ಕಾಮನ್‌ವೆಲ್ತ್ ಶೂಟಿಂಗ್:ಭಾರತದ ಶೂಟರ್ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕ... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ಏಪ್ರಿಲ್ 11, 2018

ಕಾಮನ್‌ವೆಲ್ತ್ ಶೂಟಿಂಗ್:ಭಾರತದ ಶೂಟರ್ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕ...

ಗೋಲ್ಡ್‌ಕೋಸ್ಟ್, ಎ.12: ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ 50 ಮೀ. ರೈಫಲ್ ಪ್ರೋನ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ತೇಜಸ್ವಿನಿ ಸಾವಂತ್ ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
ಒಟ್ಟು 602.2 ಅಂಕ ಗಳಿಸಿರುವ ತೇಜಸ್ವಿನಿ ದ್ವಿತೀಯ ಸ್ಥಾನ ಪಡೆದರು. ಸಿಂಗಾಪುರದ ಲಿಂಡ್ಸೆ ವೆಲಾಸೊ ದಾಖಲೆ 621 ಅಂಕ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಸ್ಕಾಟ್ಲೆಂಡ್‌ನ ಸಿಯೊನೈಡ್ ಮೆಕ್‌ಇಂಟೊಶ್(618.1) ಕಂಚಿನ ಪದಕ ಜಯಿಸಿದ್ದಾರೆ.ಮಹಿಳೆಯರ 50 ಮೀ. ರೈಫಲ್ ಪ್ರೋನ್‌ನಲ್ಲಿ ಫೈನಲ್‌ಗೆ ತಲುಪಿದ್ದ ಭಾರತದ ಇನ್ನೋರ್ವ ಶೂಟರ್ ಅಂಜುಮ್ ವೌದ್ಗಿಲ್ ಒಟ್ಟು 602.2 ಅಂಕ ಗಳಿಸಿ 16ನೇ ಸ್ಥಾನ ಪಡೆದಿದ್ದಾರೆ.
ಗೇಮ್ಸ್‌ನ 8ನೇ ದಿನವಾದ ಗುರುವಾರ ತೇಜಸ್ವಿನಿ ಭಾರತಕ್ಕೆ 25ನೇ ಪದಕ ಗೆದ್ದುಕೊಟ್ಟಿದ್ದಾರೆ. 37ರ ಹರೆಯದ ಸಾವಂತ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 6ನೇ ಪದಕ ಗೆದ್ದುಕೊಂಡರು. 2006ರ ಗೆಮ್ಸ್‌ನಲ್ಲಿ ಎರಡು ಚಿನ್ನ ಜಯಿಸಿದ್ದ ಅವರು 2010ರ ಗೇಮ್ಸ್‌ನಲ್ಲಿ ಬೆಳ್ಳಿ ಹಾಗೂ ಕಂಚು ಜಯಿಸಿದ್ದರು.
ಅರ್ಜುನ ಪ್ರಶಸ್ತಿ ವಿಜೇತ ಸಾವಂತ್ 2010ರಲ್ಲಿ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಮಹಿಳಾ ಶೂಟರ್ ಎನಿಸಿಕೊಂಡಿದ್ದರು. ಆದರೆ, ಅವರು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here