ಪೊಲೀಸ್ ಪ್ರಮಾದ : 15 ವರ್ಷ ಜೈಲುವಾಸ ಅನುಭವಿಸಿದ ಯುವಕ... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶನಿವಾರ, ಅಕ್ಟೋಬರ್ 14, 2017

ಪೊಲೀಸ್ ಪ್ರಮಾದ : 15 ವರ್ಷ ಜೈಲುವಾಸ ಅನುಭವಿಸಿದ ಯುವಕ...

ಕಟಕ್, ಅ. 15: ಪೊಲೀಸರು ಯುವಕನ ಹೆಸರನ್ನು ಆರೋಪಪಟ್ಟಿಯಲ್ಲಿ ತಪ್ಪಾಗಿ ನಮೂದಿಸಿದ ಏಕೈಕ ಕಾರಣದಿಂದ ಯುವಕನೊಬ್ಬ 15 ವರ್ಷ ಜೈಲು ವಾಸ ಅನುಭವಿಸಬೇಕಾಗಿ ಬಂದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಸಂತ್ರಸ್ತ ಯುವಕ ಜ್ಯೋತಿ ಪ್ರಕಾಶ್ ಸಾಹೂ ಪೊಲೀಸ್ ಪ್ರಮಾದದಿಂದ ಹದಿನೈದು ವರ್ಷ ಜೈಲುವಾಸದ ಬಳಿಕ ಶನಿವಾರ ಬಿಡುಗಡೆಯಾಗಿದ್ದಾರೆ.
ಕೊಲೆಯತ್ನದ ಆರೋಪದಲ್ಲಿ ಸಾಹೂಗೆ 2002ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ ಆ ವೇಳೆಗೆ ಆತ ಬಾಲಾಪರಾಧಿಯಾಗಿದ್ದ. ವಿಷಯವನ್ನು ಪೊಲೀಸರು ಹಾಗೂ ಆರೋಪಿ ಪರ ವಕೀಲ ಗಮನಕ್ಕೆ ತಂದಿದ್ದರೆ, ಆತನನ್ನು ಜೈಲಿನ ಬದಲಾಗಿ ಸುಧಾರಣಾ ಗೃಹಕ್ಕೆ ಕಳುಹಿಸಲಾಗುತ್ತಿತ್ತು.
ಇದೀಗ ಒಡಿಶಾ ಹೈಕೋರ್ಟ್ ಈತನ ನೆರವಿಗೆ ಬಂದಿದೆ. ಈಗ 32 ವರ್ಷದವನಾಗಿರುವ ಸಾಹೂ, ಅಪರಾಧ ಎಸಗಿದ ವೇಳೆ ಬಾಲಾಪರಾಧಿಯಾಗಿದ್ದ ಎಂಬ ವಿಷಯವನ್ನು ಸಾಹೂ ವಕೀಲರು ಹೈಕೋರ್ಟ್ ಗಮನಕ್ಕೆ ತಂದ ಹಿನ್ನೆಲೆಯಲ್ಲಿ, ಆರೋಪಿ ಬಿಡುಗಡೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಆರೋಪಿಯನ್ನು ಬಂಧಿಸಿದ ಸಂದರ್ಭ ಅಂದರೆ 2002ರ ನವೆಂಬರ್ 28ರ ವೇಳೆಗೆ ಸಾಹೂಗೆ 17 ವರ್ಷ, 5 ತಿಂಗಳು ಹಾಗೂ 18 ದಿನವಾಗಿತ್ತು ಎಂದು ನ್ಯಾಯಮೂರ್ತಿ ಕೆ.ಆರ್.ಮಹೋಪಾತ್ರ ಹಾಗೂ ಐ.ಮೊಹಾಂತಿ ಅವರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿ, ಆರೋಪಿಯನ್ನು ಬಿಡುಗಡೆಗೊಳಿಸಿದೆ.
ಕಟಕ್ನಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಈ ಯುವಕನ ವಯಸ್ಸನ್ನು ಪೊಲೀಸರು 20 ಎಂದು ತಪ್ಪಾಗಿ ನಮೂದಿಸಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here