ಬೆಂಗಳೂರು ನಗರಕ್ಕೆ ಬಂದ ಕೇಂದ್ರ ಪಡೆ.... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಏಪ್ರಿಲ್ 9, 2018

ಬೆಂಗಳೂರು ನಗರಕ್ಕೆ ಬಂದ ಕೇಂದ್ರ ಪಡೆ....

ಬೆಂಗಳೂರು, ಏ.9-ಚುನಾವಣಾ ಭದ್ರತೆಗಾಗಿ ನಗರದಲ್ಲಿ ಸ್ಥಳೀಯ ಪೊಲೀಸರ ಜೊತೆಗೆ ಕೇಂದ್ರದ ಪಡೆಗಳನ್ನು ಸಹ ನಿಯೋಜಿಸಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು, ಇದುವರೆಗೂ ಆರು ಕಂಪೆನಿ ಕೇಂದ್ರದ ಪಡೆಗಳು ನಗರಕ್ಕೆ ಬಂದಿವೆ. ಅವುಗಳನ್ನು ಕೆಲವು ವಿಭಾಗಗಳಿಗೆ ನಿಯೋಜಿಸಲಾಗಿದೆ. ಇಂದು ಅಥವಾ ನಾಳೆ ಇನ್ನು ಏಳು ಕಂಪೆನಿಯ ಅರೆಸೇನಾ ಪಡೆಗಳು ನಗರಕ್ಕೆ ಬರಲಿವೆ ಎಂದು ಹೇಳಿದರು. ಉತ್ತರ ವಿಭಾಗದ ಕೆಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಕೇಂದ್ರದ ಪಡೆಗಳಿಂದ ಪಥಸಂಚಲನ ನಡೆಸಲಾಯಿತು. ನಗರಕ್ಕೆ ಆಗಮಿಸಿರುವ ಕೇಂದ್ರ ಪಡೆಗಳಲ್ಲಿ ಆರ್‍ಎಎಫ್, ಐಟಿಬಿಟಿ, ಸಿಐಎಸ್‍ಎಫ್ ಸೇರಿದಂತೆ ಇನ್ನಿತರ ಕಂಪೆನಿಗಳು ಸೇರಿವೆ. ನಗರದಲ್ಲಿ ಮುಕ್ತ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here