ಭವಿಷ್ಯ 20-10-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಅಕ್ಟೋಬರ್ 19, 2017

ಭವಿಷ್ಯ 20-10-2017

ಭವಿಷ್ಯ
ಮೇಷ ರಾಶಿ
ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ಕುಟುಂಬದಲ್ಲಿ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಬದಲಾಯಿಸಿಕೊಳ್ಳಲು ಇದು ಒಳ್ಳೆಯ ಸಮಯ. ಜೀವನದ ಏಳುಬೀಳುಗಳನ್ನು ಹಂಚಿಕೊಳ್ಳಲು ಅವರ ಸಹಕಾರದೊಂದಿಗೆ ಕೆಲಸ ಮಾಡಿ. ನಿಮ್ಮ ಬದಲಾದ ಧೋರಣೆ ಅವರಿಗೆ ಅನಿಯಮಿತ ಆನಂದ ನೀಡುತ್ತದೆ. ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮಾತ್ರ ನೀವು ನಿಮ್ಮ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡಬಹುದು. ಇಂದು ನಿಮ್ಮ ಕೆಲಸದಲ್ಲಿ ನಿಮ್ಮ ಉತ್ತಮ ಕಾರ್ಯಗಳಿಗಾಗಿ ನಿಮ್ಮನ್ನು ಸನ್ಮಾನಿಸಲಾಗುವುದು. ಘಟನೆಗಳು ಉತ್ತಮ ಮತ್ತು ಗೊಂದಲಮಯವಾಗಿರುವ ಒಂದು ದಿನ – ಇದು ನಿಮ್ಮನ್ನು ದಣಿವು ಹಾಗೂ ಗೊಂದಲದಲ್ಲಿರಿಸುತ್ತದೆ. ಈ ದಿನ ನಿಮ್ಮ ಜೀವನದ ವಸಂತದ ಹಾಗೆ; ಪ್ರೀತಿಪೂರ್ಣ, ಇಲ್ಲಿ ಕೇವಲ ನೀವು ಮತ್ತು ನಿಮ್ಮ ಸಂಗಾತಿ ಮಾತ್ರವಿರುತ್ತೀರಿ.
ವೃಷಭ ರಾಶಿ
ನಿಮ್ಮ ಮಗುವಿನ ಸಾಧನೆ ನಿಮಗೆ ಅಪಾರ ಸಂತೋಷ ನೀಡಬಹುದು. ಯಶಸ್ಸಿಗೆ ಇಂದಿನ ಸೂತ್ರವೆಂದರೆ ನಾವೀನ್ಯತೆಯಿರವ ಮತ್ತು ಉತ್ತಮ ಅನುಭವ ಹೊಂದಿರುವ ಜನರ ಸಲಹೆಯಂತೆ ನಿಮ್ಮ ಹಣವನ್ನು ಹೂಡುವುದಾಗಿದೆ. ದಿನದ ಉತ್ತರಾರ್ಧದಲ್ಲಿ ಅತ್ಯಾಕರ್ಷಕ ಮತ್ತು ಮನರಂಜನೆಯ ಏನನ್ನಾದರೂ ಹೊಂದಿಸಿ. ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ. ಚೆನ್ನಾಗಿ ಅರ್ಥಮಾಡಿಕೊಳ್ಳದೇ ಯಾವುದೇ ವ್ಯಾಪಾರ / ಕಾನೂನುಬದ್ಧ ಕಡತಕ್ಕೆ ಸಹಿ ಮಾಡಬೇಡಿ. ನೀವೇನಾದರೂ ಮೋಸದ್ದನ್ನು ಮಾಡಿದಲ್ಲಿ ಅಧಿಕಾರಿಗಳು ನಿಮ್ಮನ್ನು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಕಡಿಮೆಯಿರುವುದರಿಂದ ನಿಮ್ಮ ಕಾರ್ಯಗಳು ಹಾಗೂ ಮಾತುಗಳ ಬಗ್ಗೆ ಎಚ್ಚರವಿರಲಿ. ನಿಮ್ಮ ಸಂಗಾತಿ ಇಂದು ಅವರ ದೈವೀಕ ಬದಿಯನ್ನು ನಿಮಗೆ ತೋರಿಸುತ್ತಾರೆ.
ಮಿಥುನ ರಾಶಿ
ನಿಮ್ಮ ಒತ್ತಡವನ್ನು ನೀವು ತೊಡೆದುಹಾಕಬಹುದು. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ನಿಮ್ಮ ಸಂತೋಷವನ್ನು ನಿಮ್ಮ ಪೋಷಕರ ಜೊತೆ ಹಂಚಿಕೊಳ್ಳಿ. ಒಂಟಿತನ ಮತ್ತು ಖಿನ್ನತೆಯ ಭಾವನೆ ಅಳಿಸಿಹಾಕಿ ಅವರಿಗೆ ತಾವು ಅಮೂಲ್ಯವೆಂದು ಭಾವನೆ ಬರುವ ಹಾಗೆ ಮಾಡಿ. ನಾವು ಒಬ್ಬರು ಇನ್ನೊಬ್ಬರಿಗೆ ಜೀವನವನ್ನು ಕಡಿಮೆ ಕಷ್ಟಗೊಳಿಸದಿದ್ದಲ್ಲಿ ನಾವು ಬದುಕುವುದಾದರೂ ಏಕೆ. ಪ್ರಣಯಕ್ಕೆ ಒಳ್ಳೆಯ ದಿನ. ಸೃಜನಶೀಲ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಒಂದು ಯಶಸ್ವಿ ದಿನ. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ - ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ಇಂದು, ನೀವು ನಿಮ್ಮ ಅರ್ಧಾಂಗಿಗೆ ಎಷ್ಟು ಮುಖ್ಯವೆಂದು ನಿಮಗೆ ಅರಿವಾಗುತ್ತದೆ.
ಕರ್ಕ ರಾಶಿ
ನಿಮ್ಮ ಒರಟು ವರ್ತನೆ ನಿಮ್ಮ ಪತ್ನಿಯೊಂದಿಗಿನ ಸಂಬಂಧವನ್ನು ಹಾಳು ಮಾಡಬಹುದು. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಸಾಧ್ಯವಾದಲ್ಲಿ ದೂರ ಹೋಗಿ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿ. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಿದರೂ ಹಣದ ಹೊರಹರಿವು ನಿಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ತೊಂದರೆಯುಂಟುಮಾಡುತ್ತದೆ. ಯುವಕರು ಶಾಲಾ ಯೋಜನೆಗಳಲ್ಲಿ ಕೆಲವು ಸಲಹೆ ಪಡೆಯಬಹುದು. ಪ್ರೇಮ ಜೀವನ ಸ್ವಲ್ಪ ಕಠಿಣವಾಗಿರಬಹುದು. ನೀವು ಇಂದು ಕೆಲಸದಲ್ಲಿ ಓರ್ವ ಅದ್ಭುತ ವ್ಯಕ್ತಿಯನ್ನು ಭೇಟಿಯಾಗಬಹುದು. ಇತರರನ್ನು ಒಪ್ಪಿಸುವ ನಿಮ್ಮ ಸಾಮರ್ಥ್ಯ ನಿಮಗೆ ಸಮೃದ್ಧ ಲಾಭ ತಂದುಕೊಡುತ್ತದೆ. ನಿಮ್ಮ ಸಂಗಾತಿಯ ಒರಟುತನ ದಿನವಿಡೀ ನಿಮ್ಮನ್ನು ಅಸಮಾಧಾನಗೊಳಿಸಬಹುದು.
ಸಿಂಹ ರಾಶಿ
ಆರೋಗ್ಯ ಚೆನ್ನಾಗಿರುತ್ತದೆ. ನೀವು ಅತ್ಯಂತ ಅನಿರೀಕ್ಷಿತ ಮೂಲಗಳಿಂದ ಗಳಿಕೆಯ ಸಾಧ್ಯತೆಯನ್ನು ಹೊಂದಿದ್ದೀರಿ. ಸಂಬಂಧಿಗಳು ನಿಮ್ಮ ದುಃಖ ಹಂಚಿಕೊಳ್ಳುತ್ತಾರೆ. ಅವರೊಂದಿಗೆ ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನೀವು ಖಂಡಿತವಾಗಿಯೂ ಅವುಗಳನ್ನು ಬಗೆಹರಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರ ಅತೃಪ್ತಿಗೆ ನಿಮ್ಮ ನಗು ನಿಮ್ಮ ಅತ್ಯುತ್ತಮ ಔಷಧವಾಗಿದೆ. ಕೆಲವು ಸಹ ಕಾರ್ಮಿಕರು ಕೆಲವು ಪ್ರಮುಖ ಸಮಸ್ಯೆಗಳನ್ನು ನಿಭಾಯಿಸುವ ನಿಮ್ಮ ವಿಧಾನವನ್ನು ಇಷ್ಟಪಡದಿರಬಹುದು – ಆದರೆ ಅದನ್ನು ನಿಮಗೆ ಹೇಳದಿರಬಹುದು – ನೀವು ಫಲಿತಾಂಶಗಳು ನೀವು ನಿರೀಕ್ಷಿಸಿದಷ್ಟು ಉತ್ತಮವಾಗಿಲ್ಲವೆಂದು ಭಾವಿಸಿದಲ್ಲಿ - ನಿಮ್ಮ ಯೋಜನೆಗಳನ್ನು ವಿಮರ್ಶಿಸಿ ಅವುಗಳನ್ನು ಬದಲಿಸುವದು ಬುದ್ಧಿವಂತಿಕೆಯಾಗಬಹುದು. ನೀವು ಸಹಾಯಕ್ಕಾಗಿ ನಿಮ್ಮ ಬಳಿ ಬರುವ ಜನರಿಗೆ ಬದ್ಧತೆ ನೀಡುತ್ತೀರಿ. ಮದುವೆ ಮೊದಲೆಂದೂ ಇಂದಿಗಿಂತ ಹೆಚ್ಚು ಅದ್ಭುತವಾಗಿರಲಿಲ್ಲ.
ಕನ್ಯಾ ರಾಶಿ
ನಿಮ್ಮ ಅನಾರೋಗ್ಯದ ಬಗ್ಗೆ ಚರ್ಚಿಸುವುದನ್ನು ತಪ್ಪಿಸಿ. ನಿಮ್ಮ ಕಾಯಿಲೆಯ ಬಗ್ಗೆ ಹೆಚ್ಚು ಮಾತನಾಡಿದಷ್ಟೂ ಅದು ಇನ್ನೂ ಉಲ್ಬಣಗೊಳ್ಳುವುದರಿಂದ ನಿಮ್ಮ ಗಮನವನ್ನು ಬೇರೆಡೆಗೆ ಕಾಯಿಲೆಯಿಂದ ತಿರುಗಿಸಲು ಏನಾದರೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ನಿಮಗೆ ಆಶ್ಚರ್ಯವಾಗುವ ಹಾಗೆ ನಿಮ್ಮ ಸಹೋದರ ನಿಮ್ಮನ್ನು ಪಾರು ಮಾಡುತ್ತಾರೆ. ನೀವು ಒಬ್ಬರೊಬ್ಬರನ್ನು ಸಂತೋಷವಾಗಿಡಲು ಒಟ್ಟೊಟ್ಟಿಗೆ ಕೆಲಸ ಮಾಡಬೇಕು. ಸಹಕಾರ ಜೀವನದ ಮುಖ್ಯ ಚಿಲುಮೆಯೆಂದು ನೆನಪಿಡಿ ಪ್ರೀತಿಯಲ್ಲಿ ಒಂದು ಅವಸರದ ಹೆಜ್ಜೆಯನ್ನು ತಪ್ಪಿಸಿ. ನೀವು ಕೆಲಸದಲ್ಲಿ ಇಂದು ವಿಶೇಷವಾಗಿದ್ದೀರೆಂದು ನಿಮಗನ್ನಿಸುತ್ತದೆ. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ. ನಿಮ್ಮ ಸಂಬಂಧಿಕರು ಇಂದು ನಿಮ್ಮ ವೈವಾಹಿಕ ಜೀವನದ ಆನಂದಕ್ಕೆ ಭಂಗ ತರಬಹುದು.
ತುಲಾ ರಾಶಿ
ನೀವು ಚೈತನ್ಯದಿಂದ ತುಂಬಿರುತ್ತೀರಿ ಮತ್ತು ಇಂದು ಅಸಾಮಾನ್ಯವಾದದ್ದೇನಾದರೂ ಸಾಧಿಸುತ್ತೀರಿ. ನಿಮ್ಮ ಖರ್ಚುಗಳು ನಿಮ್ಮ ಬಜೆಟ್ ಅನ್ನು ಮೀರಬಹುದು ಹಾಗೂ ಅನೇಕ ಪ್ರಗತಿಯಲ್ಲಿರುವ ಯೋಜನೆಗಳನ್ನು ಹಠಾತ್ತನೆ ಸ್ಥಗಿತಗೊಳಿಸಬಹುದು. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ನಿಮ್ಮ ನಗು ಯಾವುದೇ ಅರ್ಥ ಹೊಂದಿಲ್ಲ – ನಗುವಿಗೆ ಧ್ವನಿಯಿಲ್ಲ – ನಿಮ್ಮ ಸಂಗವಿಲ್ಲದಿದ್ದಾಗ ಹೃದಯ ಬಡಿಯುವುದನ್ನು ಮರೆಯುತ್ತದೆ. ನೀವು ಬಡ್ತಿ ಪಡೆಯುವ ಸಾಧ್ಯತೆಯಿರುವುದರಿಂದ ನಿಮ್ಮ ಶ್ರಮವನ್ನು ಪ್ರಶಂಸಿಸಲಾಗುತ್ತದೆ. ಹಣಕಾಸಿನ ಲಾಭದ ಬಗ್ಗೆ ಯೋಚಿಸಬೇಡಿ, ಏಕೆಂದರೆ ದೀರ್ಘಾವಧಿಯಲ್ಲಿ ಇದು ನಿಮಗೇ ಲಾಭ ತರುತ್ತದೆ. ನಿಮ್ಮ ಸಂವಹನ ತಂತ್ರಗಳು ಮತ್ತು ಕೆಲಸದ ಕೌಶಲಗಳು ಪರಿಣಾಮಕಾರಿಯಾಗಿರುತ್ತವೆ. ನಿಮ್ಮ ಸಂಗಾತಿಯು ಇಂದು ನಿಮ್ಮ ಅಗತ್ಯಗಳನ್ನು ಅಂತಿಮವಾಗಿ ಪೂರೈಸಲು ನಿರಾಕರಿಸಬಹುದು ಹಾಗೂ ಇದು ಅಂತಿಮವಾಗಿ ನಿಮ್ಮನ್ನು ನಿರಾಶೆಗೊಳಿಸುತ್ತದೆ.
ವೃಶ್ಚಿಕ ರಾಶಿ
ಒಟ್ಟಾರೆ ಆರೋಗ್ಯ ಉತ್ತಮವಾಗಿದ್ದರೂ ಪ್ರಯಾಣ ಒತ್ತಡಮಯವೂ ಮತ್ತು ಕಷ್ಟಕರವೂ ಆಗಿರುತ್ತದೆ. ಬ್ಯಾಂಕ್ ವ್ಯವಹರಗಳಲ್ಲಿ ಕಾಳಜಿ ವಹಿಸಬೇಕು. ನೆರೆಮನೆಯವರ ಜೊತಗಿನ ಜಗಳ ನಿಮ್ಮ ಮನಸ್ಸು ಕೆಡಿಸುತ್ತದೆ. ಆದರೆ ನಿಮ್ಮ ಸಹನೆ ಕಳೆದುಕೊಳ್ಳಬೇಡಿ, ಏಕೆಂದರೆ ಇದು ಬೆಂಕಿಗೆ ತುಪ್ಪ ಸುರಿಯುತ್ತದೆ. ನೀವು ಸಹಕರಿಸದಿದ್ದಲ್ಲಿ ಯಾರೂ ನಿಮ್ಮ ಜೊತ ಜಗಳ ಮಾಡಲು ಸಾಧ್ಯವಿಲ್ಲ. ಒಳ್ಳೆಯ ಬಾಂಧವ್ಯ ಇಟ್ಟುಕೊಳ್ಳಲು ಶ್ರಮಿಸಿ. ಏಕಪಕ್ಷೀಯ ವ್ಯಾಮೋಹ ನಿಮ್ಮ ಸಂತೋಷವನ್ನು ಹಾಳುಮಾಡುತ್ತದೆ. ಕೆಲಸದಲ್ಲಿನ ಒತ್ತಡ ಇಂದು ಆಯಾಸ ಉಂಟುಮಾಡಬಹುದು. ನಿರ್ಲಕ್ಷಿಸಲು ಪ್ರಯತ್ನಿಸಿ. ಒಳ್ಳೆಯ ದಿನ ಕಾನೂನು ಸಲಹೆ ಪಡೆಯಲು ವಕೀಲರನ್ನು ಭೇಟಿ ಮಾಡಿ. ಈ ದಿನ ನಿಮ್ಮ ಸಂಗಾತಿಗೆ ಬೇಸರವಾಗಿ ನಿಮ್ಮ ಸಂಬಂಧದ ಬೆಚ್ಚಗಿನ ಭಾವ ಹೋಗಬಹುದು.
ಧನು ರಾಶಿ
ನೀವು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿರದಿದ್ದಲ್ಲಿ ನಿಮಗೆ ತುಂಬಾ ದಣಿವಾದಂತೆನಿಸುತ್ತದೆ ಮತ್ತು ನಿಮಗೆ ಅಧಿಕ ವಿಶ್ರಾಂತಿ ಬೇಕಾಗುತ್ತದೆ. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಭೇಟಿ ನೀಡುವ ಅತಿಥಿಗಳು ನಿಮ್ಮ ಸಂಜೆಯನ್ನು ಆಕ್ರಮಿಸಿಕೊಳ್ಳಬಹುದು. ನೀವು ಇಂದು ಪ್ರೀತಿಯ ಸಮೃದ್ಧ ಚಾಕೊಲೇಟ್‌ನ ರುಚಿ ಸವಿಯುತ್ತೀರಿ. ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಆದರೆ ನೀವು ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು. ನೀವು ಹಾನಿಯುಂಟುಮಾಡಿದವರಲ್ಲಿ ನೀವು ಕ್ಷಮೆಯಾಚಿಸಬೇಕು. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ ಆದರೆ ಮೂರ್ಖರು ಮಾತ್ರ ಅದನ್ನು ಪುನರಾವರ್ತಿಸುತ್ತಾರೆನ್ನುವುದನ್ನು ನೆನಪಿಡಿ. ಪ್ರಯಾಣ ತಕ್ಷಣದ ಫಲಿತಾಂಶಗಳು ತರದಿದ್ದರೂ ಭವಿಷ್ಯದ ಪ್ರಯೋಜನಗಳಿಗೆ ಉತ್ತಮ ಅಡಿಪಾಯ ಹಾಕುತ್ತದೆ. ನಿಮ್ಮ ಜೀವನದ ಸಂಗಾತಿಯ ಆಂತರಿಕ ಸೌಂದರ್ಯ ಇಂದು ಎದ್ದು ಕಾಣುತ್ತದೆ.
ಮಕರ ರಾಶಿ
ನಿಮ್ಮ ಕೆಟ್ಟ ಚಟಗಳು ನಿಮ್ಮನ್ನು ನಾಶಗೊಳಿಸುತ್ತವೆ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ - ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ಕುಟುಂಬದ ರಹಸ್ಯ ಸುದ್ದಿ ನಿಮಗೆ ಅಚ್ಚರಿ ನೀಡಬಹುದು. ಪ್ರಣಯ ಮತ್ತು ಸಾಮಾಜಿಕವಾಗಿ ಬೆರೆಯುವುದು ಬಾಕಿಯಿರುವ ಕೆಲಸಗಳ ಹೊರತಾಗಿಯೂ ನಿಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಇಂದು ಕೆಲಸದಲ್ಲಿ ನಿಮಗೆ ನಿಜಕ್ಕೂ ಒಳ್ಳೆಯದಾಗಬಹುದು, ಇಂದು ನಿಮ್ಮನ್ನು ದ್ವೇಷಿಸುವವರಿಗೆ "ಹಲೋ" ಎಂದಲ್ಲಿ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ಇಂದು ನೀವು ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.
ಕುಂಭ ರಾಶಿ
ನಿಮ್ಮ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ನೆನಪಿಡಿ, ಬದುಕಿನ ರಕ್ಷಣೆ ನಿಜವಾದ ಆಣೆ. ನೀವು ನಿಮ್ಮ ಹೂಡಿಕೆಗಳನ್ನು ಸಂಪ್ರದಾಯಬದ್ಧವಾಗಿ ಉಳಿತಾಯ ಮಾಡಿದರೆ ಹಣ ಮಾಡುತ್ತೀರಿ. ನಿಮ್ಮ ವಂಶಸ್ಥರಿಗೆ ಏನಾದರೂ ವಿಶೇಷವಾದದ್ದನ್ನು ಯೋಜಿಸಿ. ನಿಮಗೆ ಕಾರ್ಯಗತಗೊಳಿಸಲು / ಸಾಧಿಸಲು ಸಾಧ್ಯವಾಗುವ ಹಾಗೆ ಏನಾದರೂ ವಾಸ್ತವವಾದದ್ದನ್ನು ಯೋಜಿಸಿ. ನಿಮ್ಮ ಮುಂದಿನ ಪೀಳಿಗೆ ಈ ಕೊಡುಗೆಗಾಗಿ ನಿಮ್ಮನ್ನು ಯಾವತ್ತೂ ನೆನಪಿಡುತ್ತದೆ. ನಿಮ್ಮ ಪ್ರೀತಿಪಾತ್ರರಿಗೆ ಒರಟಾಗಿ ಏನೂ ಹೇಳಬೇಡಿ-ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪಪಡಬಹುದು. ಇಂದು ನಿಮ್ಮ ಕೆಲಸದಲ್ಲಿ ನಿಮ್ಮ ಉತ್ತಮ ಕಾರ್ಯಗಳಿಗಾಗಿ ನಿಮ್ಮನ್ನು ಸನ್ಮಾನಿಸಲಾಗುವುದು. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಕೆಲವು ಕೆಲಸಗಳಿಗೆ ನಿಮ್ಮ ಸಂಗಾತಿಯ ಹಾಳಾದ ಆರೋಗ್ಯದಿಂದಾಗಿ ಇಂದು ಅಡ್ಡಿಯಾಗಬಹುದು.
ಮೀನ ರಾಶಿ
ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ. ನೀವು ಸ್ವಲ್ಪ ಹೆಚ್ಚುವರಿ ಹಣ ಮಾಡಲು ಯೋಜಿಸುತ್ತದ್ದಲ್ಲಿ ಸುಭದ್ರ ಆರ್ಥಿಕ ಯೋಜನೆಗಳಲ್ಲಿ ಹೂಡಿಕೆ ಮಾಡಿ. ನೀವು ಶಾಂತಿ ಕಾಪಾಡಲು ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಲು ನಿಮ್ಮ ಕೋಪವನ್ನು ಮೆಟ್ಟಿ ನಿಲ್ಲಬೇಕು ಪ್ರೇಮದಲ್ಲಿ ಗುಲಾಮರಂತೆ ವರ್ತಿಸಬೇಡಿ. ಹಗಲುಗನಸು ನಿಮ್ಮ ಪತನಕ್ಕೆ ಕಾರಣವಾಗುತ್ತದೆ - ಇತರರು ನಿಮ್ಮ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ. ಅನ್ಯಮೂಲದ ಸುದ್ದಿಯನ್ನು ಪರಿಶೀಲಿಸಬೇಕು. ನಿಮ್ಮ ಸಂಗಾತಿ ನಿಮ್ಮ ಒತ್ತಡದ ಕಾರ್ಯಬಾಹುಳ್ಯದಿಂದಾಗಿ ನಿಮ್ಮ ನಿಷ್ಠೆಯ ಮೇಲೆ ಅನುಮಾನ ಪಡಬಹುದು, ಆದರೆ ದಿನದ ಕೊನೆಯಲ್ಲಿ ಅವರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಿಮ್ಮನ್ನು ಆಲಂಗಿಸುತ್ತಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here