ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ. ಅನುಷ್ಕಾ ನಟನೆಯೊಂದೇ ಅಲ್ಲ ನಿರ್ಮಾಣ ಕ್ಷೇತ್ರದಲ್ಲೂ ಹೆಸರು ಮಾಡಿದ್ದಾರೆ. ಅನುಷ್ಕಾ ಖಾತೆಗೆ ಈಗ ಇನ್ನೊಂದು ಯಶಸ್ಸಿನ ಗರಿ ಸೇರಿದೆ. ಅನುಷ್ಕಾ ಶರ್ಮಾಗೆ ದಾದಾಸಾಹೇಬ್ ಫಾಲ್ಕೆ ಎಕ್ಸಲೆನ್ಸ್ ಪ್ರಶಸ್ತಿ ಸಿಗ್ತಿದೆ.
25ನೇ ವಯಸ್ಸಿನಲ್ಲಿಯೇ ಸಹೋದರನ ಜೊತೆ ಅನುಷ್ಕಾ ನಿರ್ಮಾಣ ಕಂಪನಿ ಶುರು ಮಾಡಿದ್ದರು. ಕ್ಲೀನ್ ಸ್ಟೇಟ್ ಫಿಲ್ಮ್ಸ್ ಕಂಪನಿ ಹೊಸ ಹೊಸ ಭಿನ್ನ ಚಿತ್ರಗಳನ್ನು ನೀಡುವಲ್ಲಿ ಯಶಸ್ಸಿಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಪ್ರಶಸ್ತಿ ನೀಡ್ತಿರುವುದಾಗಿ ಆಯ್ಕೆ ಸಮಿತಿ ಹೇಳಿದೆ.
ಅನುಷ್ಕಾ ಶರ್ಮಾ ಸಹೋದರ ಕರ್ಣೇಶ್ ಶರ್ಮಾ ಜೊತೆ ಸೇರಿ ಎನ್ ಹೆಚ್ 10, ಪಿಲ್ಲೌರಿ ಹಾಗೂ ಪರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಮೂರು ಚಿತ್ರಗಳಲ್ಲಿ ಖುದ್ದು ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ನಿರ್ಮಾಣ ಕಂಪನಿ ಬ್ಯಾನರ್ ಅಡಿ ನಿರ್ಮಾಣವಾದ ಚಿತ್ರಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ಇದೇ ಕಾರಣಕ್ಕೆ ದಾದಾಸಾಹೇಬ್ ಫಾಲ್ಕೆ ಎಸ್ಕಲೆನ್ಸ್ ಪ್ರಶಸ್ತಿ ನೀಡಲಾಗ್ತಿದೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ