ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಜೋಡಿಯಲ್ಲಿ ಮೂಡಿಬಂದ 'ಮುಗುಳುನಗೆ'
ರಾಜ್ಯಾದ್ಯಂತ ಬಿಡುಗಡೆಯಾಗಿ ಮೂರನೇ ವಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಶಕದ ನಂತರ
ಭಟ್ ಮತ್ತು ಗಣಿ ಒಟ್ಟಿಗೆ ಸಿನಿಮಾ ಮಾಡಿದ್ದು, ಈ ಎಲ್ಲರ ನಿರೀಕ್ಷೆ ತಲುಪುವಲ್ಲಿ
ಸಿನಿಮಾ ಗೆದ್ದಿದೆ.
ನಮ್ಮ ರಾಜ್ಯದ ಕನ್ನಡ ಪ್ರೇಕ್ಷಕರ ಮನಗೆದ್ದ 'ಮುಗುಳುನಗೆ' ಈಗ ಹೊರ ದೇಶದಲ್ಲಿ 'ನಗು' ಬೀರುತ್ತಿದೆ. ಅಟ್ಲಾಂಟಿಕ್ ದೇಶದ ಗಡಿದಾಟಿರುವ 'ಮುಗುಳುನಗೆ' ಯುಎಸ್ ಎ ಮತ್ತು ಕೆನಡಾದಲ್ಲಿ ದೇಶಗಳಲ್ಲಿ ಸೆಪ್ಟಂಬರ್ 14 ರಂದು ರಿಲೀಸ್ ಆಗಿದ್ದು, ಮೆಚ್ಚುಗೆ ಗಳಿಸಿಕೊಂಡಿದೆ.
ಇನ್ನು ಅಟ್ಲಾಂಟದ ಓಲ್ಡ್ ನವರಂಗ್ ಚಿತ್ರಮಂದಿರದಲ್ಲಿ ಸೆಪ್ಟಂಬರ್ 15 ರಂದು 'ಮುಗುಳುನಗೆ' ಬಿಡುಗಡೆಯಾಗಿದ್ದು, 20ನೇ ತಾರೀಖಿನವರೆಗೂ ಪ್ರತಿದಿನ ಸಂಜೆ 4.50ರ ಶೋ ಪ್ರದರ್ಶನವಾಗಲಿದೆ.
ಅಂದ್ಹಾಗೆ, ಸೈಯಾದ್ ಸಲಾಂ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಗಣೇಶ್ ನಾಯಕನಾಗಿ ಅಭಿನಯಿಸಿದ್ದು, ಆಶಿಕಾ ರಂಗನಾಥ್, ನಿಖಿತಾ ನಾರಾಯಣ್, ಅಪೂರ್ವ ಅರೋರ ಹಾಗೂ ಅಮೂಲ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದರು. ಸೆಪ್ಟಂಬರ್ 1 ರಂದು ಕರ್ನಾಟಕ ಹಾಗೂ ಭಾರತದಲ್ಲಿ 'ಮುಗುಳುನಗೆ' ಬಿಡುಗಡೆಯಾಗಿತ್ತು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ