ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ಅಕ್ಟೋಬರ್ 25, 2017

ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ...!

ಅಕ್ಟೋಬರ್ ಆರಂಭದಲ್ಲಿ ಉಳಿತಾಯ ಖಾತೆ ಕನಿಷ್ಠ ಮಿತಿಯನ್ನು ಇಳಿಕೆ ಮಾಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ಗ್ರಾಹಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಎಸ್ ಬಿಐ ನೆಮ್ಮದಿ ನೀಡಿದೆ.
ಫಂಡ್ ವರ್ಗಾವಣೆ ಮಾಡಲು ಐಎಂಪಿಎಸ್ ಬಳಸುವ ಗ್ರಾಹಕರಿಗೆ ಎಸ್ ಬಿಐ ಉಡುಗೊರೆ ನೀಡಿದೆ. ಈ ಸೇವೆಗೆ ಬ್ಯಾಂಕ್ ವಿಧಿಸುತ್ತಿದ್ದ ಚಾರ್ಜನ್ನು ಶೇಕಡಾ 80ರಷ್ಟು ಇಳಿಕೆ ಮಾಡಿದೆ. ಒಂದು ವೇಳೆ ಗ್ರಾಹಕರು ಸಾವಿರ ರೂಪಾಯಿಯನ್ನು ಐಎಂಪಿಎಸ್ ಮೂಲಕ ವರ್ಗಾವಣೆ ಮಾಡುವುದಿದ್ದಲ್ಲಿ ಯಾವುದೇ ಚಾರ್ಜನ್ನು ಬ್ಯಾಂಕ್ ಗೆ ನೀಡಬೇಕಾಗಿಲ್ಲ.
ಗ್ರಾಹಕ ಐಎಂಪಿಎಸ್ ಮೂಲಕ 1001 ರೂಪಾಯಿಯಿಂದ 10 ಸಾವಿರ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡಿದಲ್ಲಿ 1 ರೂಪಾಯಿಯನ್ನು ಬ್ಯಾಂಕ್ ಗೆ ಚಾರ್ಜ್ ರೂಪದಲ್ಲಿ ನೀಡಬೇಕಾಗುತ್ತದೆ. 10 ಸಾವಿರದಿಂದ 1 ಲಕ್ಷದವರೆಗೆ ಹಣ ವರ್ಗಾವಣೆ ಮಾಡಲು 2 ರೂಪಾಯಿ ನೀಡಿದ್ರೆ ಸಾಕು.
ಎಸ್ ಬಿಐ ತನ್ನ ಅಧಿಕೃತ ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಚಾರ್ಜ್ ಈ ತಿಂಗಳಿನಿಂದಲೇ ಜಾರಿಗೆ ಬಂದಿದೆ. ಇದಕ್ಕೂ ಮೊದಲು ಬ್ಯಾಂಕ್ ಉಳಿತಾಯ ಖಾತೆ ಕನಿಷ್ಠ ಮಿತಿಯನ್ನು 5 ಸಾವಿರ ರೂಪಾಯಿ ಬದಲು 3 ಸಾವಿರ ರೂಪಾಯಿ ಮಾಡಿದೆ. ಮೆಟ್ರೋ ನಗರಗಳಿಗೆ ಮಾತ್ರ ಇದು ಅನ್ವಯವಾಗಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here