ಪಾಕ್,ಭಯೋತ್ಪಾದಕ ಹಾಗೂ ಮತ್ತೊಂದೆಡೆ ಚೀನಾ,ವಿರುದ್ಧ ದಾಳಿಗೆ ಭಾರತಕ್ಕೆ ಬರಲಿವೆ ಕಿಲ್ಲರ್ ಡ್ರೋಣ್'ಗಳು... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಏಪ್ರಿಲ್ 20, 2018

ಪಾಕ್,ಭಯೋತ್ಪಾದಕ ಹಾಗೂ ಮತ್ತೊಂದೆಡೆ ಚೀನಾ,ವಿರುದ್ಧ ದಾಳಿಗೆ ಭಾರತಕ್ಕೆ ಬರಲಿವೆ ಕಿಲ್ಲರ್ ಡ್ರೋಣ್'ಗಳು...

ನವದೆಹಲಿ, ಏ.20-ಒಂದೆಡೆ ಪಾಕಿಸ್ತಾನ, ಇನ್ನೊಂದೆಡೆ ಚೀನಾ ಮತ್ತೊಂದೆಡೆ ಭಯೋತ್ಪಾದಕರ ಆತಂಕವನ್ನು ಪರಿಣಾಮಕಾರಿಯಾಗಿ ಎದುರಿಸಲು ಭಾರತ, ಅಮೆರಿಕದಿಂದ ಅತ್ಯಾಧುನಿಕ ಆಕ್ರಮಣಕಾರಿ ಡ್ರೋಣ್‍ಗಳನ್ನು ಹೊಂದಲಿದೆ. ಮಾನವರಹಿತ ವೈಮಾನಿಕ ವ್ಯವಸ್ಥೆ ಹಾಗೂ ಕಿಲ್ಲರ್ ಡ್ರೋಣ್‍ಗಳನ್ನು ರಫ್ತು ಮಾಡುವ ತನ್ನ ಹೊಸ ನೀತಿಯನ್ನು ಅಮೆರಿಕ ಪ್ರಕಟಿಸಿದೆ. ಇದರಿಂದಾಗಿ ಭಾರತ ಸೇನೆ ಅಮೆರಿಕದಿಂದ 22 ಪ್ರಿಡೆಟರ್ ಬಿ ಸೀ ಗಾರ್ಡಿಯನ್ ಡ್ರೋಣ್‍ಗಳನ್ನು ಖರೀದಿಸುವ ಬಗ್ಗೆ ಮಾತುಕತೆ ನಡೆಸುತ್ತಿದೆ.
ಈ ಅತ್ಯಾಧುನಿಕ ಆಕ್ರಮಣಕಾರಿ ಡ್ರೋಣ್‍ಗಳು ಕ್ಯಾತೆ ತೆಗೆಯುತ್ತಿರುವ ಪಾಕಿಸ್ತಾನ ಮತ್ತು ಚೀನಾ ವಿರುದ್ಧ ಭೂಮಿ ಮತ್ತು ಸಾಗರ ಮಾರ್ಗದಿಂದ ದಾಳಿ ಕಾರ್ಯಾಚರಣೆಗಳಿಗೆ ಸಶಸ್ತ್ರ ಪಡೆಗಳ ಸಾಮಥ್ರ್ಯ ವೃದ್ಧಿಸುವುದೇ ಅಲ್ಲದೆ, ಬಾಲ ಬಿಚ್ಚುತ್ತಿರುವ ಭಯೋತ್ಪಾದಕರ ನಿಗ್ರಹಕ್ಕೂ ಸಹಕಾರಿಯಾಗಲಿದೆ.
ಭಯೋತ್ಪಾದನೆ ನಿಗ್ರಹ ಉದ್ದೇಶಗಳ ಈಡೇರಿಕೆಗಾಗಿ ತನ್ನ ಮಿತ್ರ ರಾಷ್ಟ್ರಗಳಿಗೆ ಮಾನವರಹಿತ ಡ್ರೋಣ್‍ಗಳನ್ನು ರಫ್ತು ಮಾಡಲು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಇತ್ತೀಚೆಗೆ ಹೊಸ ನೀತಿಯನ್ನು ಪ್ರಕಟಿಸಿದರು. ಇದು ಪ್ರಸ್ತುತ ಸಂದರ್ಭದಲ್ಲಿ ಭಾರತಕ್ಕೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ.
ಈ ಕಿಲ್ಲರ್ ಡ್ರೋಣ್‍ಗಳು ಭಾರತೀಯ ಸೇನಾ ಪಡೆಗೆ ಸೇರ್ಪಡೆಯಾದರೆ, ಗಡಿ ನಿಯಂತ್ರಣ ರೇಖೆ ಬಳಿ ತಂಟೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ಹಾಗೂ ಭಯೋತ್ಪಾದಕರ ಆಶ್ರಯ ಮತ್ತು ಅಡಗು ತಾಣಗಳನ್ನು(ಲಾಂಚ್ ಪ್ಯಾಡ್) ಧ್ವಂಸ ಮಾಡಲು ಭಾರತಕ್ಕೆ ಸಹಕಾರಿಯಾಗಲಿದೆ. ಅಲ್ಲದೇ ಸಾಗರ ಪ್ರದೇಶಗಳಲ್ಲಿ ವೈರಿ ದೇಶಗಳ ಅತಿಕ್ರಮಣ ತಡೆಗಟ್ಟುವಲ್ಲಿಯೂ ಭಾರತದ ಶಸ್ತಾಸ್ತ್ರ ಕೋಠಿಗೆ ಈ ಡ್ರೋಣ್‍ಗಳನ್ನು ಸೇರ್ಪಡೆ ಮಾಡುವ ಸಂಬಂಧ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here