ದಾವಣಗೆರೆ ನಗರದ ಕೊಂಡಜ್ಜಿ ರಸ್ತೆಯ ಮೈಲಾರಲಿಂಗೇಶ್ವರ ದೇವಸ್ಥಾನದ ಬಳಿಯಿರುವ ಮನೆಯಲ್ಲಿ ಈ ಘಟನೆ ನಡೆದಿದೆ.
ಇಂದು
ಬೆಳಗ್ಗೆ ಅಡುಗೆ ಮಾಡುವ ಸಲುವಾಗಿ ಮನೆಯಲ್ಲಿದ್ದ ಸಿಲಿಂಡರ್ ಆನ್ ಮಾಡಿದ್ದಾಗ ಭಾರಿ
ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಮನೆಯ ಮೇಲ್ಛಾವಣಿಗೆ ತಗುಲಿ ಸಂಪೂರ್ಣ ಕುಸಿದು
ಬಿದ್ದಿದೆ.
ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮೂವರಿಗೆ ತೀವ್ರಗಾಯಗಳಾಗಿವೆ ಎನ್ನಲಾಗಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು. ಸಿಲಿಂಡರ್ ಅವಘಡದಿಂದ ಮನೆಪೂರ್ಣ ಜಖಂಗೊಂಡಿದೆ.
ಘಟನೆ ನಡೆದ ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಿಯಂತ್ರಿಸಿದ್ದಾರೆ. ಇದರಿಂದ ಆಗಬೇಕಿದ್ದ ಭಾರಿ ಅನಾಹುತ ತಪ್ಪಿದೆ.
ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಿಲಿಂಡರ್ ಸ್ಪೋಟ ಪ್ರಕರಣಗಳಿಂದ ಜನತೆ
ಭಯಗೊಂಡಿದ್ದು, ಜನತೆಯು ಆತಂಕಕ್ಕೆ ಒಳಗಾಗುತ್ತಿದ್ದಾರೆ. ಸಿಲಿಂಡರ್ ನೀಡುವ ಕಂಪನಿಗಳು
ಮುಂಜಾಗ್ರಾತ ಕ್ರಮವಾಗಿ ಗ್ರಾಹರಿಕರಿಗೆ ತಿಳುವಳಿಕೆ, ಮಾಹಿತಿ ನೀಡಬೇಕಾಗಿದ್ದು, ಈ
ನಿಟ್ಟಿನಲ್ಲಿ ಅನಿಲ ನೀಡುವ ಕಂಪನಿಗಳು ಮುಂದಾಗುವುದು ಒಳಿತು.
ಇದಲ್ಲದೇ
ಗ್ರಾಹಕರು ಕೂಡ ಕಂಪನಿಗಳು ನೀಡುವ ಮಾರ್ಗದರ್ಶನಗಳನ್ನು ಸರಿಯಾಗಿ ಮನಗಂಡು ಸಿಲಿಂಡರ್
ಹಾಗೂ ಒಲೆಯನ್ನು ಹೇಗೆ ಬಳಕೆ ಮಾಡ ಬೇಕು ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡು.
ಸಿಲಿಂಡರ್ ಸೋರಿಕೆ ಸೇರಿದಂತೆ ಯಾವುದೇ ಮಾಹಿತಿಗಳು ಇದ್ದರೆ ಕೂಡಲೇ ಸಂಬಂಧಪಟ್ಟವರಿಗೆ
ಮಾಹಿತಿ ನೀಡಿದರೆ ಮುಂದಾಗುವ ಅನಾಹುತಾಗಳನ್ನು ತಪ್ಪಿಸಬಹುದಾಗಿದೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ