ಐಪಿಎಲ್‌ನ 11 ನೇ ಆವೃತ್ತಿಯ ಕನ್ನಡಿಗ ಕೆ.ಎಲ್‌.ರಾಹುಲ್‌ ಐಪಿಎಲ್‌ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಭಾನುವಾರ, ಏಪ್ರಿಲ್ 8, 2018

ಐಪಿಎಲ್‌ನ 11 ನೇ ಆವೃತ್ತಿಯ ಕನ್ನಡಿಗ ಕೆ.ಎಲ್‌.ರಾಹುಲ್‌ ಐಪಿಎಲ್‌ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ...!

ಮೊಹಾಲಿ: ಐಪಿಎಲ್‌ನ 11 ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಡೆಲ್ಲಿಡೇರ್‌ ಡೆವಿಲ್ಸ್‌ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ತಂಡದಲ್ಲಿ ಆಡುತ್ತಿರುವ ಕನ್ನಡಿಗ ಕೆ.ಎಲ್‌.ರಾಹುಲ್‌ ಐಪಿಎಲ್‌ ಇತಿಹಾಸದಲ್ಲಿ ಅತಿವೇಗದ ಅರ್ಧಶತಕ ಸಿಡಿಸಿ ಐಪಿಲ್ ನಲ್ಲಿ ಹೊಸದಾದ ದಾಖಲೆ ನಿರ್ಮಿಸಿದ್ದಾರೆ.
ಇಂದು ಮೊಹಾಲಿಯ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಸನ್‌ನ ಐಎಸ್‌ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ರಾಹುಲ್‌ ಕೇವಲ 14 ಎಸೆತಗಳಲ್ಲಿ ಈ ದಾಖಲೆ ಬರೆದರು.
ಮೊದಲು ಡೆಲ್ಲಿ ತಂಡ ಬ್ಯಾಟಿಂಗ್ ಮಾಡಿ ಪಂಜಾಬ್‌ಗೆ 167ರನ್‌ಗಳ ಟಾರ್ಗೆಟ್‌ ನೀಡಿದೆ. ಡೆಲ್ಲಿಯ ನೀಡಿರುವ ಗುರಿ ಬೆನ್ನತ್ತಿದ ಪಂಜಾಬ್‌ ತಂಡ ಆರಂಭಿಕರಾಗಿ ಕನ್ನಡಿಗರಾದ ಮಯಾಂಕ್‌ ಹಾಗೂ ರಾಹುಲ್‌ರನ್ನು ಮೈದಾನಕ್ಕಿಳಿದರು.
ಇದೇ ವೇಳೇ ರಾಹುಲ್ ಮೊದಲ ಓವರ್‌ನಲ್ಲೇ 16 ರನ್‌ ಸಿಡಿಸಿ ಸ್ಫೋಟಕ ತಂಡಕ್ಕೆ ಆರಂಭ ನೀಡಿದರು. ಎರಡನೇ ಓವರ್‌ನಲ್ಲಿ 11 ರನ್‌ ಹಾಗೂ ಮೂರನೇ ಓವರ್‌ನಲ್ಲಿ 14 ರನ್‌ ಸಿಡಿಸಿ ಅಬ್ಬರಿಸಿದರು. ಕೇವಲ 14 ಎಸೆತಗಳಲ್ಲಿ 6 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ ಮೂಲಕ ರಾಹುಲ್ ಅರ್ಧಶತಕ ಸಿಡಿಸಿ ಅತಿವೇಗದ ಅರ್ಧ ಶತಕದ ದಾಖಲೆ ತಮ್ಮದಾಗಿಸಿಕೊಂಡರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here