ಭವಿಷ್ಯ 30-10-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಭಾನುವಾರ, ಅಕ್ಟೋಬರ್ 29, 2017

ಭವಿಷ್ಯ 30-10-2017

ಭವಿಷ್ಯ
ಮೇಷ ರಾಶಿ
ಮುಂದೆ ಒಳ್ಳೆಯ ಸಮಯವಿರುವುದರಿಂದ ಸಂತೋಷದಿಂದಿರಿ. ಹಣ ನಿಮ್ಮ ಕೈಗಳ ಮೂಲಕ ಸುಲಭವಾಗಿ ಜಾರಿಹೋದರೂ - ನಿಮ್ಮ ಅದೃಷ್ಟದ ತಾರೆಗಳು ನಿಮಗೆ ಹಣಕಾಸು ಸುಲಭವಾಗಿ ದೊರಕುವಂತೆ ಮಾಡುತ್ತದೆ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು ನಿರ್ಲಕ್ಷಿಸಿದ್ದಲ್ಲಿ ನಿಮ್ಮ ಜೊತೆಗಿರುವ ಯಾರಾದರೂ ಸಿಟ್ಟಾಗಬಹುದು. ಪ್ರೀತಿಯಲ್ಲಿ ನಿರಾಶೆಯಾಗಬಹುದಾದರೂ ಪ್ರೇಮಿಗಳು ಯಾವತ್ತೂ ಮುಖಸ್ತುತಿ ಮಾಡುವವರಾದ್ದರಿಂದ ನೀವು ಧೃತಿಗೆಡಬೇಡಿ. ನೀವು ನಾಯಕತ್ವದ ಗುಣಗಳು ಮತ್ತು ಜನರ ಅವಶ್ಯಕತೆಗಳ ಬಗ್ಗೆ ಸಂವೇದನೆಯನ್ನು ಹೊಂದಿದ್ದೀರಿ - ನಿಮ್ಮ ನೈಜ ಗುಣವನ್ನು ವ್ಯಕ್ತಪಡಿಸುವ ಆಕಾಂಕ್ಷೆ ನಿಮಗೆ ದೊಡ್ಡ ಸಹಾಯಗಳನ್ನು ಪಡೆಯಲು ಸಾಧ್ಯವಾಗಿಸುತ್ತದೆ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನಿಮ್ಮ ಧರ್ಮಪತ್ನಿಯನ್ನು ನಿಯಮಿತವಾಗಿ ಅಚ್ಚರಿಗೊಳಿಸುತ್ತಿರಿ; ಇಲ್ಲದಿದ್ದರೆ ಅವರಿಗೆ ಅಭಧ್ರತೆಯ ಭಾವನೆ ಕಾಡಬಹುದು.
ವೃಷಭ ರಾಶಿ 
ನೀವು ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು ಇದು ನಿಮ್ಮನ್ನು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಕ್ರಿಯಗೊಳಿಸುತ್ತದೆ. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ಮನರಂಜನೆ ಇಡೀ ಕುಟುಂಬವನ್ನು ಒಳಗೊಂಡಿದ್ದಲ್ಲಿ ಅದು ಮೋಜಿನ ವಿಷಯವಾಗಿರುತ್ತದೆ. ಪ್ರಣಯದ ನೆನಪುಗಳು ನಿಮ್ಮ ದಿನವನ್ನು ಆಕ್ರಮಿಸುತ್ತವೆ. ವೃತ್ತಿಯಲ್ಲಿನ ನಿಮ್ಮ ಕೌಶಲ್ಯದ ಪರೀಕ್ಷೆ ನಡೆಯಲಿದೆ. ನೀವು ಬಯಸಿದ ಫಲಿತಾಂಶ ನೀಡಲು ನಿಮ್ಮ ಪ್ರಯತ್ನಗಳ ಮೇಲೆ ಗಮನ ಹರಿಸಬೇಕು. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನೀವು ನಿಮ್ಮ ಸಂಗಾತಿಯ ಜೊತೆಗಿನ ಕಳೆದ ಸುಂದರ ಪ್ರಣಯದ ದಿನಗಳನ್ನು ಇಂದು ನೆನೆಸುತ್ತೀರಿ.
ಮಿಥುನ ರಾಶಿ 
ನೀವು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು ಮತ್ತು ನಿಮ್ಮ ಭಯವನ್ನು ಸಾಧ್ಯವಾದಷ್ಟೂ ಬೇಗ ತೊಡೆದುಹಾಕಬೇಕು ಏಕೆಂದರೆ ಇವು ತಕ್ಷಣವೇ ನಿಮ್ಮ ಆರೋಗ್ಯವನ್ನು ಬಾಧಿಸಬಹುದು ಮತ್ತು ಒಳ್ಳೆಯ ಆರೋಗ್ಯವನ್ನು ಅನುಭವಿಸುವ ನಿಮ್ಮ ಹಾದಿಯಲ್ಲಿ ಅಡ್ಡ ಬರಬಹುದು. ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನು ಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಮಕ್ಕಳು ಕ್ರೀಡೆ ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ಭಾಗವನ್ನು ನೀವಿಂದು ನೋಡಬಹುದು. ಇಂದು ಹೆಚ್ಚಿನ ಸಾಧನೆ ಮತ್ತು ಉನ್ನತ ಪ್ರೊಫೈಲ್‌ಗೆ ಒಂದು ಒಳ್ಳೆಯ ದಿನ. ಪ್ರಯಾಣ ಅನುಕೂಲಕರವಾಗಿದ್ದರೂ ದುಬಾರಿಯಾಗಿರುತ್ತದೆ. ಹಲವಾರು ವಿಷಯಗಳ ಬಗ್ಗೆ ಹಲವಾರು ಭಿನ್ನಾಭಿಪ್ರಾಯಗಳು ಇರಬಹುದಾದ್ದರಿಂದ ಈ ದಿನ ನಿಮಗೆ ಚೆನ್ನಾಗಿರುವುದಿಲ್ಲ. ಈ ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತದೆ.
ಕರ್ಕ ರಾಶಿ
ನೀವು ಒಂದು ತಪ್ಪು ಮಾಹಿತಿಯನ್ನು ಪಡೆಯಬಹುದು ಹಾಗೂ ಇದು ಮಾನಸಿಕ ಒತ್ತಡ ತರುತ್ತದೆ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಇತರರ ಸಲಹೆಗಳನ್ನು ಕೇಳುವುದು ಮತ್ತು ಕಾರ್ಯಗತಗೊಳಿಸುವುದು ಪ್ರಮುಖವಾದ ಒಂದು ದಿನ. ಪ್ರೇಮ ಜೀವನ ಕಡಿಮೆ ಚೈತನ್ಯದಾಯಕವಾಗಿರುವ ಸಾಧ್ಯತೆಯಿದೆ. ಇಂದು ಮಾಡಿದ ಜಂಟಿ ಯೋಜನೆಗಳು ಕೊನೆಗೂ ಪ್ರಯೋಜನಕಾರಿಯಾದರೂ, ನೀವು ಪಾಲುದಾರರಿಂದ ಕೆಲವು ಪ್ರಮುಖ ವಿರೋಧವನ್ನು ಎದುರಿಸಬೇಕಾಗುತ್ತದೆ. ನಿಮ್ಮ ಯೋಜನೆಗಳಿಗೆ ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಮಾಡಬೇಕಾದ ಒಂದು ದಿನ. ಇಂದು, ನೀವು ಮದುವೆಯ ಕಷ್ಟದ ಸ್ವರೂಪವನ್ನು ಅನುಭವಿಸಬಹುದು.
ಸಿಂಹ ರಾಶಿ 
ಆಶಾವಾದಿಗಳಾಗಿರಿ ಮತ್ತು ಜೀವನದ ಉಜ್ವಲ ಬದಿಯನ್ನು ನೋಡಿ. ನಿಮ್ಮ ಆತ್ಮವಿಶ್ವಾಸಭರಿತ ನಿರೀಕ್ಷೆಗಳು ನಿಮ್ಮ ಭರವಸೆಗಳು ಮತ್ತು ಆಸೆಗಳನ್ನು ಸಾಕ್ಷಾತ್ಕಾರಗೊಳಿಸಲು ಸಹಾಯ ಮಾಡುತ್ತವೆ. ಊಹೆಗಳು ಲಾಭ ತರುತ್ತವೆ. ಮಕ್ಕಳೊಂದಿಗೆ ವಾದ ಮಾನಸಿಕ ಒತ್ತಡ ತರುತ್ತದೆ - ಕೆಲವು ಸಮಸ್ಯೆಗಳನ್ನು ಕೆದಕದಿರುವುದೇ ಉತ್ತಮವಾದ್ದರಿಂದ ಒಂದು ಹಂತಕ್ಕಿಂತ ಹೆಚ್ಚು ತೊಂದರೆ ತೆಗೆದುಕೊಳ್ಳಬೇಡಿ. ಇದು ಪ್ರೀತಿಯಲ್ಲಿ ನಿಮ್ಮ ಅದೃಷ್ಟದ ದಿನ. ನಿಮ್ಮ ಸಂಗಾತಿ ನಿಮ್ಮ ಬಹುನಿರೀಕ್ಷಿತ ಕಲ್ಪನೆಗಳನ್ನು ಸಾಕ್ಷಾತ್ಕಾರ ಮಾಡುವ ಮೂಲಕ ನಿಮ್ಮನ್ನು ಅಚ್ಚರಿಗೊಳಿಸುತ್ತಾರೆ. ನಿಮ್ಮ ಕೆಲಸ ಮತ್ತು ನಿಮ್ಮ ಆದ್ಯತೆಗಳ ಮೇಲೆ ಗಮನವಿಡಿ. ಇತರರನ್ನು ಒಪ್ಪಿಸುವ ನಿಮ್ಮ ಸಾಮರ್ಥ್ಯ ನಿಮಗೆ ಸಮೃದ್ಧ ಲಾಭ ತಂದುಕೊಡುತ್ತದೆ. ನೀವು ನಿಮ್ಮ ಅದ್ಭುತವಾದ ಸಂಗಾತಿಯ ಬೆಚ್ಚಗಿನ ಮನೋಭಾವದ ಸೌಂದರ್ಯವನ್ನು ಅನುಭವಿಸುತ್ತೀರಿ.
ಕನ್ಯಾ ರಾಶಿ 
ಭಾವನಾತ್ಮಕವಾಗಿ ನೀವು ತುಂಬ ಸ್ಥಿರವಾಗಿರುವುದಿಲ್ಲ - ಆದ್ದರಿಂದ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೀರಿ ಮತ್ತು ಏನು ಹೇಳುತ್ತೀರಿ ಎನ್ನುವ ಬಗ್ಗೆ ಎಚ್ಚರದಿಂದಿರಿ. ಹಿಂದಿನ ಬಂಡವಾಳದಿಂದ ಆದಾಯವನ್ನು ನಿರೀಕ್ಷಿಸಿದ್ದಲ್ಲಿ. ಭಾವನಾತ್ಮಕ ಅಪಾಯ ನಿಮ್ಮ ಪರವಾಗಿರುತ್ತದೆ. ಪ್ರಣಯ ಉಂಟಾಗುವ ಸಾಧ್ಯತೆಯಿದ್ದರೂ ಇಂದ್ರಿಯದ ಭಾವನೆಗಳು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದು. ಬಿಡುವಿಲ್ಲದ ಬೀದಿಗಳಲ್ಲಿ, ನಿಮ್ಮ ಪ್ರಿಯತಮೆಯೇ ಅತ್ಯುತ್ತಮವಾಗಿರುವುದರಿಂದ ನೀವು ಅದೃಷ್ಟಶಾಲಿಗಳು ಎಂದು ನಿಮಗೆ ಅರಿವಾಗುತ್ತದೆ. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ನಿಮ್ಮ ಸಂಗಾತಿಯ ನಿಮ್ಮ ಆರೋಗ್ಯದೆಡೆಗೆ ಇಂದು ಅಸಂವೇದನಾಶೀಲರಾಗಿರಬಹುದು.
ತುಲಾ ರಾಶಿ 
ಇಂದು ಶಾಂತವಾಗಿ ಒತ್ತಡ ಮುಕ್ತವಾಗಿರಿ. ದುರ್ಬಲ ಆರ್ಥಿಕ ಸ್ಥಿತಿಯಿಂದ ಕೆಲವು ಪ್ರಮುಖ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಪೋಷಕರ ಆರೋಗ್ಯದ ಬಗೆಗಿನ ನಿಮ್ಮ ನಿರ್ಲಕ್ಷ್ಯ ಅಪಾಯಕಾರಿಯಾಗಬಹುದು ಮತ್ತು ಅವರ ಅನಾರೋಗ್ಯವನ್ನು ಹೆಚ್ಚಿಸಬಹುದು. ತಕ್ಷಣ ಪರಿಹಾರ ನೀಡಲು ವೈದ್ಯರ ಸಲಹೆ ಪಡೆಯಿರಿ. ಇಂದು ನಿಮ್ಮ ಪ್ರೀತಿಯ ಜೀವನದಲ್ಲಿ ಅದ್ಭುತ ದಿನವಾಗಿದೆ. ಇಂದು, ನೀವು ಮತ್ತು ನಿಮ್ಮ ಪ್ರೀತಿ ಸಂಗಾತಿ ಪ್ರೀತಿಯ ಸಾಗರದಲ್ಲಿ ತೇಲುತ್ತೀರಿ ಮತ್ತು ಪ್ರೀತಿಯ ಔನ್ನತ್ಯವನ್ನು ಅನುಭವಿಸುತ್ತೀರಿ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ಮದುವೆಗಳು ಏಕೆ ಸ್ವರ್ಗದಲ್ಲಿ ಮಾಡಲ್ಪಟ್ಟಿವೆ ಎಂದು ನಿಮಗೆ ಇಂದು ತಿಳಿಯುತ್ತದೆ.
ವೃಶ್ಚಿಕ ರಾಶಿ
ನಿಮ್ಮ ಚೈತನ್ಯವನ್ನು ಪುನಃ ಸಂಪಾದಿಸಲು ವಿಶ್ರಾಂತಿ ತೆಗೆದುಕೊಳ್ಳಿ. ನೀವು ಇತರರ ಮೇಲೆ ಹೆಚ್ಚು ಖರ್ಚು ಮಾಡಬಯಸುತ್ತೀರಿ. ಸಕಾರಾತ್ಮಕವಾಗಿರುವ ಮತ್ತು ಬೆಂಬಲ ನೀಡುವ ಸ್ನೇಹಿತರೊಂದಿಗೆ ಹೊರಗೆ ಹೋಗಿ. ಪ್ರೇಮ ಜೀವನ ಸ್ವಲ್ಪ ಕಠಿಣವಾಗಿರಬಹುದು. ನಿಮ್ಮ ಆಫೀಸ್ ಕೆಲಸ ಇಂದು ಹೆಚ್ಚು ಹಾಳಾಗುವ ಸಾಧ್ಯತೆಯಿದೆ. ಕೆಲವರಿಗೆ ಅನಿರೀಕ್ಷಿತ ಪ್ರಯಾಣ ಒತ್ತಡಭರಿತವೂ ಮತ್ತು ಉದ್ವೇಗಭರಿತವೂ ಆಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮ ಜೊತೆಗಿರುವ ಬಗ್ಗೆ ನಿಮಗೆ ಕೆಲವು ಅಷ್ಟೇನೂ ಒಳ್ಳೆಯದಲ್ಲದ ವಿಷಯಗಳನ್ನು ಹೇಳಬಹುದು.
ಧನು ರಾಶಿ
ಮನೆಯ ಚಿಂತೆಗಳು ನಿಮಗೆ ಉದ್ವೇಗ ತರಬಹುದು. ಆವತ್ತಿಗಾಗಿ ಮಾತ್ರ ಬದುಕುವ ಮತ್ತು ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ನಿಯಂತ್ರಿಸಿ. ನಿಮ್ಮ ಮನೆಯಲ್ಲಿ ಸಾಮರಸ್ಯ ತರಲು ನಿಕಟ ಸಹಕಾರದೊಂದಿಗೆ ಕೆಲಸ ಮಾಡಬೇಕು. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ ವಿಶೇಷವಾದದ್ದನ್ನು ಹೇಳುತ್ತವೆ. ನಿಮ್ಮ ಶ್ರಮ ಕೆಲಸದಲ್ಲಿ ಇಂದು ಫಲ ನೀಡುತ್ತದೆ. ನಿಮ್ಮ ಪ್ರಖರ ವೀಕ್ಷಣೆ ನಿಮ್ಮನ್ನು ಇತರರಿಗಿಂತ ಮುಂದಿರಲು ಸಹಾಯ ಮಾಡುತ್ತದೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಉದ್ವಿಗ್ನತೆ ಹೆಚ್ಚಾಗಬಹುದು ಮತ್ತು ಇದು ದೀರ್ಘಾವಧಿಯಲ್ಲಿ ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ.
ಮಕರ ರಾಶಿ
ನೀವು ಕೆಲವು ಅನಿವಾರ್ಯ ಅತಿಥಿಗಳನ್ನು ಭೇಟಿಯಗುವುದರಿಂದ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಪ್ರಯತ್ನಿಸಿ. ಈಗಿನ ಅಗತ್ಯವೆಂದರೆ ಸ್ವಯಂ ನಿಯಂತ್ರಣವಾಗಿದ್ದು-ಇದು ನಿಮ್ಮ ಸ್ವಭಾವದ ಮೂಲವಾಗಿದೆ. ಮೀಟಿಂಗ್ ನಿಮಗೆ ಅನುಕೂಲವಾಗುವುದರಿಂಡ ಅನವಶ್ಯಕ ಒತ್ತಡ ತೆಗೆದುಕೊಳ್ಳುವ ಅಗತ್ಯವಿಲ್ಲ. ವೆಚ್ಚದ ಏರಿದರೂ ಆದಾಯದಲ್ಲಿನ ಹೆಚ್ಚಳ ನಿಮ್ಮ ಖರ್ಚುಗಳನ್ನು ನೋಡಿಕೊಳ್ಳುತ್ತದೆ. ನೀವು ಶಾಪಿಂಗ್‌ಗೆ ಹೋಗಬಹುದು -ಆದರೆ ನೀವು ಮುಖ್ಯವಲ್ಲದ ವಸ್ತುಗಳ ಮೇಲೆ ಹಣ ಖರ್ಚು ಮಾಡಿದಲ್ಲಿ ನಿಮ್ಮ ಸಂಗಾತಿಗೆ ತುಂಬಾ ಅಸಮಾಧಾನವಾಗುವ ಸಾಧ್ಯತೆಗಳಿವೆ. ನಿಮ್ಮ ಪ್ರೀತಿ ಒಂದು ಹೊಸ ಎತ್ತರವನ್ನು ತಲುಪುತ್ತದೆ. ಈ ದಿನವು ನಿಮ್ಮ ಪ್ರೀತಿಪಾತ್ರರ ನಗುವಿನಿಂದ ಪ್ರಾರಂಭವಾಗುತ್ತದೆ, ಮತ್ತು ಪರಸ್ಪರರ ಕನಸಿನಲ್ಲಿ ಕೊನೆಗೊಳ್ಳುತ್ತದೆ. ನಿಮ್ಮ ವೃತ್ತಿ ಅವಕಾಶಗಳನ್ನು ಹೆಚ್ಚಿಸಲು ನಿಮ್ಮ ವೃತ್ತಿಪರ ಶಕ್ತಿಯನ್ನು ಬಳಸಿ. ನಿಮ್ಮ ಚಟುವಟಿಕೆಯ ಕ್ಷೇತ್ರದಲ್ಲಿ ನೀವು ಅಪರಿಮಿತ ಯಶಸ್ಸು ಸಾಧಿಸುವ ಸಾಧ್ಯತೆಯಿದೆ. ಮೇಲುಗೈ ಸಾಧಿಸಲು ನಿಮ್ಮ ಎಲ್ಲಾ ಕೌಶಲನ್ನು ಬಳಸಿ. ಹೊಸ ಆಲೋಚನೆಗಳನ್ನು ಪರೀಕ್ಷಿಸಲು ಪರಿಪೂರ್ಣ ದಿನ. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಅದ್ಭುತವಾದ ದಿನವಾಗಿದೆ.
ಕುಂಭ ರಾಶಿ
ಸಂತೋಷದಿಂದ ತುಂಬಿದ ಒಳ್ಳೆಯ ದಿನ. ಬುದ್ಧಿವಂತ ಹೂಡಿಕೆಗಳು ಮಾತ್ರ ಆದಾಯಗಳನ್ನು ನೀಡುತ್ತವೆ- ಆದ್ದರಿಂದ ನೀವು ಕಷ್ಟಪಟ್ಟುಗಳಿಸಿದ ನಿಮ್ಮ ಹಣವನ್ನು ಎಲ್ಲಿ ಹೂಡಬಯಸುತ್ತೀರೆನ್ನುವಲ್ಲಿ ಖಚಿತತೆಯಿರಲಿ. ಹಠಮಾರಿಯಾಗಬೇಡಿ- ನೀವು ಸುಲಭವಾಗಿ ಇತರರನ್ನು ನೋಯಿಸಬಹುದು. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ನೀವು ನಿಮ್ಮ ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿದಲ್ಲಿ ಮತ್ತು ಕೆಲಸದಲ್ಲಿ ನಿಮ್ಮ ಬದ್ಧತೆಯನ್ನು ಪ್ರದರ್ಶಿಸಿದಲ್ಲಿ ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಕೆಲಸದಲ್ಲಿ ನಿಮ್ಮ ಮೇಲಿನವರು ಇಂದು ದೇವದೂತರಂತೆ ಕೆಲಸ ಮಾಡುವಂತೆ ಕಾಣುತ್ತದೆ.
ಮೀನ ರಾಶಿ
ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ವೈಯಕ್ತಿಕ ಸಂಬಂಧಗಳನ್ನು ದುರ್ಬಳಕೆ ಮಾಡುವುದು ನಿಮ್ಮ ಪತ್ನಿಗೆ ಕೋಪ ಬರಿಸುತ್ತದೆ. ನಿಮ್ಮ ಸ್ನೇಹಿತರ ಸಹಾಯದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ನೀವು ವಿಶ್ರಾಂತಿ ಪಡೆಯಬೇಕು ಮತ್ತು ನಿಕಟ ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ನಡುವೆ ಸಂತೋಷವಾಗಿರಲು ಪ್ರಯತ್ನಿಸಬೇಕು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಮೂಲಕ ಮಾತ್ರ ನೀವು ನಿಮ್ಮ ಪತ್ನಿಗೆ ಭಾವನಾತ್ಮಕ ಬೆಂಬಲ ನೀಡಬಹುದು. ನೀವು ಅನೇಕ ದಿನಗಳಿಂದ ಕೆಲಸದಲ್ಲಿ ಹೆಣಗಾಡುತ್ತಿದ್ದಲ್ಲಿ, ಇಂದ ನಿಜವಾಗಿಯೂ ಒಳ್ಳೆಯ ದಿನವಾಗಲಿದೆ. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ಇಂದು, ನೀವು ಸಂತೋಷಕರ ವೈವಾಹಿಕ ಜೀವನವನ್ನು ಹೊಂದುವುದು ಹೇಗೆಂದು ಅರ್ಥ ಮಾಡಿಕೊಳ್ಳುತ್ತೀರಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here