ದಸರಾದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತಷ್ಟು ಟ್ರಿನ್ ಟ್ರಿನ್ ಸೈಕಲ್‍ಗಳು : ಜಿಲ್ಲಾಡಳಿತ...! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶನಿವಾರ, ಸೆಪ್ಟೆಂಬರ್ 16, 2017

ದಸರಾದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತಷ್ಟು ಟ್ರಿನ್ ಟ್ರಿನ್ ಸೈಕಲ್‍ಗಳು : ಜಿಲ್ಲಾಡಳಿತ...!

ಮೈಸೂರು,ಸೆ.16- ನಾಡಹಬ್ಬ ದಸರಾದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಮತ್ತಷ್ಟು ಟ್ರಿನ್ ಟ್ರಿನ್ ಸೈಕಲ್‍ಗಳನ್ನು ಒದಗಿಸಲು ಜಿಲ್ಲಾಡಳಿತ ಮುಂದಾಗಿದೆ. ದಸರಾ ಸಂದರ್ಭದಲ್ಲಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಿ ಬೈಸಿಕಲ್ ಬಳಕೆಗೆ ಪ್ರೇರೇಪಿಸಲು ಟ್ರಿನ್ ಟ್ರಿನ್ ಸೈಕಲ್‍ಗಳನ್ನು ಇನ್ನಷ್ಟು ಬಳಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ. ಅರಮನೆ ಬಲರಾಮ, ವರಹ, ಅಂಬಾವಿಲಾಸ ದ್ವಾರ ಸೇರಿದಂತೆ ಹಲವೆಡೆ ಹೆಚ್ಚುವರಿ ಸೈಕಲ್‍ಗಳನ್ನು ಒದಗಿಸಲಾಗುವುದು. ಸೈಕಲ್ ಪಡೆಯಲು ಗುರುತಿನ ಚೀಟಿ ಕಡ್ಡಾಯವಾಗಿದೆ. ಪ್ರವಾಸಿಗರು ಮೈ ಟ್ರಿನ್ ಟ್ರಿನ್ ಆಯಪ್‍ನ್ನು ಡೌನ್‍ಲೋಡ್ ಮಾಡಿಕೊಂಡು ಡೆಬಿಟ್, ಕ್ರೆಡಿಟ್, ನೆಟ್ ಬ್ಯಾಂಕಿನ ಮೂಲಕ ಹಣ ಪಾವತಿಸಿ ಕಾರ್ಡನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಒಂದು ದಿನಕ್ಕೆ 50, ಮೂರು ದಿನ ಮತ್ತು ಒಂದು ವಾರಕ್ಕೆ 150 ರೂ. ಭದ್ರತಾ ಠೇವಣಿ ಪಾವತಿಸಬೇಕಾಗಿದೆ. ಸೆ.29ರಿಂದ ಅಕ್ಟೋಬರ್‍ವರೆಗೆ ಟ್ರಿನ್ ಟ್ರಿನ್ ಸೌಲಭ್ಯ ಪಡೆಯಬಹುದಾಗಿದೆ. ಆಗಿಯೇ ಹೊಟೇಲ್ ಮಾಲೀಕರು ಒಟ್ಟಾಗಿ ಟ್ರಿನ್-ಟ್ರಿನ್ ಸೈಕಲ್ ಯೋಜನೆಯ ಕಾರ್ಡನ್ನು ಪಡೆದು ತಮ್ಮಲಿಗೆ ಬರುವ ಪ್ರವಾಸಿಗರಿಗೆ ಮಾರಾಟ ಮಾಡುವ ಸೌಲಭ್ಯ ಮಾಡಲಾಗಿದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗೆ 0821-2333000/ 6500301 ಸಂಪರ್ಕಿಸಬಹುದಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here