋಗುವುದನ್ನು ನೋಡುತ್ತೀರಿ. ಆದರೆ, ಇದು ನಿಜವಲ್ಲ.
ಮಿಥುನ ರಾಶಿ
ನಿಮ್ಮ ದೈಹಿಕ ಬಲವನ್ನು ನಿರ್ವಹಿಸಲು ನೀವು ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು –ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ಆಸ್ತಿ ವಿವಾದ ಹುಟ್ಟಿಕೊಳ್ಳಬಹುದು. ಸಾಧ್ಯವಾದರೆ ಅದನ್ನು ಸೌಹಾರ್ದತೆಯಿಂದ ಪರಿಹರಿಸಲು ಪ್ರಯತ್ನಿಸಿ. ಕಾನೂನು ಹಸ್ತಕ್ಷೇಪ ಪ್ರಯೋಜನಕಾರಿಯಾಗದಿರಬಹುದು. ನಿಮ್ಮ ಪ್ರೀತಿಪಾತ್ರರ ವರ್ತನೆಗೆ ನೀವು ತುಂಬ ಸಂವೇದನಾಶೀಲರಾಗಿರುತ್ತೀರಿ. ನಿಮ್ಮ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಮತ್ತು ನಿಮ್ಮ ಜೀವನದುದ್ದಕ್ಕೂ ನಿಮ್ಮನ್ನು ನೀವೇ ಶಪಿಸುತ್ತಿರುವಂಥ ಕೆಲಸ ಮಾಡಬೇಡಿ. ಕೆಲಸದಲ್ಲಿನ ಒಬ್ಬ ಒಳ್ಳೆಯ ಸ್ನೇಹಿತ ಇಂದು ನಿಜವಾಗಿಯೂ ಕಿರಿಕಿರಿ ಮಾಡಬಹುದು. ಪ್ರವಾಸ ಮನರಂಜನೆ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಇಂದು ನಿಮ್ಮ ಕಾರ್ಯಸೂಚಿಯಲ್ಲಿರುತ್ತವೆ. ಇದು ನಿಮ್ಮ ವೈವಾಹಿಕ ಜೀವನದಲ್ಲಿ ನಿಜವಾಗಿಯೂ ಒಂದು ಕಷ್ಟಕರ ದಿನವಾಗಿರಬಹುದು.
ಕರ್ಕ ರಾಶಿ
ನಿಮ್ಮನ್ನು ಪ್ರೇರೇಪಿಸುವ ಭಾವನೆಗಳನ್ನು ಗುರುತಿಸಿ. ನೀವು ಭಯ, ಅನುಮಾನ, ಕೋಪ, ದುರಾಸೆಯಂಥ ನಕಾರಾತ್ಮಕ ಆಲೋಚನೆಗಳನ್ನು ಬಿಡಬೇಕು. ಏಕೆಂದರೆ ಇವುಗಳು ನೀವು ಬಯಸುವುದಕ್ಕೆ ವಿರುದ್ಧವಾದವುಗಳನ್ನು ಆಕರ್ಷಿಸಲು ಆಯಸ್ಕಾಂತದಂತೆ ಕೆಲಸ ಮಾಡುತ್ತದೆ. ಎಲ್ಲಾ ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡಬೇಕು ಮತ್ತು ಸರಿಯಾದ ಸಮಾಲೋಚನೆಯಿಂದ ಅನಗತ್ಯ ನಷ್ಟವನ್ನು ತಪ್ಪಿಸಬಹುದು ಮಕ್ಕಳ ಅವರ ಸಾಧನೆಗಳಿಂದ ನೀವು ಹೆಮ್ಮೆ ಪಡುವಂತೆ ಮಾಡಬಹುದು. ನಿಮ್ಮ ಸಂಬಂಧದ ಆ ಎಲ್ಲಾ ದೂರುಗಳು ಮತ್ತು ದ್ವೇಷಗಳು ಈ ಅದ್ಭುತವಾದ ದಿನದಂದು ಕಣ್ಮರೆಯಾಗುತ್ತವೆ. ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ಪಡೆಯುತ್ತವೆ. ನಿಮ್ಮ ವಸ್ತುಗಳ ಬಗ್ಗೆ ಅಸಡ್ಡೆ ಹೊಂದಿದ್ದಲ್ಲಿ ನಷ್ಟ ಅಥವಾ ಕಳ್ಳತನ ಆಗಬಹುದು. ವೈವಾಹಿಕ ಜೀವನವು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ, ಮತ್ತು ನೀವು ಇಂದು ಅವೆಲ್ಲವನ್ನೂ ಅನುಭವಿಸುತ್ತೀರಿ.
ಸಿಂಹ ರಾಶಿ
ವಿಶ್ರಾಂತಿ ಪ್ರಮುಖವಾದ ಒಂದು ದಿನ – ಇತ್ತೀಚೆಗೆ ನೀವು ಬಹಳಷ್ಟು ಮಾನಸಿಕ ಒತ್ತಡ ಎದುರಿಸುತ್ತಿದ್ದೀರಿ - ಮನೋಲ್ಲಾಸ ಮತ್ತು ಮನೋರಂಜನೆ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ನೀವು ಕುಟುಂಬದಲ್ಲಿ ಒಂದು ಸಂಧಿಗಾರನಂತೆ ವರ್ತಿಸುತ್ತೀರಿ. ಎಲ್ಲರ ಸಮಸ್ಯೆಗಳಿಗೂ ಕಿವಿಗೊಡಿ ಹಾಗೂ ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಪ್ರತಿ ದಿನ ಪ್ರೀತಿಯಲ್ಲಿ ಬೀಳುವ ನಿಮ್ಮ ಸ್ವಭಾವವನ್ನು ಬದಲಾಯಿಸಿ. ನೀವು ಒಂದು ಹೊಸ ಉದ್ಯಮವನ್ನು ಆರಂಭಿಸುವ ಆಲೋಚನೆ ಹೊಂದಿದ್ದಲ್ಲಿ – ಶೀಘ್ರ ನಿರ್ಧಾರಗಳನ್ನು ಕೈಗೊಳ್ಳಿ - ನಕ್ಷತ್ರಗಳು ನಿಮಗೆ ಅನುಕೂಲಕರವಾಗಿರುವಂತೆ ತೋರುತ್ತವೆ - ನೀವು ಬಯಸಿದ್ದನ್ನು ಮಾಡಲು ಹಿಂಜರಿಯದಿರಿ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ನೀವು ವಿದ್ಯುತ್ ಇಲ್ಲದಿರುವುದರಿಂದ ಅಥವಾ ಬೇರೆ ಯಾವುದೋ ಕಾರಣಕ್ಕಾಗಿ ತಯಾರಾಗಲು ತಡವಾಗಬಹುದು, ಆದರೆ ನಿಮ್ಮ ಸಂಗಾತಿ ನಿಮ್ಮ ನೆರವಿಗೆ ಬರುತ್ತಾರೆ.
ಕನ್ಯಾ ರಾಶಿ
ನೀವು ಬಹುಕಾಲದಿಂದ ಎದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಶಮನ ಪಡೆಯುತ್ತೀರಿ. ಅವುಗಳನ್ನು ಶಾಶ್ವತವಾಗಿ ದೂರವಿಸಿರಿಸಲು ನಿಮ್ಮ ಜೀವನಶೈಲಿಯನ್ನು ಬದಲಿಸಲು ಇದು ಸರಿಯಾದ ಸಮಯ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡುತ್ತದೆ. ಪ್ರೇಮ ವೈಫಲ್ಯದ ನೋವಿಗೆ ಇವತ್ತು ನಿದ್ರಿಸಲು ಸಾಧ್ಯವಾಗುವುದಿಲ್ಲ. ನೀವು ಕೆಲಸದಲ್ಲಿ ದಿನವಿಡೀ ಆಫ್ ಆಗಿರಬಹುದು, ಇದು ನಿಮ್ಮ ಕೆಲಸದ ಗುಣಮಟ್ಟವನ್ನು ಹಾಳುಮಾಡಬಹುದು. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಇಂದು ಮೆನೆಕೆಲಸದವರು ಬರದಿರಬಹುದು ಹಾಗೂ ಇದು ನಿಮ್ಮ ಸಂಗಾತಿಯ ಜೊತೆ ಒತ್ತಡವನ್ನು ಉಂಟುಮಾಡಬಹುದು.
ತುಲಾ ರಾಶಿ
ನಿಮ್ಮ ಒತ್ತಡ ನಿವಾರಿಸಲು ಕುಟುಂಬದ ಸದಸ್ಯರ ಬೆಂಬಲ ಪಡೆಯಿರಿ. ಅವರ ಸಹಾಯವನ್ನು ಗೌರವದಿಂದ ಸ್ವೀಕರಿಸಿ. ನೀವು ಭಾವನೆಗಳು ಮತ್ತು ಒತ್ತಡಗಳನ್ನು ಒಳಗೆ ಅದುಮಿಡಬಾರದು. ಆಗಾಗ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದು ಸಹಾಯ ಮಾಡುತ್ತದೆ. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ಒಟ್ಟಾರೆ ಒಂದು ಲಾಭದಾಯಕ ದಿನವಾದರೂ ನೀವು ನಿರಾಸೆ ಭರವಸೆಯಿಡಬಹುದಾದ ಯಾರಾದರೂ ನಿಮ್ಮನ್ನು ನಿರಾಸೆಗೊಳಿಸುತ್ತಾರೆ. ಇದನ್ನು ಒಂದು ವಿಶೇಷ ದಿನವಾಗಿಸಲು ದಯೆ ಮತ್ತು ಪ್ರೀತಿಯ ಸಣ್ಣ ತುಣುಕುಗಳನ್ನು ನೀಡಿ. ವ್ಯಾಪಾರ ಸಹವರ್ತಿಗಳು ಬೆಂಬಲ ನೀಡುತ್ತಾರೆ ಮತ್ತು ನೀವು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಲು ಒಟ್ಟಿಗೆ ಕೆಲಸ ಮಾಡುತ್ತೀರಿ. ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಇಂದು ಅದ್ಭುತ ಸುದ್ದಿ ಸಿಗುತ್ತವೆ.
ವೃಶ್ಚಿಕ ರಾಶಿ
ಇಂದು ಪ್ರಯಾಣ ಮಾಡುವುದು ಕೇವಲ ಒತ್ತಡ ಮತ್ತು ಆತಂಕವನ್ನು ತರುವುದರಿಂದ ಅದನ್ನು ತಪ್ಪಿಸಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಅನಿರೀಕ್ಷಿತ ಪ್ರಣಯ ಪ್ರಸಂಗಗಳು ನಿಮ್ಮ ಚೈತನ್ಯವನ್ನು ವೃದ್ಧಿಸುತ್ತದೆ. ನಿಮ್ಮ ಶ್ರಮ ಕೆಲಸದಲ್ಲಿ ಇಂದು ಫಲ ನೀಡುತ್ತದೆ. ಇಂದು ನೀವು ನಿಜವಾಗಿಯೂ ಲಾಭ ಪಡೆಯಬಯಸಿದರೆ – ಇತರರು ನೀಡಿದ ಸಲಹೆಯನ್ನು ಕೇಳಿ. ನಿಮ್ಮ ಸಂಗಾತಿ ನಿಮ್ಮ ಹೃದಯವನ್ನು ಆಲಿಸಲು ನಿಮಗೆ ಸಮಯ ಸಾಕಷ್ಟು ನೀಡುತ್ತಾರೆ.
ಧನು ರಾಶಿ
ನಿಮ್ಮ ಪ್ರಚಂಡ ಪ್ರಯತ್ನ ಹಾಗೂ ಕುಟುಂಬದ ಸದಸ್ಯರ ಸಕಾಲಿಕ ಬೆಂಬಲ ಬಯಸಿದ ಫಲಿತಾಂಶಗಳು ತರುತ್ತದೆ. ಆದರೆ ಪ್ರಸ್ತುತ ಚೇತನವನ್ನು ಕಾಯ್ದುಕೊಳ್ಳಲು ಶ್ರಮಿಸುತ್ತಿರಿ. ದಿನದಲ್ಲಿ ನಂತರ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ಕುಟುಂಬದ ಸದಸ್ಯರ ಖುಷಿಯ ಸ್ವಭಾವ ಮನೆಯಲ್ಲಿನ ವಾತಾವರಣವನ್ನು ಹಗುರಗೊಳಿಸುತ್ತದೆ. ತಪ್ಪು ಸಂವಹನೆ ಅಥವಾ ಒಂದು ಸಂದೇಶ ನಿಮ್ಮ ದಿನವನ್ನು ಅವರಿಸಬಹುದು. ಇಂದು ನಿಮಗೆಲ್ಲರಿಗೂ ತುಂಬ ಸಕ್ರಿಯವಾದ ಮತ್ತು ಹೆಚ್ಚು ಸಾಮಾಜಿಕವಾದ – ಜನರು ನಿಮ್ಮಿಂದ ಸಲಹೆ ಪಡೆಯಬಯಸುತ್ತಾರೆ ಮತ್ತು ನೀವು ಏನೇ ಹೇಳಿದರೂ ಅದನ್ನು ಒಪ್ಪುತ್ತಾರೆ. ನೀವು ಒಂದು ವಾದದಲ್ಲಿ ಸಿಲುಕಿಕೊಂಡಲ್ಲಿ ಕಠಿಣ ಮಾತುಗಳನ್ನಾಡದಂತೆ ಎಚ್ಚರಿಕೆ ವಹಿಸಿ. ಜನರ ಹಸ್ತಕ್ಷೇಪ ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧಕ್ಕೆ ಇಂದು ಧಕ್ಕೆ ತರಬಹುದು.
ಮಕರ ರಾಶಿ
ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ನೀವು ನಿಮ್ಮ ಹೂಡಿಕೆಗಳನ್ನು ಸಂಪ್ರದಾಯಬದ್ಧವಾಗಿ ಉಳಿತಾಯ ಮಾಡಿದರೆ ಹಣ ಮಾಡುತ್ತೀರಿ. ಮಕ್ಕಳ ಮೇಲೆ ನಿಮ್ಮ ಅಭಿಪ್ರಾಯ ಹೇರುವುದು ಅವರಿಗೆ ಕೋಪ ತರಿಸಬಹುದು. ಅವರು ಅದನ್ನು ಸ್ವೀಕರಿಸಬೇಕೆಂದಲ್ಲಿ ಅವರಿಗೆ ಅದನ್ನು ಅರ್ಥ ಮಾಡಿಸುವುದು ಒಳ್ಳೆಯದು. ಇಂದು ನಿಮ್ಮ ಪ್ರೇಮಿಯನ್ನು ನಿರಾಸೆಗೊಳಿಸಬೇಡಿ – ಇದು ನಂತರ ನಿಮ್ಮನ್ನು ಪಶ್ಚಾತ್ತಾಪಗೊಳ್ಳುವಂತೆ ಮಾಡುತ್ತದೆ. ಸ್ನೇಹಿತರು ಮುಖ್ಯ, ಆದರೆ ನೀವು ಕಠಿಣವಾದ ಕೆಲಸದ ದಿನವನ್ನು ಇಂದು ಹೊಂದಲಿರುವುದರಿಂದ ಇಂದು ನಿಮ್ಮ ಸ್ಟೇಟಸ್ ಅನ್ನು "ಬ್ಯುಸಿ" ಎಂದಿಡಿ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ಇಂದು ನಿಮ್ಮ ಜೀವನ ಸಂಗಾತಿಯ ವಟಗುಟ್ಟುವಿಕೆಯಿಂದಾಗಿ ನಿಮಗೆ ಸಿಟ್ಟು ಬರಬಹುದು, ಆದರೆ ಅವನು / ಅವಳು ನಿಮಗೆ ನಿಜವಾಗಿಯೂ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ.
ಕುಂಭ ರಾಶಿ
ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ. ಸ್ವಲ್ಪ್ ಹೆಚ್ಚು ಹಣ ಮಾಡಲು ನಿಮ್ಮ ನವೀನ ಕಲ್ಪನೆಯನ್ನು ಬಳಸಿ. ಮನೆಯಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ನಿಮ್ಮ ಹಿರಿಯರ ಸಲಹೆ ತೆಗೆದುಕೊಳ್ಳಿ ಇಲ್ಲವಾದರೆ ಅದು ಅವರಿಗೆ ಕೋಪ ಮತ್ತು ಅಸಮಾಧಾನವನ್ನು ತರಬಹುದು. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ನೀವು ನಿಮ್ಮ ಫಾರ್ಮ್‌ನಲ್ಲಿದಿದ್ದರಿಂದ ನಿಮ್ಮ ಮೇಲಿನವರು ನಿಮ್ಮ ಜೊತೆ ಇಂದು ತಂಬಾ ಕಠಿಣವಾಗಿ ವರ್ತಿಸುತ್ತಿದ್ದಾರೆಂದು ನೀವು ಅಂದುಕೊಳ್ಳಬಹುದು. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಇಂದು, ನೀವು ನಿಮ್ಮ ಸಂಗಾತಿಯ ಜೊತೆಗೆ ನಿಮ್ಮ ಜೀವನದ ಅತ್ಯುತ್ತಮ ಸಂಜೆಯನ್ನು ಕಳೆಯುತ್ತೀರಿ.
ಮೀನ ರಾಶಿ
ವಿಶೇಷವಾಗಿ ಹೊರಗಿಟ್ಟ ಆಹಾರ ತಿನ್ನುವಾಗ ವಿಶೇಷ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆದರೆ ಅನಗತ್ಯ ಒತ್ತಡ ಕೇವಲ ನಿಮಗೆ ಮಾನಸಿಕ ಉದ್ವೇಗ ಉಂಟುಮಾಡುತ್ತದೆ. ಊಹೆ ಅಪಾಯಕಾರಿಯಾಗುತ್ತದೆ - ಆದ್ದರಿಂದ ಎಲ್ಲಾ ಹೂಡಿಕೆಗಳನ್ನು ಅತ್ಯಂತ ಎಚ್ಚರಿಕೆಯಿಂದ ಮಾಡಬೇಕು. ನಿಮ್ಮ ಹೆತ್ತವರೆದುರಿಗೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗದಿರುವುದರಿಂದ ನಿಮ್ಮನ್ನು ಇಂದು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ. ನೀವು ಅದನ್ನು ಸರಿಯಾಗಿ ತಿಳಿಸುತ್ತೀರೆಂದು ಖಚಿತಪಡಿಸಿಕೊಳ್ಳಿ. ಶ್ರಮಪಡಿ, ಇದು ನಿಮ್ಮ ದಿನವಾದ್ದರಿಂದ ನೀವು ಖಂಡಿತವಾಗಿಯೂ ಅದೃಷ್ಟಶಾಲಿಯಾಗಿರುತ್ತೀರಿ. ನಿಮ್ಮ ಸ್ಪರ್ಧಾತ್ಮಕ ಸ್ವಭಾವ ನೀವು ಸದಾ ಮುಂದೆ ಉಳಿಯಲು ಸಹಾಯ ಮಾಡುತ್ತದೆ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ಇಂದು, ನಿಮ್ಮ ಮದುವೆ ಎಂದಿಗೂ ಇಷ್ಟೊಂದು ಸುಂದರವಾಗಿರಲಿಲ್ಲ ಎಂದು ನಿಮಗೆ ಅರಿವಾಗುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here