ಕಳೆದ
ಎರಡು ತಿಂಗಳಿನಿಂದ ಎಡಬಿಡದೆ ಸುರಿದು ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ
ನಾನಾ ಕಡೆ ಬಾರಿ ಅವಾಂತರಕ್ಕೆ ಕಾರಣವಾಗಿದ್ದು ವರುಣ ರಾಯ ಸ್ವಲ್ಪ ಬಿಡುವು ಮಾಡಿಕೊಂಡು
ಮತ್ತೆ ಬರಲಿದ್ದಾನಂತೆ.
ಹೌದು, ಅ.26 ರಂದು
ರಾಜ್ಯಕ್ಕೆ ಹಿಂಗಾರು ಪ್ರವೇಶಿಸಲಿದ್ದು, ಅ.28 ಹಾಗೂ ಅ.29 ರಂದು ನಗರದಲ್ಲಿ ಮಳೆ ಬರುವ
ಸಾಧ್ಯತೆಯಿದೆ ಎನ್ನಲಾಗಿದ್ದು ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ
ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
"ಬಂಗಾಳಕೊಲ್ಲಿಯ ಆಂಧ್ರ ಹಾಗೂ ಒಡಿಶಾ
ತೀರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ನೈಋುತ್ಯ ಮುಂಗಾರು ಇನ್ನೂ ನಿರ್ಗಮಿಸಿಲ್ಲ.
ಹೀಗಾಗಿ ಮುಂಗಾರು ಹೋಗದೆ ಹಿಂಗಾರಿಗೆ ಅನುಕೂಲಕರ ವ್ಯವಸ್ಥೆ ಸೃಷ್ಟಿಯಾಗಲು ಸಾಧ್ಯವಿಲ್ಲ.
ಸಾಮಾನ್ಯವಾಗಿ ಹಿಂಗಾರು ಬಂದ ಎರಡು ದಿನಗಳ ಬಳಿಕ ಮಳೆಯಾಗುತ್ತದೆಯಂತೆ.
ಒಟ್ಟಿನಲ್ಲಿ ಅ.26 ರಿಂದ ಕನಿಷ್ಟ ಪಕ್ಷ ಅ.31ರ ತನಕ ರಾಜ್ಯದ ಜನತೆ ಮಳೆಯಿಂದ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೆ ಒಳಿತು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ