'ಬಾಹುಬಲಿ -2' ಭರ್ಜರಿ ಯಶಸ್ಸಿನ ಬಳಿಕ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ಭಾರತೀಯ
ಚಿತ್ರರಂಗದ ಹೆಸರಾಂತ ನಿರ್ದೇಶಕ ಎಸ್.ಎಸ್. ರಾಜಮೌಳಿ ಮುಂದಿನ ಸಿನಿಮಾ ಆರಂಭವಾಗ್ತಿದೆ.
ಪ್ರಿನ್ಸ್ ಮಹೇಶ್ ಬಾಬು ನಾಯಕರಾಗಿರುವ ಕೆ.ಎಲ್. ನಾರಾಯಣ್ ನಿರ್ಮಾಣ ಮಾಡಲಿರುವ ಚಿತ್ರವನ್ನು ರಾಜಮೌಳಿ ನಿರ್ದೇಶಿಸಲಿದ್ದಾರೆ. ಬಿಗ್ ಪ್ರಾಜೆಕ್ಟ್ ಮುಗಿದ ಬಳಿಕ ಕಡಿಮೆ ಬಜೆಟ್ ಚಿತ್ರ ಕೈಗೆತ್ತಿಕೊಳ್ಳುವ ರಾಜಮೌಳಿ ಈ ಬಾರಿ ಬಿಗ್ ಪ್ರಾಜೆಕ್ಟ್ ಅನ್ನೇ ಕೈಗೆತ್ತಿಕೊಂಡಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಚಿತ್ರಕ್ಕೂ ಮೊದಲೇ ದಾನಯ್ಯ ನಿರ್ಮಾಣದ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ. 'ದುಬಾಯ್ ಶೀನು', 'ಬ್ರೂಸ್ ಲೀ', 'ದೇಶಮುದುರು' ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ ದಾನಯ್ಯ, ರಾಜಮೌಳಿ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ತಮ್ಮ ಮುಂದಿನ ಚಿತ್ರ ಯಾವ ಭಾಷೆಯಲ್ಲಿ ನಿರ್ಮಾಣವಾಗುತ್ತೆ. ನಾಯಕ ಯಾರು ಎಂಬುದು ಗೊತ್ತಿಲ್ಲ. ಆದರೆ, ದಾನಯ್ಯ ನಿರ್ಮಾಣ ಮಾಡಲಿದ್ದಾರೆ ಎಂದು ರಾಜಮೌಳಿ ತಿಳಿಸಿದ್ದಾರೆ.
ಮಾಹಿತಿ ಪ್ರಕಾರ ರಾಜಮೌಳಿ ನಿರ್ದೇಶನ, ದಾನಯ್ಯ ನಿರ್ಮಾಣದಲ್ಲಿ ಸಾಮಾಜಿಕ ಚಿತ್ರ ಮೂಡಿಬರಲಿದೆ. ನಾಯಕ ಹಾಗೂ ಇತರೆ ಮಾಹಿತಿ ಮುಂದೆ ಗೊತ್ತಾಗಲಿದೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ