ಶ್ರೀನಗರ: ಜಮ್ಮು ಕಾಶ್ಮೀರದ ಅನಂತನಾಗ್ನಲ್ಲಿ ಶನಿವಾರ ಉಗ್ರರು ದಾಳಿ ನಡೆಸಿದ್ದು, ಒಬ್ಬ ಪೊಲೀಸ್ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನಾಲ್ಕು ದಿನಗಳ ಪ್ರವಾಸ ಅಂಗವಾಗಿ ಜಮ್ಮು ಕಾಶ್ಮೀರಕ್ಕೆ ಇಂದು ಭೇಟಿ ನೀಡಿದ್ದು, ಅವರು ನಾಳೆ(ಭಾನುವಾರ) ಸಭೆ ನಡೆಸಬೇಕಿದ್ದ ಸ್ಥಳದಿಂದ 450 ಮೀಟರ್ ದೂರದ ಅಂತರದಲ್ಲಿ ದಾಳಿ ನಡೆದೆ ಎಂದು ವರದಿಯಾಗಿದೆ.
ಇಂದು ಇಲ್ಲಿಗೆ ಆಗಮಿಸಿರುವ ರಾಜನಾಥ್ ಅವರು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಜತೆ ಸಭೆ ನಡೆಸಿದ್ದು, ಪ್ರಧಾನ ಮಂತ್ರಿ ಅವರ ವಿಶೇಷ ಅನುದಾನ ಕುರಿತು ಚರ್ಚೆ ನಡೆಸಿದ್ದಾರೆ.
ರಾಜನಾಥ್ ಅವರ ಭೇಟಿಯ ಬೆನ್ನಲ್ಲೇ ಉಗ್ರರ ದಾಳಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಭದ್ರತಾ ಸಿಬ್ಬಂದಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದು, ಉಗ್ರರಿಗಾಗಿ ಶೋಧ ನಡೆಸಿದ್ದಾರೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ