ಭಾರತಕ್ಕೆ ಕಿರಿಕಿರಿ ತಂದ ಚೀನಾ-ನೇಪಾಳ ಹೊಸ ಹೆದ್ದಾರಿ... - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಸೆಪ್ಟೆಂಬರ್ 18, 2017

ಭಾರತಕ್ಕೆ ಕಿರಿಕಿರಿ ತಂದ ಚೀನಾ-ನೇಪಾಳ ಹೊಸ ಹೆದ್ದಾರಿ...

ಬೀಜಿಂಗ್, ಸೆ. 19: ಚೀನಾ-ನೇಪಾಳ ನಡುವಿನ ಹೊಸ ಹೆದ್ದಾರಿ ನಿರ್ಮಾಣ ಭಾರತಕ್ಕೆ ಕಿರಿಕಿರಿಯುಂಟು ಮಾಡಿದೆ. ಟಿಬೆಟ್ ನಲ್ಲಿ ನಿರ್ಮಿಸಲಾಗಿರುವ ಈ ಹೆದ್ದಾರಿಯನ್ನು ಸೇನಾ ಉದ್ದೇಶಕ್ಕೆ ಬಳಸಲು ಚೀನಾ ಚಿಂತಿಸಿರುವುದು ಭಾರತದ ತಲೆನೋವಿಗೆ ಕಾರಣ.
ಸುಮಾರು 25 ಮೀಟರ್ ಅಗಲ, 40.4 ಕಿ.ಮೀ ಉದ್ದದ ಈ ಹೆದ್ದಾರಿಯಲ್ಲಿ ಮಿಲಿಟರಿ ವಾಹನಗಳು, ಸೇನಾ ವಿಮಾನಗಳು ಬಳಸಬಹುದಾಗಿದೆ. ಚೀನಾ-ನೇಪಾಳದ ನಡುವೆ ರೈಲ್ವೆ ಸಂಪರ್ಕ ಸಾಧಿಸಲು ಈ ಹೆದ್ದಾರಿ ಅನುಕೂಲಕರ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ವಾಯುವ್ಯ ಚೀನಾ ಭಾಗದ ಟಿಬೆಟ್ ಗೆ ಸೇರಿರುವ ಝಂಗ್ಮು ಪಟ್ಟಣದಿಂದ ನೇಪಾಳದ ಗಡಿ ಭಾಗಕ್ಕೆ ಈ ರಸ್ತೆ ಸಂಪರ್ಕ ಹೊಂದಿದೆ ಎಂದು ಶಾಂಘೈನ ಇನ್ಸ್ಟಿಟ್ಯೂಟ್ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್ ನ ಏಷ್ಯಾ ಪೆಸಿಫಿಕ್ ಅಧ್ಯಯನ ಕೇಂದ್ರದ ನಿರ್ದೇಶಕ ಝಾವೋ ಗಂಗ್ಚೆಂಗ್ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here