ಟೀಂ ಇಂಡಿಯಾ ಬ್ಯಾಟ್ಸ್ ಮನ್ ಸುರೇಶ್ ರೈನಾ ಅದೃಷ್ಟ ಚೆನ್ನಾಗಿತ್ತು. ಭಾರೀ ಅಪಘಾತವೊಂದು ಅದೃಷ್ಟವಶಾತ್ ತಪ್ಪಿದೆ. ದೆಹಲಿಯಿಂದ ಕಾನ್ಪುರಕ್ಕೆ ಹೋಗ್ತಿದ್ದ ರೈನಾ ಕಾರು ಹೆದ್ದಾರಿಯಲ್ಲಿ ಪಂಚರ್ ಆಗಿತ್ತು.
ಮಾಹಿತಿ ಪ್ರಕಾರ, ರೈನಾರ ರೇಂಜ್ ರೋವರ್ ಕಾರು ಏಕಾಏಕಿ ಪಂಚರ್ ಆಗಿದೆ. ಇದ್ರಿಂದ ಕಾರು ನಿಯಂತ್ರಣ ತಪ್ಪಿದೆ. ಚಾಲಕನ ಎಚ್ಚರಿಕೆಯಿಂದಾಗಿ ಅಪಘಾತ ತಪ್ಪಿದೆ. ರೈನಾ ಸುರಕ್ಷಿತವಾಗಿದ್ದಾರೆ. ಘಟನೆ ನಂತ್ರ ರೈನಾ ಕಾನ್ಪುರ ಕ್ರಿಕೆಟ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರೈನಾ ಮಾಹಿತಿ ನಂತ್ರ ಸ್ಥಳಕ್ಕೆ ಬಂದ ಪೊಲೀಸರು ಸಹಾಯ ಮಾಡಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ರೈನಾ ಹೆದ್ದಾರಿ ಬಳಿ ನಿಂತಿದ್ದರು ಎನ್ನಲಾಗಿದೆ. ಕಾರು ದುರಸ್ಥಿಯಾದ ಬಳಿಕ ಅವರು ಪ್ರಯಾಣ ಮುಂದುವರೆಸಿದ್ದಾರೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ