"ಡಾ.ರಾಜ್ ಕುಮಾರ್ ಮ್ಯೂಸಿಕ್"' ಪುನೀತ್ ಹೊಸ ಪಯಣ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ಅಕ್ಟೋಬರ್ 18, 2017

"ಡಾ.ರಾಜ್ ಕುಮಾರ್ ಮ್ಯೂಸಿಕ್"' ಪುನೀತ್ ಹೊಸ ಪಯಣ...!

ಇತ್ತೀಚೆಗಷ್ಟೇ ತಮ್ಮದೇ ಕನಸಿನ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದ್ದರು ಪುನೀತ್ ರಾಜ್ ಕುಮಾರ್. ಇದೀಗ ಮಗದೊಂದು ಹೊಸ ಹಾದಿಯನ್ನು ತುಳಿಯುತ್ತಿದ್ದಾರೆ. ಅದು ಆಡಿಯೋ ಕಂಪನಿ ಮೂಲಕ . ಈ ಕಂಪನಿಗೆ ತಮ್ಮ ತಂದೆ ಡಾ.ರಾಜ್ ಕುಮಾರ್ ಹೆಸರನ್ನೇ ಇಟ್ಟಿದ್ದಾರೆ . ಅದೇ "ಡಾ.ರಾಜ್ ಕುಮಾರ್ ಮ್ಯೂಸಿಕ್"'.
ಈ ಹೆಸರು ಬಹಳ ಸೂಕ್ತವೂ ಹೌದು. ರಾಜ್ ಕುಮಾರ್ ಅವರು ಕಡೆಗಾಲದವರೆಗು ಅಭಿನಯದ ಜೊತೆಗೆ ಸಂಗೀತವನ್ನೂ ಉಸಿರಾಗಿಸಿಕೊಂಡಿದ್ದರು. ಮನೆಯಲ್ಲಿಯೂ ಹಾರ್ಮೋನಿಯಂ ನುಡಿಸುತ್ತಾ ಹಾಡುತ್ತಾ ತಲ್ಲೀನರಾಗಿರುತ್ತಿದ್ದರು.
ತಮ್ಮ ಹೊಸ ಆಡಿಯೋ ಸಂಸ್ಥೆಯಿಂದ ಹೊಸ ಸಿನಿಮಾಗಳ ಹಾಡುಗಳನ್ನು ರಸಿಕರಿಗೆ ಕೇಳಿಸುವ ಇರಾದೆ ಪುನೀತ್ ರದ್ದು .
ಎಲ್ಲವೂ ಸಮಯಕ್ಕೆ ಹೊಂದಿಕೊಂಡರೆ ಪುನೀತ್ ನಟಿಸಿರುವ "ಅಂಜನೀಪುತ್ರ" ಹಾಡುಗಳಿಂದಲೇ ಆಡಿಯೋ ಕಂಪನಿ ಶುರುವಾಗಲಿದೆ. ಪಾರ್ವತಮ್ಮ ರಾಜ್ಕುಮಾರ್ ನಿರ್ಮಾಣ ಸಂಸ್ಥೆಯಿಂದ ಸದಭಿರುಚಿಯ ಸಿನಿಮಾಗಳನ್ನು ಹೊರತರುವ ಪ್ರಯತ್ನದಲ್ಲಿರುವ ಪುನೀತ್ , ಆಡಿಯೋ ಕಂಪನಿಯಿಂದಲೂ ಇಂಪಾದ ಮನಸ್ಸಿಗೆ ಹಿತ ಕೊಡುವ ಹಾಡುಗಳನ್ನು ನೀಡುವ ಉತ್ಸಾಹದಲ್ಲಿದ್ದಾರೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here