ಹೊಸದಿಲ್ಲಿ : ಇರ್ಮಾ ಚಂಡಮಾರುತದ ಪ್ರತಾಪಕ್ಕೆ ಗುರಿಯಾಗಿ
ತೀವ್ರವಾಗಿ ತತ್ತರಿಸಿರುವ ಸೈಂಟ್ ಮಾರ್ಟಿನ್ ನಿಂದ 170 ಭಾರತೀಯರನ್ನು ಭಾರತ ಸರಕಾರ
ಸುರಕ್ಷಿತವಾಗಿ ಕ್ಯಾರಿಬಿಯನ್ ದ್ವೀಪ ಸಮೂಹದ ಕ್ಯುರಾಕೋಗೆ ವಿಶೇಷ ಬಾಡಿಗೆ ವಿಮಾನಗಳಲ್ಲಿ
ಕರೆತರಲಾಗಿದೆ.
ಇರ್ಮಾ ಸುಂಟರಗಾಳಿ ಸಂತ್ರಸ್ತರಾದ 170 ಭಾರತೀಯರೊಂದಿಗೆ ಇತರ 60 ಮಂದಿಯನ್ನು ಕೂಡ ಪಾರುಗೊಳಿಸಲಾಗಿದೆ ಎಂದು ವೆನಜುವೆಲಾದಲ್ಲಿನ ಭಾರತೀಯ ರಾಭಾರಿ ರಾಹುಲ್ ಶ್ರೀವಾಸ್ತವ ತಿಳಿಸಿರುವುದಾಗಿ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಹೇಳಿದ್ದಾರೆ.
ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ಟ್ವೀಟ್ ಮೂಲಕ, "ನಿನ್ನೆ ಮಂಗಳವಾರ ರಾತ್ರಿ 110 ಭಾರತೀಯರನ್ನು ಮತ್ತು ಭಾರತ ಸಂಜಾತ ಸಂತ್ರಸ್ತರನ್ನು ಸೈಂಟ್ ಮಾರ್ಟಿನ್ನಿಂದ ಕ್ಯುರಾಕೋಗೆ ವಿಶೇಷ ಬಾಡಿಗೆ ವಿಮಾನಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ