ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಗೆ ಮತ್ತೆ ಸಂಕಷ್ಟ ಶುರುವಾಗಿದೆ. ಹೈದ್ರಾಬಾದ್ ನ ಇಬ್ಬರು ಪ್ರಿಯಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಕಣ್ಣು ಹೊಡೆಯುವುದು ಹಾಗೂ ಕಣ್ಣಿನ ಹುಬ್ಬು ಹಾರಿಸುವುದು ಇಸ್ಲಾಂಗೆ ವಿರುದ್ಧ ಎಂದು ದೂರಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಿಯಾ ಕಣ್ಸನ್ನೆ ವಿರುದ್ಧ ದೂರು ದಾಖಲಾಗಿದೆ.
ಮಲೆಯಾಳಂ ಬೆಡಗಿ ಪ್ರಿಯಾ ಕಣ್ಸನ್ನೆ ಹಾಡಿನಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ. ಹಾಡಿನ ಸಾಹಿತ್ಯ ಹಾಗೂ ಅದ್ರಲ್ಲಿ ತೋರಿಸಿರುವ ದೃಶ್ಯ ಧರ್ಮ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ. ಈ ಆರೋಪವನ್ನು 'ಒರು ಅದಾರ ಲವ್' ನಿರ್ದೇಶಕ ಓಮರ್ ಲುಲು ಆಕ್ಷೇಪಿಸಿದ್ದಾರೆ.
ಉತ್ತರ ಕೇರಳದ ಮಲಬಾರ್ ನಲ್ಲಿ ಪ್ರತಿ ಮದುವೆ ಸಮಾರಂಭದ ವೇಳೆ ಈ ಹಾಡನ್ನು ಹಾಡಲಾಗುತ್ತದೆ. ಮಲಬಾರ್ ನ ಮುಸ್ಲಿಮರು 1978ರಿಂದಲೇ ಈ ಹಾಡನ್ನು ಹಾಡುತ್ತಿದ್ದಾರೆ. ಈವರೆಗೆ ಈ ಹಾಡು ಆಕ್ಷೇಪಾರ್ಹವಾಗಿರಲಿಲ್ಲ. ಸಿನಿಮಾದಲ್ಲಿ ಮಾತ್ರ ಏಕೆ ಆಕ್ಷೇಪಾರ್ಹ ಎಂದು ಲುಲು ಪ್ರಶ್ನೆ ಮಾಡಿದ್ದಾರೆ.
'ಒರು ಅದಾರ ಲವ್' ಚಿತ್ರದಿಂದ ಮಾಣಿಕ್ಯ ಮಲರಾಯ ಪೂವಿ ಹಾಡನ್ನು ತೆಗೆದು ಹಾಕುವಂತೆಯೂ ಒತ್ತಾಯ ಕೇಳಿ ಬಂದಿದೆ. ಈ ಹಿಂದೆ ಕೂಡ ಪ್ರಿಯಾ ಹಾಗೂ ಚಿತ್ರ ನಿರ್ದೇಶಕರ ವಿರುದ್ಧ ದೂರು ದಾಖಲಾಗಿತ್ತು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ