ಬೆಳಗಾವಿ : ಡೆಡ್ಲಿ ಗೇಮ್ ಬ್ಲೂವೇಲ್ ಈಗಾಗಲೇ ವಿಶ್ವದಾದ್ಯಂತ ಅನೇಕ ಬಲಿಗಳನ್ನು ಪಡೆದುಕೊಂಡಿದೆ. ಬ್ಲೂ ವೆಲ್ ದಿನದಿಂದ ದಿನಕ್ಕೆ ಗೇಮ್ ಹುಚ್ಚು ಹೆಚ್ಚಾಗಿ ಮೈ, ಕೈ ಮೇಲೆ ಸೇರಿ ಮಾಡಿಕೊಂಡ ಘಟನೆಗಳು ವರದಿಯಾಗುತ್ತಲೇ ಇವೆ, ಅಲ್ಲದೇ ಸ್ಪರ್ಧಿಗಳು ಆತ್ಮಹತ್ಯೆಗೂ ಶರಣಾಗುತ್ತಿದ್ದಾರೆ.
ಇಂಥಹ ಮಾರಕ ಗೇಮ್ ಕುಂದಾ ನಗರಿ ಬೆಳಗಾವಿಗೆ ಕಾಲಿಟ್ಟಿದೆ ಎಂಬ ಅನುಮಾನ ಇದೀಗ ಬಲಗೊಂಡಿದೆ. ನಗರದ ಕ್ಯಾಂಪ್ ಪ್ರದೇಶದ ಶಾಲೆಯೊಂದರ ಮಕ್ಕಳು ಈ ಗೇಮ್ ವ್ಯಾಮೋಹಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ. ಆದರೇ ಈ ವಿದ್ಯಾರ್ಥಿಗಳು ಗೇಮ್ ಆಡಿಲ್ಲ ಬದಲಾಗಿ ಸಹಪಾಠಿಗಳ ಮುಂದೆ ಪೋಸ್ ಕೊಡಲು ಕೈ ಮೇಲೆ ಗಾಯ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಶಾಲೆಯ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ತಿಳಿದ ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗಳ ಪೋಷಕರಿಗೆ ತಿಳುವಳಿಕೆ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಇನ್ನೂ ಬೆಳಗಾವಿಯಲ್ಲಿ ಬ್ಲೂ ವೆಲ್ ಗೆಮ್ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಇಓ ಬಸವರಾಜ್ ನಾಲತ್ವಾಡ್, ಈ ರೀತಿಯ ಪ್ರಕರಣ ನಡೆದಿಲ್ಲ. ನಾವು ಎಲ್ಲಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದಿದ್ದಾರೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ