ಕೆ.ಆರ್ ಪೇಟೆ : ತಾಲೂಕಿನ ಕುಂದನಹಳ್ಳಿ ಗ್ರಾಮದ ದಾಸೇಗೌಡ ಎಂಬುವವರ ಜಮೀನಿನಲ್ಲಿ ಹೆಬ್ಬಾವೊಂದು ಪತ್ತೆಯಾಗಿದೆ.
ಕುಂದನಹಳ್ಳಿ ಗ್ರಾಮದ ಮಾಸ್ತೀಗೌಡ ಅವರ ಮಗ ದಾಸೇಗೌಡರಿಗೆ ಸೇರಿದ ಜಮೀನಿನಲ್ಲಿ ಹೆಬ್ಬಾವು ಪತ್ತೆಯಾಗಿದ್ದು, 30ರಿಂದ 40ಕೆ.ಜಿ. ತೂಕದ ಹಾಗೂ 10ಅಡಿ ಉದ್ದವಿರುವ ಹೆಬ್ಬಾವನ್ನು ನೋಡಿದ ಜಮೀನಿನ ಮಾಲೀಕ ರೈತ ದಾಸೇಗೌಡ ಅವರು ಉರಗ ತಜ್ಞ ಸ್ನೇಕ್ ಮುನ್ನಾ ಅವರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆಬಂದ ಸ್ನೇಕ್ ಮುನ್ನಾ ಅವರು ಹಾವನ್ನು ಸುರಕ್ಷಿತವಾಗಿ ಹಿಡಿದು ಪಟ್ಟಣದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ