ಶ್ರೀಹರಿಕೋಟಾ. ಏ.11- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇಂದು ಮತ್ತೊಂದು ಮಹತ್ವದ ಸಾಧನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಮಾರ್ಗದರ್ಶಿ(ಪಥದರ್ಶಿ) ಉಪಗ್ರಹ(ನ್ಯಾವಿಗೇಷನ್ ಸ್ಯಾಟಿಲೈಟ್)ವನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ಮಾಡಿ ಕಕ್ಷೆಗೆ ಸೇರಿಸುವಲ್ಲಿ ಸಫಲವಾಗಿದೆ. ಇದರೊಂದಿಗೆ ನಾವಿಕ್ ಸಮೂಹದ ಎಂಟನೇ ಉಪಗ್ರಹ ಅಂತರಿಕ್ಷಕ್ಕೆ ಸೇರ್ಪಡೆಯಾದಂತಾಗಿದೆ. ಸ್ವದೇಶಿ ಜಿಪಿಎಸ್ ಕಾರ್ಯಾಚರಣೆಗಾಗಿ ಅಭಿವೃದ್ದಿಗೊಳಿಸಲಾಗಿರುವ ರೀಜನಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ(ನಾವಿಕ್)ಸಮೂಹಕ್ಕೆ ಎಂಟನೇ ಉಪಗ್ರಹವನ್ನು ಸೇರ್ಪಡೆಗೊಳಿಸುವ ಮೂಲಕ ಇಸ್ರೋ ನಾವಿಕ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಂದು ಮುಂಜಾನೆ 4 ಗಂಟೆ 4 ನಿಮಿಷಕ್ಕೆ ಸರಿಯಾಗಿ ಮಾರ್ಗದರ್ಶಿ ಐಆರ್‍ಎನ್‍ಎಸ್‍ಎಸ್-2 ಉಪಗ್ರಹ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್‍ಎಲ್‍ವಿ-ಸಿ41 ರಾಕೆಟ್ ಮೂಲಕ ಅಂತರಿಕ್ಷಕ್ಕೆ ಉಡಾವಣೆ ಮಾಡಲಾಗಿದೆ. ನಭಕ್ಕೆ ಚಿಮ್ಮಿದ ಉಪಗ್ರಹವು 19 ನಿಮಿಷಗಳಲ್ಲಿ ಕಕ್ಷೆಗೆ ಸೇರಿದೆ. ಈ ಉಪಗ್ರಹ ಪಥದರ್ಶಿ ಮತ್ತು ವಲಯ ಮಾಹಿತಿ ಕಾರ್ಯಾಚರಣೆಯನ್ನು ಆರಂಭಿಸಿದೆ.
ಪೂಲ್‍ಫ್ರೂಫ್ ಉಪಗ್ರಹ ಆಧರಿತ ನ್ಯಾವಿಗೇಷನ್ ಸಿಗ್ನಲ್‍ಗಳನ್ನು ಒದಗಿಸಲು ಏಳು ಕ್ರಿಯಾತ್ಮಕ ಉಪಗ್ರಹಗಳ ಅಗತ್ಯ ಪೂರ್ಣಗೊಂಡಿದೆ. ಕಕ್ಷೆಯಲ್ಲಿ ದೋಷಯುಕ್ತ ಕಾರ್ಯನಿರ್ವಹಣೆಯಲ್ಲಿರುವ ಐಆರ್‍ಎನ್‍ಎಸ್‍ಎಸ್-1ಎ ಬದಲಿಗೆ ಈ ಉಪಗ್ರಹವನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ.
ನಾವಿಕ್ ಸಮೂಹವು ಸಮರ್ಥವಾಗಿ ನಿಯೋಜಿತ ವರ್ಷಗಳವರೆಗೆ ಕಾರ್ಯನಿರ್ವಹಿಸಲಿದೆ. ಈ ಸಾಧನೆಗಾಗಿ ಇಡೀ ಇಸ್ರೋ ವಿಜ್ಞಾನಿಗಳ ತಂಡಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಯಶಸ್ಸಿಗಾಗಿ ಇಸ್ರೋ ಕುಟುಂಬ ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದೆ. ಇದರಿಂದಾಗಿ ಈ ನ್ಯಾವಿಗೇಷನ್ ಸ್ಯಾಟಲೈಟ್ ಯಶಸ್ವಯಾಗಿದೆ. ಇದು ನನಗೆ ಅತೀವ ಸಂತಸ ನೀಡಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ.

ಈ ಹಿಂದೆ ಉಡಾವಣೆಯಾಗಿದ್ದ ಐಆರ್‍ಎನ್‍ಎಸ್‍ಎಸ್-1ಎ ಕಳೆದ ಎರಡು ವರ್ಷಗಳಿಂದ ತನ್ನ ಮೂರು ರುಬಿಡಿಯಂ ಅಣು ಗಡಿಯಾರಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ. ಈಗ ಉಡ್ಡಯನವಾಗಲಿರುವ ಐಆರ್‍ಎನ್‍ಎಸ್‍ಎಸ್-2, ಹಳೆಯ ಉಪಗ್ರಹವನ್ನು ಬದಲಿಸಲಿದೆ ಎಂದು ಡಾ.ಶಿವನ್ ಮಾಹಿತಿ ನೀಡಿದ್ಧಾರೆ. ಇಸ್ರೋ ತಂಡವು ಮಾರ್ಗದರ್ಶಿ ಉಪಗ್ರಹ ಉಡ್ಡಯನದ ಅಂತಿಮ ಹಂತಕ್ಕಾಗಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂದು ಡಾ. ಶಿವನ್ ವಿವರಿಸಿದ್ದಾರೆ.
ಪ್ರಧಾನ ಅಭಿನಂದನೆ :
ನ್ಯಾವಿಗೇಷನ್ ಸ್ಯಾಟಲೈಟ್‍ವನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ಮಾಡಿ ಕಕ್ಷೆಗೆ ಸೇರಿಸುವಲ್ಲಿ ಸಫಲವಾಗಿರುವ ಇಸ್ರೋ ವಿಜ್ಞಾನಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಹೊಸ ಶ್ರೇಣಿಯ ಮಾರ್ಗದರ್ಶಿ ಉಪಗ್ರಹ ಶುಷ್ಕ ಸಾಂದ್ರತೆಯ 600 ಕೆಜಿ ಒಳಗೊಂಡಂತೆ 1,425 ಕಿಲೋ ತೂಕ ಹೊಂದಿದೆ. ಇದನ್ನು ಇಸ್ರೋ ಸಹಯೋಗದೊಂದಿಗೆ ಬೆಂಗಳೂರಿನ ಆಲ್ಫಾ ಡಿಸೈಟ್ ಟೆಕ್ನೋಲಾಜಿ ಸಂಸ್ಥೆ ಅಭಿವೃದ್ದಿಗೊಳಿಸಿದೆ. 10 ವರ್ಷಗಳ ಕಾರ್ಯನಿರ್ವಹಣೆ ಕ್ಷಮತೆ ಇದೆ. ಭಾರತೀಯ ಸಮೂಹದೊಂದಿಗೆ ಮಾರ್ಗದರ್ಶಿ ಯೋಜನೆ (ಐಅರ್‍ಎನ್‍ಎಸ್‍ಎಸ್) ಅಡಿ ಈ ಸಮೂಹಕ್ಕೆ ಸೇರಲಿರುವ ಎಂಟನೇ ಉಪಗ್ರಹವಾಗಲಿದೆ.

ಏಳು ದೇಶೀಯ ಉಪಗ್ರಹ ಮಾರ್ಗದರ್ಶಿ ವ್ಯವಸ್ಥೆಯು ಅಮೆರಿಕದ ಜಿಪಿಎಸ್‍ನ ಪುಟ್ಟ ನಮೂನೆ. ಈಗಾಗಲೇ ಇಂಥ 31 ಉಪಗ್ರಹಗಳು ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ದೇಸಿ ಜಿಪಿಎಸ್‍ನನ್ನು ಭಾರತ ಮತ್ತು ಅದರ ಸರಹದ್ದಿನ 1,500 ಕಿ.ಮೀ. ವ್ಯಾಪ್ತಿಯ ಪ್ರದೇಶದ ಬಳಕೆದಾರರಿಗೆ ನಿಖರ ಸ್ಥಾನ ಮಾಹಿತಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಹಳೆಯ ಐಆರ್‍ಎನ್‍ಎಸ್‍ಎಸ್-1ಎ ಬದಲಾವಣೆಗೆ ಕಳೆದ ವರ್ಷ ಆಗಸ್ಟ್ 31ರಂದು ಇಸ್ರೋ ಉಡಾವಣೆ ಮಾಡಲು ಯತ್ನಿಸಿದ್ದ ಐಆರ್‍ಎನ್‍ಎಸ್‍ಎಸ್-1ಎಚ್ ವಿಫಲವಾಗಿತ್ತು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ