ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಗೆ ಹೊಸ ಷರತ್ತು ಸೇರ್ಪಡೆ...!!! - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಶುಕ್ರವಾರ, ಸೆಪ್ಟೆಂಬರ್ 15, 2017

ಇನ್ನು ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಗೆ ಹೊಸ ಷರತ್ತು ಸೇರ್ಪಡೆ...!!!

ಹೊಸದಿಲ್ಲಿ, ಸೆ.16: ಮುಂದಿನ ಬಾರಿ ನೀವು ಡ್ರೈವಿಂಗ್ ಲೈಸನ್ಸ್ ಟೆಸ್ಟ್ ಗೆ ಹೋದಾಗ ಅಲ್ಲಿ ನಿಮ್ಮ ಚಾಲನಾ ಪರಿಣತಿಯನ್ನು ತಿಳಿಯಲು ವೀಡಿಯೋ ರೆಕಾರ್ಡಿಂಗ್ ಕೂಡ ಮಾಡಲಾಗುವುದು.
ತರಬೇತಿರಹಿತ ಹಾಗೂ ಸರಿಯಾಗಿ ವಾಹನ ಚಲಾಯಿಸಲು ತಿಳಿದಿಲ್ಲದವರು ಚಾಲನಾ ಪರವಾನಿಗೆ ಪಡೆಯುವುದನ್ನು ತಡೆಯಲು ವೀಡಿಯೋ ರೆಕಾರ್ಡಿಂಗ್ ಮಾಡಲು ತಾನು ಒಪ್ಪಿದ್ದೇನೆಂದು ದಿಲ್ಲಿ ಸರಕಾರ ಹೈಕೋರ್ಟಿಗೆ ಶುಕ್ರವಾರ ತಿಳಿಸಿದೆ.
ಡ್ರೈವಿಂಗ್ ಟೆಸ್ಟ್ ರೆಕಾರ್ಡ್ ಮಾಡಲು ವೀಡಿಯೋಗ್ರಾಫರುಗಳನ್ನು ನೇಮಕ ಮಾಡಲಾಗುವುದು ಎಂದು ಸರಕಾರದ ಪರ ವಕೀಲ ಸತ್ಯಕಂ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರ ಪೀಠದ ಮುಂದೆ ತಿಳಿಸಿದರು.
ಲಿಖಿತ ಪರೀಕ್ಷೆ ನಡೆಸುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದೆಂದು ಸರಕಾರ ಮತ್ತು ಸಾರಿಗೆ ಇಲಾಖೆ ನಿರ್ಧರಿಸಿದೆ ಎಂದೂ ವಕೀಲರು ತಿಳಿಸಿದರು.
ನಗರದ ಸಾರಿಗೆ ವ್ಯವಸ್ಥೆಯಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನಿರ್ಲಕ್ಷ್ಯದ ವಾಹನ ಚಲಾವಣೆಯಿಂದ ಸಂಭವಿಸುವ ಅಪಘಾತಗಳಿಗೆ ಅಧಿಕಾರಿಗಳೇ ಕಾರಣವೆಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಪವನ್ ಕುಮಾರ್ ಎಂಬವರು ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದರಲ್ಲದೆ, ತರಬೇತಿಯಿಲ್ಲದ ಚಾಲಕರಿಂದಾಗಿ ಸಂಭವಿಸುವ ಅಪಘಾತಗಳನ್ನು ತಡೆಯಲು ಅವರನ್ನು ಲೈಸನ್ಸ್ ಗೆ ಅವರು ಅರ್ಜಿ ಸಲ್ಲಿಸುವ ಪ್ರಥಮ ಹಂತದಲ್ಲಿಯೇ ಗುರುತಿಸಬೇಕು ಎಂದು ಆಗ್ರಹಿಸಿದ್ದರು.
ದಿಲ್ಲಿ ಹೈಕೋರ್ಟಿನ ಈ ಆದೇಶವನ್ನು ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಜಾರಿಗೊಳಿಸಿದಲ್ಲಿ ಬಹುತೇಕ ಅಪಘಾತಗಳನ್ನು ತಡೆಗಟ್ಟಬಹುದೆನ್ನುವುದರಲ್ಲಿ ಸಂಶಯವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here