ಭವಿಷ್ಯ
ಮೇಷ ರಾಶಿ
ತೊಂದರೆಯಲ್ಲಿರುವ ಯಾರಿಗಾದರೂ ಸಹಾಯ ಮಾಡಲು ನಿಮ್ಮ ಚೈತನ್ಯವನ್ನು ಬಳಸಿ. ಲೋಕೋಪಕಾರಕ್ಕಾಗಲ್ಲದಿದ್ದಲ್ಲಿ ಈ ನಶ್ವರ ದೇಹದ ಉಪಯೋಗವಾದರೂ ಏನು. ಇದು ನಿರೀಕ್ಷಿಸಲಾದ -ಆರ್ಥಿಕ ಲಾಭಗಳು- ತಡವಾಗುತ್ತವೆ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ನಿಮ್ಮ ಸಂಗಾತಿಯ ಕೆಟ್ಟ ಆರೋಗ್ಯದಿಂದಾಗಿ ಇಂದು ಪ್ರಣಯಕ್ಕೆ ಧಕ್ಕೆಯಾಗುತ್ತದೆ. ನಿಮ್ಮ ಪಾಲುದಾರರು ನಿಮ್ಮ ಯೋಜನೆಗಳಿಗೆ ಅಂಟಿಕೊಂಡಿರುವಂತೆ ಮಾಡುವಲ್ಲಿ ನೀವು ಸಮಸ್ಯೆಗಳನ್ನು ಹೊಂದಿರುತ್ತೀರಿ. ಕೆಲವು ಮನರಂಜನೆ ಮತ್ತು ಉಲ್ಲಾಸಕ್ಕೆ ಒಳ್ಳೆಯ ದಿನ. ನಿಮ್ಮ ಸಂಗಾತಿ ಇಂದು ನಿಮ್ಮ ದೈನಂದಿನ ಅಗತ್ಯಗಳನ್ನು ಈಡೇರಿಸುವುದನ್ನು ನಿಲ್ಲಿಸಬಹುದು ಹಾಗೂ ಅಂತಿಮವಾಗಿ ಇದು ನಿಮ್ಮ ಮನಸ್ಥಿತಿಯನ್ನು ಹಾಳುಗೆಡವಬಹುದು.
ವೃಷಭ ರಾಶಿ
ಆರೋಗ್ಯದ ಬಗ್ಗೆ ಸ್ವಲ್ಪ ಗಮನ ನೀಡಬೇಕು. ಹಣಕಾಸು ಲಾಭಗಳು ವಿವಿಧ ಮೂಲಗಳಿಂದ ಬರುತ್ತದೆ. ಕಲ್ಪನೆಗಳ ಹಿಂದೆ ಓಡಬೇಡಿ ಹಾಗೂ ಸಾಧ್ಯವಾದಷ್ಟೂ ವಾಸ್ತವವಾದಿಗಳಾಗಿರಿ. ನಿಮ್ಮ ಸ್ನೇಹಿತರ ಜೊತೆ ಸಮಯ ಕಳೆಯಿರಿ –ಇದು ಒಳ್ಳೆಯದನ್ನು ಮಾಡುತ್ತದೆ. ಇಂದು ಯಾರನ್ನೂ ಚುಡಾಯಿಸಬೇಡಿ. ಸ್ನೇಹಿತರು ಮುಖ್ಯ, ಆದರೆ ನೀವು ಕಠಿಣವಾದ ಕೆಲಸದ ದಿನವನ್ನು ಇಂದು ಹೊಂದಲಿರುವುದರಿಂದ ಇಂದು ನಿಮ್ಮ ಸ್ಟೇಟಸ್ ಅನ್ನು "ಬ್ಯುಸಿ" ಎಂದಿಡಿ. ಪ್ರಯಾಣ ಹೊಸ ಸ್ಥಳಗಳನ್ನು ನೋಡಲು ಮತ್ತು ಪ್ರಮುಖರನ್ನು ಭೇಟಿಯಾಗಲು ನಿಮಗೆ ಅವಕಾಶ ನೀಡುತ್ತದೆ. ಇಂದು, ನೀವು ನಿಮ್ಮ ಸಂಗಾತಿಯ ಆರೋಗ್ಯದ ಕಾರಣ ಒತ್ತಡಕ್ಕೊಳಗಾಗಬಹುದು.
ಮಿಥುನ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ನೀವು ಕುಟುಂಬದಲ್ಲಿ ಒಂದು ಸಂಧಿಗಾರನಂತೆ ವರ್ತಿಸುತ್ತೀರಿ. ಎಲ್ಲರ ಸಮಸ್ಯೆಗಳಿಗೂ ಕಿವಿಗೊಡಿ ಹಾಗೂ ವಿಷಯಗಳನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ಅನಿರೀಕ್ಷಿತ ಪ್ರಣಯ ಪ್ರಸಂಗಗಳು ಇಂದು ಎದುರಾಗಬಹುದು. ನೀವು ಕೆಲಸದಲ್ಲಿ ಇಂದು ನಿಜವಾಗಿಯೂ ಏನಾದರೂ ಅದ್ಭುತವಾದದ್ದನ್ನು ಮಾಡಬಹುದು. ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ಇದು ಮದುವೆಯ ಉಜ್ವಲವಾದ ದಿನವನ್ನು ಅನುಭವಿಸುವ ದಿನವಾಗಿದೆ.
ಕರ್ಕ ರಾಶಿ
ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ - ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ಕೆಲಸದಲ್ಲಿ ಮತ್ತು ಮನೆಯಲ್ಲಿ ಒತ್ತಡ ಇಂದು ನಿಮ್ಮನ್ನು ಮುಂಗೋಪಿಗಳೂ ಮತ್ತು ಪ್ರಕ್ಷುಬ್ಧರನ್ನಾಗಿಯೂ ಮಾಡಬಹುದು. ಶ್ರಮಪಡಿ, ಇದು ನಿಮ್ಮ ದಿನವಾದ್ದರಿಂದ ನೀವು ಖಂಡಿತವಾಗಿಯೂ ಅದೃಷ್ಟಶಾಲಿಯಾಗಿರುತ್ತೀರಿ. ವ್ಯವಹಾರದ ಜೊತೆ ಸಂತೋಷವನ್ನು ಬೆರೆಸಬೇಡಿ. ನಿಮ್ಮ ಭಾರೀ ಆತ್ಮವಿಶ್ವಾಸದ ಲಾಭ ತೆಗೆದುಕೊಳ್ಳಿ ಮತ್ತು ಕೆಲವು ಹೊಸ ಗೆಳೆಯರು ಮತ್ತು ಸ್ನೇಹಿತರನ್ನು ಸಂಪಾದಿಸಿ. ನೀವು ವೈವಾಹಿಕ ಜೀವನವೆಂದರೆ ಕೇವಲ ಹೊಂದಾಣಿಕೆಯೆಂದುಕೊಂಡಿದ್ದೀರಾ? ಹೌದಾದಲ್ಲಿ ನೀವು ಇದು ಅದು ನಿಮ್ಮ ಜೀವನದಲ್ಲಿ ಆದ ಅತ್ಯುತ್ತಮ ವಿಷಯವೆಂದು ತಿಳಿದುಕೊಳ್ಳುತ್ತೀರಿ.
ಸಿಂಹ ರಾಶಿ
ನೀವು ವ್ಯಾಯಾಮದ ಮೂಲಕ ನಿಮ್ಮ ತೂಕವನ್ನು ನಿಯಂತ್ರಿಸಬಹುದು. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು. ನಿಮ್ಮ ಬಿಡುವಿನ ಸಮಯವನ್ನು ನಿಸ್ವಾರ್ಥ ಸೇವೆಯಲ್ಲಿ ವಿನಿಯೋಗಿಸಿ. ಇದು ನೀವು ಮತ್ತು ನಿಮ್ಮ ಕುಟುಂಬಕ್ಕೆ ಸಂತೋಷ ನೀಡುತ್ತದೆ. ಇಂದು ಪ್ರೀತಿಯಲ್ಲಿ ನಿಮ್ಮ ವಿವೇಚನಾ ಶಕ್ತಿಯನ್ನು ಬಳಸಿ. ನೌಕರರೊಡನೆ - ಸಹೋದ್ಯೋಗಿಗಳು ಮತ್ತು ಸಹಭಾಗಿಗಳೊಂದಿಗೆ ತೊಂದರೆಗಳ ಸಾಧ್ಯತೆಯನ್ನು ತಳ್ಳಿಹಾಕಲಾಗದು. ನಿಮ್ಮ ದಾರಿಯಲ್ಲಿ ಯಾರೇ ಬಂದರೂ ಸಭ್ಯರೂ ಮತ್ತು ಆಕರ್ಷಕರೂ ಆಗಿರಿ - ನಿಮ್ಮ ಇಂದ್ರಜಾಲದಂಥ ಆಕರ್ಷಣೆಯ ಹಿಂದಿನ ರಹಸ್ಯ ಕಲವರಿಗೆ ಮಾತ್ರವೇ ತಿಳಿದಿದೆ. ಇಂದು ನೀವು ವೈವಾಹಿಕ ಜೀವನದ ಭಾವಪರವಶತೆಯನ್ನು ಅನುಭವಿಸಲು ಸಾಕಷ್ಟು ಅವಕಾಶಗಳನ್ನು ಹೊಂದುತ್ತೀರಿ.
ಕನ್ಯಾ ರಾಶಿ
ಚಿಂತೆಯ ಆಲೋಚನೆಗಳು ನಿಮ್ಮ ಸಂತೋಷವನ್ನು ಹಾಳುಮಾಡಬಹುದು. ಇದು ಕೇವಲ ವಿನಾಶಕಾರಿ ಶಕ್ತಿಯನ್ನು ಮಾತ್ರ ಪಾಲಿಸಿ ಖಿನ್ನತೆಯ ಬೀಜ ಬಿತ್ತುವುದರಿಂದ ಅದಕ್ಕೆ ಅವಕಾಶ ನೀಡಬೇಡಿ. ಯಾವಾಗಲೂ ಒಳ್ಳೆಯದನ್ನು ನಿರೀಕ್ಷಿಸಲು ನಿಮ್ಮನ್ನು ಪ್ರೋತ್ಸಾಹಿಸಕೊಳ್ಳಿ ಹಾಗೂ ದುರ್ಘಟನೆಗಳಲ್ಲೂ ಹಾಸ್ಯವನ್ನು ನೋಡಲು ಪ್ರಯತ್ನಿಸಿ. ನೀವು ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ -ಆದರೆ ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ಭೇಟಿ ನೀಡುವ ಅತಿಥಿಗಳು ನಿಮ್ಮ ಸಂಜೆಯನ್ನು ಆಕ್ರಮಿಸಿಕೊಳ್ಳಬಹುದು. ಪ್ರೀತಿಪಾತ್ರರು ಪ್ರಣಯದ ಮೂಡ್ನಲ್ಲಿರುತ್ತಾರೆ. ನೀವು ಯಾವಾಗಲೂ ಮಾಡಬಯಸಿದ ರೀತಿಯ ಕೆಲಸವನ್ನು ಕಚೇರಿಯಲ್ಲಿ ಇಂದು ನೀವು ಮಾಡಬಹುದು. ನಿಮ್ಮ ಶಕ್ತಿ ಮತ್ತು ನಿಮ್ಮ ಮುಂದಿನ ಯೋಜನೆಗಳನ್ನು ಮರು ನಿರ್ಣಯಿಸುವ ಸಮಯ. ನಿಮ್ಮ ಸಂಗಾತಿಯು ಅವನ / ಅವಳ ಜೀವನದಲ್ಲಿ ನಿಮ್ಮ ಮೌಲ್ಯವನ್ನು ವಿವರಿಸುವ ಕೆಲವು ಸುಂದರ ಪದಗಳನ್ನು ಇಂದು ನಿಮಗೆ ನೆನಪಿಸುತ್ತಾರೆ.
ತುಲಾ ರಾಶಿ
ನೀವು ಅತಿಯಾದ ಒತ್ತಡವನ್ನು ಅನುಭವಿಸುತ್ತಿದ್ದೀರೆಂದೆನಿಸಿದರೆ - ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ. ಅವರ ಬೆಚ್ಚಗಿನ ಅಪ್ಪುಗೆ / ಮುದ್ದಾಡುವಿಕೆ ಅಥವಾ ಮುಗ್ಧ ಮುಗುಳ್ನಗೆಯೂ ನಿಮ್ಮ ಸಮಸ್ಯೆಗಳನ್ನು ಮಾಯವಾಗಿಸಬಲ್ಲದು. ಹಣಕಾಸಿನ ಬಗ್ಗೆ ಅನಿಶ್ಚಿತತೆ ನಿಮ್ಮ ಮನಸ್ಸಿನ ಮೇಲೆ ಒತ್ತಡ ಬೀರುತ್ತದೆ. ಮೊಮ್ಮಕ್ಕಳು ಅಪಾರ ಸಂತೋಷದ ಮೂಲವಾಗುತ್ತಾರೆ. ನಿಮ್ಮ ಕತ್ತಲೆಯ ಜೀವನ ನಿಮ್ಮ ಸಂಗಾತಿಗೆ ಒತ್ತಡ ತರಬಹುದು. ನಿಮ್ಮ ನಿರಂತರ ಶ್ರಮ ಇಂದು ನಿಜವಾಗಿಯೂ ಚೆನ್ನಾಗಿ ಫಲ ನೀಡುತ್ತದೆ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ಇಂದು ವೆಚ್ಚಗಳು ನಿಮ್ಮ ಜೀವನ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧಕ್ಕೆ ಧಕ್ಕೆ ತರಬಹುದು.
ವೃಶ್ಚಿಕ ರಾಶಿ
ಮಾನಸಿಕ ಸ್ಪಷ್ಟತೆಯನ್ನು ನಿರ್ವಹಿಸಲು ಗೊಂದಲ ಮತ್ತು ಹತಾಶೆಯನ್ನು ತಪ್ಪಿಸಿ ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಅಧ್ಯಯನಗಳನ್ನು ತಪ್ಪಿಸಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಿಕೆ ನಿಮ್ಮ ಪೋಷಕರಿಗೆ ಕೋಪ ಬರಿಸಬಹುದು. ವೃತ್ತಿ ಯೋಜನೆ ಆಟಗಳಷ್ಟೇ ಮುಖ್ಯ. ನಿಮ್ಮ ಪೋಷಕರನ್ನು ಸಂತೋಷಗೊಳಿಸು ಎರಡನ್ನೂ ಸಂಭಾಳಿಸಬೇಕು. ಪ್ರೇಮಜೀವನವು ಇಂದು ನಿಮ್ಮನ್ನು ಆಶೀರ್ವದಿಸಿರುವಂತೆ ತೋರುತ್ತದೆ. ನೀವು ಎಂದಾದರೂ ಶುಂಠಿ ಮತ್ತು ಗುಲಾಬಿಗಳ ಚಾಕೋಲೇಟ್ ಅನ್ನು ಆಘ್ರಾಣಿಸಿದ್ದೀರೇ? ನಿಮ್ಮ ಪ್ರೇಮ ಜೀವನ ಇಂದು ಈ ರೀತಿಯಾಗಿರುತ್ತದೆ. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ಮದುವೆಗಳು ಏಕೆ ಸ್ವರ್ಗದಲ್ಲಿ ಮಾಡಲ್ಪಟ್ಟಿವೆ ಎಂದು ನಿಮಗೆ ಇಂದು ತಿಳಿಯುತ್ತದೆ.
ಧನು ರಾಶಿ
ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಖರ್ಚು ಮಾಡಲು ಮುಂದೆಹೋದಲ್ಲಿ ನೀವು ಖಾಲಿ ಜೇಬಿನಿಂದ ಮನೆ ಸೇರಬೇಕಾಗುತ್ತದೆ. ಬಾಕಿಯಿರುವ ಮನೆಕೆಲಸಗಳು ನಿಮ್ಮ ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಒಳ್ಳೆಯ ಮನಸ್ಥಿತಿ ಹೊಂದಿರದ ನೀವು ಇಂದು ಕಛೇರಿಯಲ್ಲಿ ವಿವಾದದ ಮೂಲವಾಗಬಹುದು. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಅಭಿಪ್ರಾಯಗಳ ವ್ಯತ್ಯಾಸವು ನೀವು ಮತ್ತು ನಿಮ್ಮ ಸಂಗಾತಿಯಲ್ಲಿ ವಾದಗಳನ್ನು ಉಂಟುಮಾಡಬಹುದು.
ಮಕರ ರಾಶಿ
ನಗು ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರವಾದ್ದರಿಂದ ನಕ್ಕುಬಿಡಿ. ದೊಡ್ಡ ಗುಂಪಿನಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಅತ್ಯಂತ ಮನರಂಜನಾತ್ಮಕವಾಗಿರುತ್ತದೆ- ಆದರೆ ನಿಮ್ಮ ವೆಚ್ಚಗಳು ಹಚ್ಚಾಗುತ್ತವೆ. ನಿಮ್ಮ ಕುಟುಂಬ ಸದಸ್ಯರಿಗೆ ಧನಾತ್ಮಕ ಪ್ರಯೋಜನಗಳ ಸಲಹೆಗಳನ್ನು ನೀಡುವ ಮೂಲಕ ನಿಮ್ಮ ಉಪಯುಕ್ತತೆಯ ಬಲವನ್ನು ಅಭಿವೃದ್ಧಿಪಡಿಸಿ. ಪ್ರಣಯದ ಅವಕಾಶಗಳಿವೆ - ಆದರೆ ಅವು ಕ್ಷಣಿಕವಾಗಿರುತ್ತವೆ. ಹೊಸ ಯೋಜನೆಗಳು ಮತ್ತು ಉದ್ಯಮಗಳನ್ನು ಅನುಷ್ಠಾನಕ್ಕೆ ತರಲು ಒಳ್ಳೆಯ ದಿನ. ತೆರಿಗೆ ಮತ್ತು ವಿಮೆ ವಿಷಯಗಳ ಬಗ್ಗೆ ಗಮನ ನೀಡುವ ಅಗತ್ಯವಿದೆ. ಕೆಲಸದಲ್ಲಿ ನಿಮ್ಮ ಮೇಲಿನವರು ಇಂದು ದೇವದೂತರಂತೆ ಕೆಲಸ ಮಾಡುವಂತೆ ಕಾಣುತ್ತದೆ.
ಕುಂಭ ರಾಶಿ
ಹತಾಶೆಯ ಭಾವನೆ ನಿಮ್ಮನ್ನುಅವರಿಸಲು ಬಿಡಬೇಡಿ. ಆರ್ಥಿಕ ಸಮಸ್ಯೆ ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮರ್ಥ್ಯವನ್ನು ಹಾಳುಮಾಡುತ್ತದೆ. ಸಹೋದರಿಯ ವೈವಾಹಿಕ ಸಂಬಂಧದ ಸುದ್ದಿ ನಿಮ್ಮನ್ನು ಸಂತುಷ್ಟಗೊಳಿಸಬಹುದು. ಅವಳಿಂದ ಪ್ರತ್ಯೇಕಗೊಳ್ಳುವ ಬಗ್ಗೆ ಯೋಚಿಸಿ ನಿಮಗೆ ಸ್ವಲ್ಪ ದುಃಖವಾಗುವ ಸಾಧ್ಯತೆಗಳಿವೆ. ಆದರೆ ನೀವು ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೇ ಪ್ರಸ್ತುತವನ್ನು ಆನಂದಿಸಬೇಕಾದ ಅಗತ್ಯವಿದೆ. ನಿಮ್ಮ ಸಂಗಾತಿಯ ಜೊತೆ ಹೊರಹೋಗುವಾಗ ಸಭ್ಯತೆಯಿಂದ ವರ್ತಿಸಿ. ಪ್ರೀತಿ ಕೇವಲ ವಸಂತ; ಹೂಗಳು, ಗಾಳಿ, ಬಿಸಿಲು, ಚಿಟ್ಟೆಗಳು. ನೀವು ಇಂದು ಪ್ರಣಯದ ಕಚಗುಳಿಯನ್ನು ಅನುಭವಿಸುತ್ತೀರಿ. ವ್ಯಾಪಾರದ ಉದ್ದೇಶದಿಂದ ಕೈಗೊಂಡ ಪ್ರಯಾಣ ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ತಪ್ಪು ಸಂವಹನ ಇಂದು ತೊಂದರೆಯುಂಟುಮಾಡಬಹುದು, ಆದರೆ ನೀವು ಕುಳಿತು ಮಾತನಾಡುವುದರಿಂದ ಇದನ್ನು ನಿರ್ವಹಿಸಬಹುದು.
ಮೀನ ರಾಶಿ
ವಿಶೇಷವಾಗಿ ದಾಟುವಿಕೆಗಳಲ್ಲಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ - ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ನಿಮ್ಮ ಉತ್ಸಾಹ ನಿಮ್ಮ ಪ್ರೀತಿಯನ್ನು ಸಂಕಟಕ್ಕೆ ಸಿಲುಕಿಸಹುದಾದ್ದರಿಂದ ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ನಿಮ್ಮ ಆಲೋಚನೆಗಳನ್ನು ಚೆನ್ನಾಗಿ ಪ್ರಸ್ತುತಪಡಿಸಿದಲ್ಲಿ ಮತ್ತು ಕೆಲಸದಲ್ಲಿ ನಿಮ್ಮ ಬದ್ಧತೆಯನ್ನು ಪ್ರದರ್ಶಿಸಿದಲ್ಲಿ ನಿಮಗೆ ಲಾಭವಾಗುವ ಸಾಧ್ಯತೆಗಳಿವೆ. ಇಂದು ನೀವು ನಿಮ್ಮ ಬುದ್ಧಿಯನ್ನು ಪರೀಕ್ಷಿಸುತ್ತೀರಿ -ನಿಮ್ಮಲ್ಲಿ ಕೆಲವರು ಚದುರಂಗ - ಪದಬಂಧ ಆಡುತ್ತೀರಿ ಹಾಗೂ ಇತರರು ಕಥೆ- ಕವನ ಬರೆಯುತ್ತೀರಿ ಹಾಗೂ ಕೆಲವರಿಗೆ ಇದು ಭವಿಷ್ಯದ ಯೋಜನೆಗಳಿಗೂ ಸಹಾಯವಾಗುತ್ತದೆ. ಈ ದಿನ ವೈವಾಹಿಕ ಜೀವನದಲ್ಲಿನ ಒಂದು ಕಠಿಣ ಹಂತದ ನಂತರ ನಿಮಗೆ ಬಿಡುವನ್ನು ಒದಗಿಸುತ್ತದೆ.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ