ಮೊಬೈಲ್ ಅಪ್ಲಿಕೇಷನ್ ಮೂಲಕ ಶುಲ್ಕ ಪಾವತಿ,ಟೋಲ್ ಪ್ಲಾಜಾದಲ್ಲಿ ಪಾವತಿಗಾಗಿ ನಿಲ್ಲುವ ತಲೆನೋವೇ ಇಲ್ಲ!... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಏಪ್ರಿಲ್ 20, 2018

ಮೊಬೈಲ್ ಅಪ್ಲಿಕೇಷನ್ ಮೂಲಕ ಶುಲ್ಕ ಪಾವತಿ,ಟೋಲ್ ಪ್ಲಾಜಾದಲ್ಲಿ ಪಾವತಿಗಾಗಿ ನಿಲ್ಲುವ ತಲೆನೋವೇ ಇಲ್ಲ!...

ನವದೆಹಲಿ, ಏಪ್ರಿಲ್ 21: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಗಾಗಿ ಇನ್ನು ಹೆಚ್ಚು ಸಮಯ ವ್ಯಯ ಮಾಡಬೇಕಿಲ್ಲ. ಮೊಬೈಲ್ ಅಪ್ಲಿಕೇಷನ್ ಮೂಲಕ ಶುಲ್ಕ ಪಾವತಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದರಿಂದ ವಾಹನ ಸವಾರರ ಅಮೂಲ್ಯ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ. ಬೆಂಗಳೂರು-ಚೆನ್ನೈ, ದೆಹಲಿ-ಮುಂಬೈ, ದೆಹಲಿ-ಚಂಡೀಘಡ, ದೆಹಲಿ-ಕೋಲ್ಕತ್ತ ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಿದ್ಧತೆ ನಡೆದಿದೆ. ಮೊಬೈಲ್ ಅಪ್ಲಿಕೇಷನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯದಲ್ಲೇ ಬಿಡುಗಡೆ ಮಾಡಲಿದೆ.
ಬಳಕೆ ಹೇಗೆ: ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ, ವಾಹನ ವಿವರಗಳನ್ನು ದಾಖಲಿಸಬೇಕು. ವಾಹನದ ನೋಂದಣಿಯನ್ನು ಮರುಪರಿಶೀಲಿಸಿ ವಾಹನದ ಮಾಲೀಕತ್ವ ಮತ್ತು ನನೋಂದಣಿಯನ್ನು ದೃಢೀಕರಿಸಲಾಗುತ್ತದೆ. ಅಪ್ಲಿಕೇಷನ್ ನಲ್ಲಿರುವ ಪ್ರಿಪೇಯ್ಡ್ ವ್ಯಾಲೆಟ್ ಬಳಸಿ ಹಣ ಪಾವತಿಸಬೇಕು. ವಾಹನ ಟೋಲ್ ಗೇಟ್ ತಲುಪುತ್ತಲೇ ಕ್ಯೂ ಆರ್ ಕೋಡ್ ಸೃಜನೆಯಾಗುತ್ತದೆ. ಟೋಲ್ ಪ್ಲಾಜಾ ತಲುಪುತ್ತಲೇ ಚಾಲಕ ಅದನ್ನು ಸ್ಕ್ಯಾನ್ ಮಾಡಿ, ಮುಂದೆ ಸಾಗಬಹುದಾಗಿದೆ.
ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವು ಮೊಬೈಲ್ ವ್ಯಾಲೆಟ್ ಗಳು, ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಗಳಿಂದಲೇ ನೇರೌಆಗಿ ಪಾವತಿಯಾಗಲಿದ್ದು, ವಾಹನಗಳಿಗೆ ರಿಚಾರ್ಜ್ ಆಧಾರಿತ ಫಾಸ್ಟ್ ಟ್ಯಾಗ್ ಸಹ ಅತ್ಯವಿರುವುದಿಲ್ಲ.
ಮತ್ತೊಂದು ವ್ಯವಸ್ಥೆಯೆಂದರೆ ಮೊಬೈಲ್ ಅಪ್ಲಿಕೇಷನ್ ನನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಪಾವತಿಯಾಗುವ ವ್ಯವಸ್ಥೆಯಾಗಿರುವ ಯುಪಿಐ ಜತೆ ಲಿಂಕ್ ಮಾಡಬೇಕು. ಇದರಿಂದ ಈ ವಾಹನ ಟೋಲ್ ಪ್ಲಾಜಾ ತಲುಪುತ್ತಿದ್ದಂತೆ ವಾಹನದ ನಿರ್ದಿಷ್ಟ ಟೋಲ್ ದರವು ಯುಪಿಐ ವ್ಯವಸ್ಥೆಯಿಂದ ಕಡಿತಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here