ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿನ್ನೆ ನಿಧನರಾದ ಕರ್ನಲ್ ರವೀಂದ್ರನಾಥ್ ... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಏಪ್ರಿಲ್ 9, 2018

ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿನ್ನೆ ನಿಧನರಾದ ಕರ್ನಲ್ ರವೀಂದ್ರನಾಥ್ ...

ಬೆಂಗಳೂರು, ಏಪ್ರಿಲ್ 09: ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿನ್ನೆ(ಏ.08) ನಿಧನರಾದ ಕರ್ನಲ್ ರವೀಂದ್ರನಾಥ್ (56 ಎನ್ ಡಿಎ / 66 ಐಎಂಎ)ರವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಡಬೇಕೆಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
'ನಿನ್ನೆ ನಮ್ಮ ದೇಶ, ಓರ್ವ ವೀರ ಯೋಧ ಮತ್ತು ಕರ್ನಾಟಕದ ಮಣ್ಣಿನ ಮಗನನ್ನು ಕಳೆದುಕೊಂಡಿದೆ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ 2 ರಾಜ್ ರೈಫಲ್ಸ್ ನ ಕಮಾಂಡಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದ ಕರ್ನಲ್ ಎಂ.ಬಿ. ರವೀಂದ್ರನಾಥ್ ರವರು (ನಿವೃತ್ತ) ನಿಧನರಾಗಿದ್ದಾರೆ. ಕರ್ನಲ್ ರವೀಂದ್ರನಾಥ್ ರವರು ರಾಷ್ಟ್ರಕ್ಕಾಗಿ ಸಲ್ಲಿಸಿದ ಸೇವೆಗಾಗಿ, ಅದರಲ್ಲೂ ವಿಶೇಷವಾಗಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಅವರ ಕೊಡುಗೆಗಾಗಿ 'ವೀರ ಚಕ್ರ' ಗೌರವ ಸಂದಿದೆ. ಅವರು ನಮ್ಮ ಆದರ ಮತ್ತು ಗೌರವಕ್ಕೆ ಅರ್ಹರಾಗಿರುತ್ತಾರೆ' ಎಂದು ಅವರು ಹೇಳಿದ್ದಾರೆ.
'ಕರ್ನಾಟಕದ ಮತ್ತು ದಾವಣಗೆರೆಯ ಹೆಮ್ಮೆಯ ಮಗನಾದ ಕರ್ನಲ್ ರವೀಂದ್ರನಾಥ್ ರವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಿಕೊಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಿದ್ದೇನೆ. ಆ ಮೂಲಕ ನಮ್ಮ ನಾಡಿನ ಹೆಮ್ಮೆಯ ಪುತ್ರನ ಅಪ್ರತಿಮ ದೇಶ ಸೇವೆಗೆ ನಾವು ಕೃತಜ್ಞತೆ ಸಲ್ಲಿಸಿದಂತಾಗುತ್ತದೆ' ಎಂದು ಅವರು ಕೋರಿಕೆ ಮಾಡಿಕೊಂಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here