ಮನೆ ಹೊಂದುವ ಕನಸು ನಿಮ್ಮದಾಗಿದ್ದರೆ ಶುಭ ಸುದ್ದಿಯೊಂದು ಇಲ್ಲಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆ(ನಗರ) ಅಡಿಯಲ್ಲಿ ಮನೆ ಸಾಲಕ್ಕೆ 2.60 ಲಕ್ಷ ರೂ.ವರೆಗೆ ಸಬ್ಸಿಡಿಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಮಧ್ಯಮ ಆದಾಯ ಗುಂಪುಗಳಿಗೆ(ಎಂ.ಐ.ಜಿ.) ಸೇರಿದ ಫಲಾನುಭವಿಗಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಮೋದಿ ಸರ್ಕಾರ ಘೋಷಿಸಿದೆ.
ಮುಂಬೈನಲ್ಲಿ ಆಯೋಜಿಸಿದ್ದ ರಿಯಲ್ ಎಸ್ಟೇಟ್ ಮತ್ತು ಇನ್ಪ್ರಾಸ್ಟ್ರಕ್ಚರ್ ಇನ್ವೆಸ್ಟರ್ಸ್ ಶೃಂಗಸಭೆಯಲ್ಲಿ ಭಾರತ ಗೃಹ ಸಚಿವಾಲಯದ ಕಾರ್ಯದರ್ಶಿ(ವಸತಿ ಮತ್ತು ನಗರ ವ್ಯವಹಾರ) ದುರ್ಗಾ ಶಂಕರ್ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ.
PMAY ಅಡಿಯಲ್ಲಿ ಬಡ್ಡಿ ಸಬ್ಸಿಡಿಯನ್ನು ಪಡೆಯಲು ಎಂ.ಐ.ಜಿ. ಫಲಾನುಭವಿಗಳಿಗೆ ಹೆಚ್ಚಿನ ಸಮಯ ನೀಡುವುದಾಗಿ ಅವರು ತಿಳಿಸಿದ್ದಾರೆ.
ವಾರ್ಷಿಕ ಆದಾಯ ಮಿತಿ, ಸಾಲದ ಅವಧಿ ಆಧರಿಸಿ ಸಬ್ಸಿಡಿಯನ್ನು ನೀಡಲಾಗುವುದು. ಕಳೆದ ವರ್ಷ ಡಿಸೆಂಬರ್ 31 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, PMAY (ನಗರ) ಅಡಿಯಲ್ಲಿ MIG ಗೆ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS) ಈ ವರ್ಷದ ಡಿಸೆಂಬರ್ ಅಂತ್ಯದವರೆಗೂ ಅನ್ವಯಿಸಬಹುದೆಂದು ಘೋಷಿಸಿದ್ದರು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ