ಬೆಂಗಳೂರು: ಬೇಸಿಗೆ ಬಿಸಿಲಿನಿಂದ ಬಳಲುತ್ತಿರುವ ರಾಜ್ಯದ ಜನರನ್ನು ತಪ್ಪಾಗಿಸುವ ನಿಟ್ಟಿನಲ್ಲಿ ವರುಣ ಆಗಮಿಸಲಿದ್ದಾರೆ ಎನ್ನಲಾಗಿದೆ.
ಹೌದು, ರಾಜ್ಯಾದ್ಯಂತ ನಾಳೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಳೆಯ ಜೊತೆ ಗುಡುಗು, ಮಿಂಚು, ಗಾಳಿ ಬೀಸುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಕೂಡ ಮೋಡ ಕವಿದ ವಾತಾವರಣವಿರಲಿದ್ದು. ಅಲ್ಲಲ್ಲಿ ಚುದುರಿದ ಮಳೆಯಾಗಲಿದೆ ಎಂದು ಶ್ರೀನಿವಾಸ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇನ್ನು ನಾಳೆ ಮನೆಯಿಂದ ಹೊರಗೆ ಕಾಲಿಡುವ ಮುನ್ನ ಕೈನಲ್ಲಿ ಛತ್ರಿ ಸೇರಿದಂತೆ ಇನ್ನಿತ್ತರ ಮಳೆಯಿಂದ ರಕ್ಷಣೆ ಪಡೆಯುವ ವಸ್ತುಗಳು ಇದ್ದರೆ ಒಳಿತು. ಇಲ್ಲದೇ ಹೋದರೆ ಮಳೆಯಲ್ಲಿ ನೆನೆಯುವಿರಿ(ಸಾಂದರ್ಭಿಕಚಿತ್ರ)
.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ