ನವದೆಹಲಿ: ಮಹತ್ವಾಕಾಂಕ್ಷೆಯ 'ಭಾರತ್ಮಾಲಾ' ಸೇರಿದಂತೆ 7 ಲಕ್ಷ ಕೋಟಿ ಮೊತ್ತದ ಹೆದ್ದಾರಿ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಯೋಜನೆಗಳ ಅಡಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 80,000 ಕಿ.ಮೀ. ಹೆದ್ದಾರಿಗಳನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ.
'ಭಾರತ್ಮಾಲಾ' ಹೆದ್ದಾರಿ ನಿರ್ಮಾಣ ಯೋಜನೆಯನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಇತ್ತೀಚೆಗೆ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಈ ಯೋಜನೆ ಅಡಿ ಮೊದಲ ಹಂತದಲ್ಲಿ 20,000 ಕಿಲೋ ಮೀಟರ್ನ ಹೆದ್ದಾರಿಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಸಂಪುಟ ಅನುಮೋದನೆ ನೀಡಿರುವ ಯೋಜನೆಗಳಲ್ಲಿ ಆರ್ಥಿಕ ಕಾರಿಡಾರ್ ಅಭಿವೃದ್ಧಿ ಯೋಜನೆಗಳೂ ಸೇರಿವೆ. 21,000 ಕಿಲೋ ಮೀಟರ್ನ ಆರ್ಥಿಕ ಕಾರಿಡಾರ್ಗಳ ಅಭಿವೃದ್ಧಿ ಯೋಜನೆ ಹಮ್ಮಿಕೊಳ್ಳಲು ಕೇಂದ್ರ ಈ ಹಿಂದೆಯೇ ನಿರ್ಧರಿಸಿತ್ತು. ಇದರಲ್ಲಿ, ಬೆಂಗಳೂರು-ಮಂಗಳೂರು, ಮುಂಬೈ-ಕೊಚ್ಚಿ-ಕನ್ಯಾಕುಮಾರಿ, ಹೈದರಾಬಾದ್-ಪಣಜಿ ಮತ್ತು ಸಾಂಬ್ಲಾಪುರ-ರಾಂಚಿ ಆರ್ಥಿಕ ಕಾರಿಡಾರ್ಗಳು ಸೇರಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ