ಬೆಂಗಳೂರು: ಸ್ಪೋಟಕ ಬ್ಯಾಟ್ಸ್ ಮನ್ ಎ.ಬಿ. ಡಿ'ವಿಲಿಯರ್ಸ್ ಬಿಡುವಿನ ವೇಳೆಯಲ್ಲಿ ಬೆಂಗಳೂರಿನಲ್ಲಿ ಆಟೋದಲ್ಲಿ ಸುತ್ತಾಡಿದ್ದಾರೆ.
ಪತ್ನಿ ಹಾಗೂ ಪುತ್ರನೊಂದಿಗೆ ಆಟೋ ಏರಿದ ಡಿ'ವಿಲಿಯರ್ಸ್ 'ಈ ಸಲ ಕಪ್ ನಮ್ದೇ' ಎಂದು ಹೇಳಿದ್ದಾರೆ. ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ತಂಡದ ಅಭಿಮಾನಿಗಳೊಂದಿಗೆ ಸಂಭ್ರಮಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು, ಅಭಿಮಾನಿಗಳು 'ಈ ಸಲ ಕಪ್ ನಮ್ದೇ' ಎನ್ನುವ ಮೂಲಕ ಗಮನ ಸೆಳೆದಿದ್ದಾರೆ.
ತಂಡದ ಆಟಗಾರನಾಗಿರುವ ಡಿ'ವಿಲಿಯರ್ಸ್ ತಾವು ತಂಗಿರುವ ಹೋಟೆಲ್ ನಿಂದ ಪತ್ನಿ ಡೇನಿಯಲ್, ಪುತ್ರ ಅಬ್ರಹಾಂ ಡಿ'ವಿಯಲಿಯರ್ಸ್ ಅವರೊಂದಿಗೆ ಆಟೋದಲ್ಲಿ ಬೆಂಗಳೂರಿನಲ್ಲಿ ಸುತ್ತಾಡಿದ್ದಾರೆ.
ಡಿ'ವಿಲಿಯರ್ಸ್ ಅವರನ್ನು ಕಂಡ ಅಭಿಮಾನಿಗಳು 'ಈ ಸಲ ಕಪ್ ನಮ್ದೇ' ಎಂದು ಹೇಳಿದ್ದು, ಇದರಿಂದ ಸಂತಸಗೊಂಡ ಡಿ'ವಿಯಲಿಯರ್ಸ್ ಹಾಗೂ ಅವರ ಪತ್ನಿ, ಮಗ ಕೂಡ 'ಈ ಸಲ ಕಪ್ ನಮ್ದೇ' ಎಂದು ಪ್ರತಿಕ್ರಿಯಿಸಿದ್ದಾರೆ. ಡಿ'ವಿಲಿಯರ್ಸ್ ಫ್ಯಾಮಿಲಿಯೊಂದಿಗೆ ಬೆಂಗಳೂರಿನಲ್ಲಿ ಸುತ್ತಾಡಿರುವ ವಿಡಿಯೋ ವೈರಲ್ ಆಗಿದೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ