ಈ ಗ್ರಾಮದಲ್ಲಿ ಹೆಣ್ಣುಮಕ್ಕಳು ಮೊಬೈಲ್ ಬಳಸುವಂತಿಲ್ಲ. ಜೀನ್ಸ್‌ ಅಂತೂ ಧರಿಸುವಂತೆಯೇ ಇಲ್ಲ.... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ಏಪ್ರಿಲ್ 18, 2018

ಈ ಗ್ರಾಮದಲ್ಲಿ ಹೆಣ್ಣುಮಕ್ಕಳು ಮೊಬೈಲ್ ಬಳಸುವಂತಿಲ್ಲ. ಜೀನ್ಸ್‌ ಅಂತೂ ಧರಿಸುವಂತೆಯೇ ಇಲ್ಲ....

ಸೋನಿಪಟ್ (ಹರಿಯಾಣ): ಈ ಗ್ರಾಮದಲ್ಲಿ ಹೆಣ್ಣುಮಕ್ಕಳು ಮೊಬೈಲ್ ಬಳಸುವಂತಿಲ್ಲ. ಜೀನ್ಸ್‌ ಅಂತೂ ಧರಿಸುವಂತೆಯೇ ಇಲ್ಲ.
ಹೌದು. ಹೆಣ್ಣುಮಕ್ಕಳ ಮೇಲೆ ಇಂಥದ್ದೊಂದು ನಿರ್ಬಂಧ ವಿಧಿಸಿ ಹರಿಯಾಣದ ಸೋನಿಪಟ್ ಜಿಲ್ಲೆಯ ಇಸಾಯ್‌ಪುರ ಖೇದಿ ಗ್ರಾಮ ಪಂಚಾಯತ್ ಆದೇಶ ಹೊರಡಿಸಿದೆ.
ಇಲ್ಲಿನ ಹೆಣ್ಣುಮಕ್ಕಳು ಪರಾರಿಯಾದ ಕೆಲವು ಘಟನೆಗಳು ನಡೆದ ಕಾರಣ ಗ್ರಾಮಪಂಚಾಯತ್ ಈ ಫರ್ಮಾನು ಹೊರಡಿಸಿತ್ತು. ವರ್ಷದ ಹಿಂದೆಯೇ ಈ ರೀತಿ ಆದೇಶ ಹೊರಡಿಸಲಾಗಿತ್ತು.
ಈ ನಿಯಮ ಜಾರಿಗೆ ಬಂದ ಬಳಿಕ ಗ್ರಾಮದ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎನ್ನುತ್ತಾರೆ ಗ್ರಾಮದ ಸರಪಂಚ್ ಪ್ರೇಮ್ ಸಿಂಗ್.
'ನಮ್ಮ ಗ್ರಾಮದಲ್ಲಿ ಹೆಣ್ಣುಮಕ್ಕಳು ಜೀನ್ಸ್ ಧರಿಸುವಂತಿಲ್ಲ. ಅಲ್ಲದೆ ಅವರು ಮೊಬೈಲ್‌ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಅದನ್ನೂ ನಾವು ನಿಷೇಧಿಸಿದ್ದೇವೆ. ಅವುಗಳಿಂದ ಹೆಣ್ಣುಮಕ್ಕಳು ಹಾಳಾಗುತ್ತಾರೆ ಎಂದು ನಾನು ಹೇಳುತ್ತಿಲ್ಲ. ಆದರೆ, ಅದು ಅವರಿಗೆ ಹೊಂದಿಕೆಯಾಗುವುದಿಲ್ಲ' ಎಂದು ಸಿಂಗ್ ಹೇಳುತ್ತಾರೆ.
ಗ್ರಾಮ ಪಂಚಾಯತ್‌ನ ಈ ನಿರ್ಬಂಧಕ್ಕೆ ಅಲ್ಲಿನ ಹೆಣ್ಣುಮಕ್ಕಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಸಂಪೂರ್ಣ ತಪ್ಪು ನಿರ್ಧಾರ. ಸಮಸ್ಯೆ ಇರುವುದು ಪುರುಷರ ಮನೋಭಾವದಲ್ಲಿ. ಮಹಿಳೆ ತೊಡುವ ಬಟ್ಟೆಗಳ ಆಧಾರದಲ್ಲಿ ಆಕೆಯ ನಡತೆಯನ್ನು ಅವರು ಹೇಗೆ ನಿರ್ಧರಿಸುತ್ತಾರೆ? ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ನಿವಾಸಿಯೊಬ್ಬರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here