ವಿಜಯಪುರ : ಅರುಣಾಚಲ ಪ್ರದೇಶ ಹಾಗೂ ಅಸ್ಸಾಮ್ ರಾಜ್ಯಗಳ ಗಡಿಭಾಗದ ಬ್ರಹ್ಮಪುತ್ರ ಉಪನದಿಯಲ್ಲಿ ಸೇನಾ ಜೀಪ್ ಉರುಳಿಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಸಂಭವಿಸದೆ.
ಸಾವನ್ನಪ್ಪಿರುವ ಮೂವರು ಯೋಧರಲ್ಲಿ ವಿಜಯಪುರದ ಓರ್ವ ಯೋಧ ಸೇರಿದ್ದಾರೆ. ತಾಲೂಕಿನ ರೋಣಿಹಾಳ ಗ್ರಾಮದ ಯೋಧ ಪರಶುರಾಮ ಖ್ಯಾತನ್ನವರ್ (32) ಸಾವನ್ನಪ್ಪಿದ ದುರ್ದೈವಿ. ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಪತ್ನಿ, ಪುತ್ರಿ, ಪುತ್ರ, ತಂದೆ-ತಾಯಿ ಮತ್ತು ಸೋದರ ಸೋದರಿಯನ್ನು ಅಗಲಿದ್ದಾರೆ.
ಭಾನುವಾರ ಬೆಳಗಿನ ಜಾವ ಅಪಘಾತಕ್ಕೊಳಗಾದ ಟ್ರಕ್ ನಲ್ಲಿ ಪರಶುರಾಮ್ ಸೇರಿದಂತೆ 18 ಸೇನಾ ಸಿಬ್ಬಂದಿಗಳು ಪ್ರಯಾಣಿಸುತ್ತಿದ್ದರು. ದಿಬಾಂಗ್ ಜಿಲ್ಲೆಯ ಕಾಬುಂಗ್ ಗ್ರಾಮದಲ್ಲಿರುವ ಕುಂದಿಲ್ ನದಿಗೆ ವಾಹನ ಉರುಳಿ ಬಿದ್ದಿದೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ