ದೆಹಲಿಯಲ್ಲಿ ಸಿಎಂ ಕಾರನ್ನೇ ಅಪಹರಿಸಿದ ಕಳ್ಳರು... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಅಕ್ಟೋಬರ್ 12, 2017

ದೆಹಲಿಯಲ್ಲಿ ಸಿಎಂ ಕಾರನ್ನೇ ಅಪಹರಿಸಿದ ಕಳ್ಳರು...

ದೆಹಲಿ, ಅಕ್ಟೋಬರ್ 12: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರನ್ನೇ ಕಳ್ಳರು ಹೊತ್ತೊಯ್ದಿದ್ದಾರೆ. ಮುಖ್ಯಮಂತ್ರಿ ಕಚೇರಿ ಪಕ್ಕದಿಂದಲೇ ಕಾರನ್ನು ಕಳ್ಳತನ ಮಾಡಲಾಗಿದೆ.
ಅರವಿಂದ್ ಕೇಜ್ರಿವಾಲ್ ರ ದೆಹಲಿ ರಿಜಿಸ್ಟ್ರೇಷನ್ ಸಂಖ್ಯೆ DL9 G9769 ಕಾರನ್ನು ಕಳ್ಳತನ ಮಾಡಲಾಗಿದೆ. ನೀಲಿ ಬಣ್ಣದ ಮಾರುತಿ ಸುಝುಕಿ ವ್ಯಾಗನ್-ಆರ್ ಕಾರನ್ನು ದೆಹಲಿ ಮುಖ್ಯಮಂತ್ರಿಯಾದ ಬಳಿಕವೂ ಕೇಜ್ರಿವಾಲ್ ಓಡಾಟಕ್ಕೆ ಬಳಸುತ್ತಿದ್ದರು.
ಈ ಕಾರನ್ನು ಕೇಜ್ರಿವಾಲ್ ಅವರಿಗೆ ಅವರ ವಿದೇಶಿ ಗೆಳೆಯರೊಬ್ಬರು ಕೊಡುಗೆಯಾಗಿ ನೀಡಿದ್ದರು. ಪ್ರತಿಭಟನೆ ಮೊದಲಾದ ಸಂದರ್ಭದಲ್ಲೆಲ್ಲಾ ಕೇಜ್ರಿವಾಲ್ ಈ ಕಾರನ್ನೇ ಬಳಸುತ್ತಿದ್ದರು. ವಿಐಪಿ ಸಂಸ್ಕೃತಿ ವಿರುದ್ಧ ಮಾತನಾಡುತ್ತಿದ್ದ ಅವರು ತಮ್ಮ ವ್ಯಾಗನ್-ಆರ್ ಕಾರಿನಲ್ಲೇ ಓಡಾಡುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಅವರ ನೂರಾರು ಫೋಟೋಗಳು ಕಾರಿನ ಜತೆಗಿವೆ.
ಇದೀಗ ಈ ಕಾರನ್ನೇ ಕಳ್ಳರು ಹೊತ್ತೊಯ್ದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here