ಚೆನ್ನೈ: ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಹಿಂದಿನ ರಹಸ್ಯದ ತನಿಖೆ ನಡೆಸಲಿರುವ ವಿಚಾರಣಾ ಆಯೋಗಕ್ಕೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಆರುಮುಗಸ್ವಾಮಿ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಎಐಎಡಿಎಂಕೆ ಸರ್ಕಾರ ಸೋಮವಾರ ನೇಮಕಾತಿ ಆದೇಶ ಹೊರಡಿಸಿದೆ. ಜಯಲಲಿತಾ ಅವರ ಸಾವಿರ ಕುರಿತು ತನಿಖೆ ನಡೆಸಲಿರುವ ನಿವೃತ್ತ ನ್ಯಾ.ಆರುಮುಗಸ್ವಾಮಿ ಶೀಘ್ರದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ.
ಪಕ್ಷಗಳು ವಿಲೀನಗೊಳ್ಳಬೇಕಾದರೆ ಜಯಲಲಿತಾ ಅವರ ಸಾವಿನ ಸಂಬಂಧ ಸೂಕ್ತ ತನಿಖೆ ನಡೆಸಬೇಕು ಎಂದು ಒ ಪನ್ನೀರ್ಸೆಲ್ವಂ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಲ್ಲಿ ಷರತ್ತು ವಿಧಿಸಿದ್ದರು.
ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸುವುದಾಗಿ ಸಿಎಂ ಪಳನಿಸ್ವಾಮಿ ಘೋಷಿಸಿದ್ದರು.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ