ಭವಿಷ್ಯ
ಮೇಷ ರಾಶಿ
ಇತ್ತೀಚೆಗೆ ನಿಮ್ಮಲ್ಲಿ ಕೆಲವರು ಓವರ್ಟೈಮ್ ಮಾಡುತ್ತಿರುತ್ತಾರೆ ಹಾಗೂ ನಿಮ್ಮ ಚೈತನ್ಯ ಉಡುಗುತ್ತಿರುತ್ತದೆ- ಇಂದು ನೀವು ಒತ್ತಡ ಹಾಗೂ ಸಂದಿಗ್ಧತೆಯನ್ನು ಬಯಸುವುದಿಲ್ಲ. ತೀರಾ ಖರ್ಚು ಮಾಡುವ ಮತ್ತು ಮನರಂಜನೆಗೆ ತುಂಬಾ ಖರ್ಚ ಮಾಡುವ ನಿಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿ. ಗೃಹ ಜೀವನ ಶಾಂತಿಯುತ ಮತ್ತು ಉತ್ತಮವಾಗಿರುತ್ತದೆ ನಿಮ್ಮ ಪ್ರೀತಿಪಾತ್ರರು ಇಂದು ಕಠಿಣ ಮನಸ್ಥಿತಿಯಲ್ಲಿರಬಹುದು. ನಿಮ್ಮ ದುಡುಕಿನ ವರ್ತನೆಯನ್ನು ನಿಯಂತ್ರಿಸಿಕೊಳ್ಳಿ ಇದು ಒಳ್ಳೆಯ ಸ್ನೇಹವನ್ನು ಹಾಳುಮಾಡಬಹುದು. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ಇದು ನಿಮ್ಮ ವೈವಾಹಿಕ ಜೀವನದಲ್ಲಿ ನಿಜವಾಗಿಯೂ ಒಂದು ಕಷ್ಟಕರ ದಿನವಾಗಿರಬಹುದು.
ವೃಷಭ ರಾಶಿ
ನಿಮ್ಮ ಉತ್ತಮ ಆರೋಗ್ಯದ ಸಲುವಾಗಿ ದೀರ್ಘ ನಡಿಗೆಗೆ ಹೋಗಿ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಲು ಪ್ರಯತ್ನಿಸಿ ಮತ್ತು ಇಂದು ತುಂಬಾ ಖರ್ಚು ಮಾಡಬೇಡಿ. ಪ್ರತಿಯೊಬ್ಬರೂ ಇಂದು ನಿಮ್ಮ ಸ್ನೇಹಿತರಾಗಯಸುತ್ತಾರೆ ಮತ್ತು ನಿಮಗೆ ಇದರಿಂದ ಸಂತೋಷವೆನಿಸುತ್ತದೆ. ಪ್ರತಿ ದಿನ ಪ್ರೀತಿಯಲ್ಲಿ ಬೀಳುವ ನಿಮ್ಮ ಸ್ವಭಾವವನ್ನು ಬದಲಾಯಿಸಿ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನೀವು ಒಂದು ಸುಂದರವಾದ ಪ್ರಣಯಭರ್ತ ದಿನವನ್ನು ಹೊಂದುತ್ತೀರಾದರೂ, ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು.
ಮಿಥುನ ರಾಶಿ
ಅನಿರೀಕ್ಷಿತ ಪ್ರಯಾಣದಿಂದ ಸುಸ್ತಾಗಬಹುದು ಹಾಗೂ ಇದು ನಿಮ್ಮನ್ನು ಕರಿಕಿರಿಗೊಳ್ಳುವಂತೆ ಮಾಡಬಹುದು. ಸ್ನಾಯುಗಳಿಗೆ ಆರಾಮ ನೀಡಲು ನಿಮ್ಮ ದೇಹವನ್ನು ತೈಲದಿಂದ ಮಸಾಜ್ ಮಾಡಿ ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ನಿಮ್ಮ ಬಜೆಟ್ಗೆ ಅಂಟಿಕೊಳ್ಳಿ. ನಿಮ್ಮ ಮನೆಯ ಕರ್ತವ್ಯಗಳನ್ನು ನೀವು ನಿರ್ಲಕ್ಷಿಸಿದ್ದಲ್ಲಿ ನಿಮ್ಮ ಜೊತೆಗಿರುವ ಯಾರಾದರೂ ಸಿಟ್ಟಾಗಬಹುದು. ಇಂದು ಪ್ರಣಯಕ್ಕಾಗಿ ಸಂಕೀರ್ಣ ಜೀವನವನ್ನು ತ್ಯಜಿಸಿ. ರಹಸ್ಯ ಶತ್ರುಗಳು ನಿಮ್ಮ ಬಗ್ಗೆ ವದಂತಿಗಳು ಹರಡಲು ಉತ್ಸಾಹಿಗಳಾಗಿರುತ್ತಾರೆ. ಒಂದು ತಮಾಷೆಯ ಮಾತುಕತೆಯಲ್ಲಿ ಒಂದು ಹಳೆಯ ಸಮಸ್ಯೆ ಭುಗಿಲೇಳಬಹುದು, ಹಾಗೂ ಇದು ಅಂತಿಮವಾಗಿ ವಾದಕ್ಕೀಡುಮಾಡಬಹುದು.
ಕರ್ಕ ರಾಶಿ
ಹಳೆಯ ಸ್ನೇಹಿತರ ಜೊತೆಗಿನ ಒಂದು ಪುನರ್ಮಿಲನ ನಿಮ್ಮನ್ನು ಚೇತೋಹಾರಿಯಾಗಿರಿಸುತ್ತದೆ. ಹಠಾತ್ ಅನಿರೀಕ್ಷಿತ ವೆಚ್ಚಗಳು ಆರ್ಥಿಕ ಒತ್ತಡ ತರಬಹುದು. ನಿಮಗೆ ಹತ್ತಿರವಿರುವ ಯಾರಾದರೂ ಅತ್ಯಂತ ಅನಿರೀಕ್ಷಿತ ಮನಸ್ಥಿತಿಯಲ್ಲಿರುತ್ತಾರೆ. ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ಭಾಗವನ್ನು ನೀವಿಂದು ನೋಡಬಹುದು. ಇವತ್ತು ನಿಮಗೆ ಹೇಗೆನಿಸುತ್ತಿದೆಯೆಂದು ಇತರರಿಗೆ ತಿಳಿಸುವ ಉತ್ಸಾಹವನ್ನು ನಿಯಂತ್ರಿಸಿ. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯಂತ ಪ್ರಣಯಭರಿತ ದಿನವಾಗಿದೆ.
ಸಿಂಹ ರಾಶಿ
ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲೂ ಒಂದು ಒಳ್ಳೆಯ ದಿನ. ಅನಿರೀಕ್ಷಿತ ಬಿಲ್ಗಳು ಹಣಕಾಸಿನ ಹೊರೆಯನ್ನು ಹೆಚ್ಚಿಸುತ್ತದೆ. ನೀವು ಮಕ್ಕಳೊಡನೆ ಸ್ವಲ್ಪ ಸಮಯ ಕಳೆಯಬೇಕು ಮತ್ತು ಅವರಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಬೇಕು ಮತ್ತು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಲು ಕಲಿಸಬೇಕು. ನೀವು ಪ್ರೀತಿಯ ನೋವನ್ನು ಅನುಭವಿಸಬಹುದು. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ಇಂದು ನಿಮ್ಮ ವೈವಾಹಿಕ ಜೀವನದ ಮೇಲೆ ನಿಮ್ಮ ಕುಟುಂಬವು ಪ್ರತಿಕೂಲ ಪರಿಣಾಮ ಬೀರಬಹುದಾದರೂ, ನೀವಿಬ್ಬರೂ ಬುದ್ಧಿವಂತಿಕೆಯಿಂದ ಇದನ್ನು ನಿರ್ವಹಿಸುತ್ತೀರಿ.
ಕನ್ಯಾ ರಾಶಿ
ನಿಮ್ಮ ಮನಸ್ಸು ಒಳ್ಳೆಯ ವಿಷಯಗಳನ್ನು ಗ್ರಹಿಸುತ್ತದೆ. ಆವತ್ತಿಗಾಗಿ ಮಾತ್ರ ಬದುಕುವ ಮತ್ತು ಮನೋರಂಜನೆಗಾಗಿ ಹೆಚ್ಚು ಸಮಯ ಮತ್ತು ಹಣ ಖರ್ಚು ಮಾಡುವ ನಿಮ್ಮ ಪ್ರವೃತ್ತಿಯನ್ನು ನಿಯಂತ್ರಿಸಿ. ಪತ್ನಿಯ ವ್ಯವಹಾರಗಳಲ್ಲಿ ನಿಮ್ಮ ಹಸ್ತಕ್ಷೇಪ ಅವಳಿಗೆ ಕಿರಿಕಿರಿ ಮಾಡಬಹುದು. ಕೋಪ ಭುಗಿಲೇಳುವುದನ್ನು ತಪ್ಪಿಸಲು ಅವಳ ಅನುಮತಿ ತೆಗೆದುಕೊಳ್ಳಿ. ನೀವು ಸುಲಭವಾಗಿ ಸಮಸ್ಯೆಯನ್ನು ತಪ್ಪಿಸಬಹುದು. ನೀವು ಇಂದು ಪ್ರೀತಿಯ ಸಮೃದ್ಧ ಚಾಕೊಲೇಟ್ನ ರುಚಿ ಸವಿಯುತ್ತೀರಿ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಪ್ರೀತಿ ಮತ್ತು ಉತ್ತಮ ಆಹಾರಗಳು ವೈವಾಹಿಕ ಜೀವನದ ಮೂಲಭೂತ ಅಂಶಗಳಾಗಿವೆ; ಮತ್ತು ನೀವು ಇಂದು ಅದರ ಅತ್ಯುತ್ತಮ ಅನುಭವವನ್ನು ಹೊಂದುತ್ತೀರಿ.
ತುಲಾ ರಾಶಿ
ಭಾವನಾತ್ಮಕವಾಗಿ ನೀವು ತುಂಬ ಸ್ಥಿರವಾಗಿರುವುದಿಲ್ಲ - ಆದ್ದರಿಂದ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೀರಿ ಮತ್ತು ಏನು ಹೇಳುತ್ತೀರಿ ಎನ್ನುವ ಬಗ್ಗೆ ಎಚ್ಚರದಿಂದಿರಿ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು. ಮಕ್ಕಳು ನಿಮ್ಮ ಗೃಹಕೃತ್ಯಗಳನ್ನು ಮುಗಿಸುವಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ಮಾಡಲು ಅವರಿಗೆ ಪ್ರೋತ್ಸಾಹಿಸಿ. ಇಂದು ರಾತ್ರಿ ಸಣ್ಣ ವಿಷಯಗಳಲ್ಲೂ ಕೂಡ ನಿಮ್ಮ ಪ್ರಿಯತಮೆಯ ಜೊತೆಗಿನ ಸಂಬಂಧಗಳು ಶಿಥಿಲಗೊಳ್ಳುತ್ತವೆ. ಇಂದು ತಕ್ಷಣ ಗಮನ ಬೇಕಾಗಿರುವ ಬಹಳಷ್ಟು ಸಮಸ್ಯೆಗಳಿರುತ್ತವೆ. ನಿಮ್ಮ ಕೆಲವು ಕೆಲಸಗಳಿಗೆ ನಿಮ್ಮ ಸಂಗಾತಿಯ ಹಾಳಾದ ಆರೋಗ್ಯದಿಂದಾಗಿ ಇಂದು ಅಡ್ಡಿಯಾಗಬಹುದು.
ವೃಶ್ಚಿಕ ರಾಶಿ
ಕೆಲಸದ ಸ್ಥಳದಲ್ಲಿನ ಒತ್ತಡ ನಿಮಗೆ ಅನಾರೋಗ್ಯವಂಟುಮಾಡಬಹುದು. ಇಂದು ನೀವು ಸುಲಭವಾಗಿ ಬಂಡವಾಳ ಪಡೆಯಬಹುದು –ಬಾಕಿಯಿರುವ ಸಾಲಗಳನ್ನು ಸಂಗ್ರಹಿಸಬಹುದು ಅಥವಾ ಹೊಸ ಯೋಜನೆಗಳಿಗೆ ಕೆಲಸ ಮಾಡಲು ಹಣ ಕೇಳಬಹುದು. ಮನೆಯಲ್ಲಿ ನಿಮ್ಮ ಮಕ್ಕಳು ಅತಿಶಯೋಕ್ತಿಯಿರುವ ಸಂಧರ್ಭದಲ್ಲಿ ನಿಮ್ಮನ್ನು ಸಿಲುಕಿಸುತ್ತಾರೆ- ಯಾವುದೇ ಕ್ರಮ ಕೈಗೊಳ್ಳುವ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸಿ. ನಿಮ್ಮ ಕಣ್ಣುಗಳು ಅದೆಷ್ಟು ಪ್ರಕಾಶಮಾನವಾಗಿವೆಯೆಂದರೆ ಅವು ನಿಮ್ಮ ಪ್ರೇಮಿಯ ಕಾಳರಾತ್ರಿಯನ್ನು ಬೆಳಗಬಹುದು. ನಿಮ್ಮ ನೋಟ ಮತ್ತು ವ್ಯಕ್ತಿತ್ವವನ್ನು ಸುಧಾರಿಸಲು ಮಾಡಿದ ಯತ್ನಗಳು ನಿಮಗೆ ತೃಪ್ತಿ ನೀಡುತ್ತವೆ. ಇಂದು ನೀವು ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.
ಧನು ರಾಶಿ
ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ನಿಮಗೆ ತಿಳಿದ ಜನರ ಮೂಲಕ ಆದಾಯದ ಹೊಸ ಮೂಲಗಳು ಕಂಡುಬರುತ್ತವೆ. ಸಂಗಾತಿ ಧೂಮಪಾನ ಬಿಡುವಂತೆ ನಿಮ್ಮನ್ನು ಉತ್ತೇಜಿಸುತ್ತಾರೆ. ಇತರ ಕೆಟ್ಟ ಪರಿಣಾಮಗಳನ್ನು ತೊಡೆದುಹಾಕಲೂ ಇದು ಸರಿಯಾದ ಸಮಯ. ಕಬ್ಬಿಣ ಬಿಸಿಯಿದ್ದಾಗಲೇ ನಾವು ಬಡಿಯಬೇಕೆಂದು ನೆನಪಿಡಿ. ನಿಮ್ಮ ಪ್ರೀತಿಪಾತ್ರರಿಗೆ ಒರಟಾಗಿ ಏನೂ ಹೇಳಬೇಡಿ-ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪಪಡಬಹುದು. ಇಂದು ವಿಷಯಗಳು ನೀವು ಬಯಸುವ ರೀತಿಯಲ್ಲಿ ನಡೆಯದ ದಿನಗಳಲ್ಲಿ ಒಂದು. ನೀವು ಇಂದು ಯಾವುದೇ ಕಾರಣವಿಲ್ಲದೇ ನಿಮ್ಮದೇ ಒತ್ತಡದಿಂದಾಗಿ ನಿಮ್ಮ ಸಂಗಾತಿಯ ಜತೆ ಜಗಳ ಮಾಡಬಹುದು.
ಮಕರ ರಾಶಿ
ನಿಮ್ಮ ಅಧಿಕ ಚೈತನ್ಯವನ್ನು ಇಂದು ಚೆನ್ನಾಗಿ ಬಳಸಿಕೊಳ್ಳಲು ಪ್ರಯತ್ನಿಸಿ. ಹಣಕಾಸನ್ನು ನಿರ್ವಹಿಸುವಾಗ ಹೆಚ್ಚುವರಿ ಎಚ್ಚರಿಕೆ ಅವಶ್ಯಕವಾಗಿದೆ. ನೀವು ಸ್ನೇಹಿತರ ಮೂಲಕ ಪ್ರಮುಖ ಸಂಪರ್ಕಗಳನ್ನು ಹೊಂದುತ್ತೀರಿ. ನೀವು ನಿಜವಾದ ಪ್ರೀತಿ ಕಾಣಲು ಸಾಧ್ಯವಾಗದಿರುವುದರಿಂದ ಪ್ರಣಯಕ್ಕೆ ಉತ್ತಮ ದಿನವಲ್ಲ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ನೀವು ಕುಟುಂಬದ ಸದಸ್ಯರಿಂದ ಕಠಿಣ ಸಮಯವನ್ನು ಎದುರಿಸಬಹುದು, ಆದರೆ ದಿನದ ಕೊನೆಯಲ್ಲಿ, ನಿಮ್ಮ ಸಂಗಾತಿ ನಿಮ್ಮನ್ನು ಶಾಂತಗೊಳಿಸುತ್ತಾರೆ.
ಕುಂಭ ರಾಶಿ
ಅದೃಷ್ಟವನ್ನು ಅವಲಂಬಿಸಬೇಡಿ, ನಿಮ್ಮ ಆರೋಗ್ಯ ಸುಧಾರಿಸಲು ಪ್ರಯತ್ನಿಸಿ ಏಕೆಂದರೆ ಅದೃಷ್ಟವು ಒಂದು ಸೋಮಾರಿ ದೇವತೆಯಾಗಿದೆ. ಬಾಕಿಯಿರುವ ವಿಷಯಗಳು ರಹಸ್ಯಮಯವಾಗುತ್ತವೆ ಮತ್ತು ವೆಚ್ಚಗಳು ನಿಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತವೆ. ನಿಮ್ಮ ಕೋಪವನ್ನುನಿಯಂತ್ರಿಸಿ ಹಾಗೂ ಕುಟುಂಬದ ಸದಸ್ಯರ ಮನ ನೋಯಿಸುವುದನ್ನು ತಪ್ಪಿಸಿ. ಇದೇ ಸಮಯದಲ್ಲಿ ಕೋಪ ಅಲ್ಪಾವಧಿ ಹುಚ್ಚು ಹಾಗೂ ಇದು ನಿಮ್ಮನ್ನು ಕೆಲವು ಗಂಭೀರ ತಪ್ಪುಗಳನ್ನು ಮಾಡಲು ಪ್ರೇರೇಪಿಸಬಹುದೆಂದು ಅರ್ಥ ಮಾಡಿಕೊಳ್ಳಿ ಮನೆಯಲ್ಲಿ ತೊಂದರೆಗಳು ಹುಟ್ಟಿಕೊಂಡರೂ ಸಣ್ಣ ಸಣ್ಣ ವಿಷಯಗಳಿಗೆ ನಿಮ್ಮ ಸಂಗಾತಿಯನ್ನು ಟೀಕಿಸುವುದನ್ನು ತಪ್ಪಿಸಿ. ನೀವು ಅನಿರೀಕ್ಷಿತ ಮೂಲಗಳಿಂದ ಪ್ರಮುಖ ಆಮಂತ್ರಣವನ್ನು ಸ್ವೀಕರಿಸುತ್ತೀರಿ. ನಿಮ್ಮ ಜೀವನ ಸಂಗಾತಿಯು ಈ ಅಗತ್ಯದ ಕಾಲದಲ್ಲಿ ಅವರ ಕುಟುಂಬದ ಸದಸ್ಯರಿಗೆ ಹೋಲಿಸಿದರೆ ನಿಮ್ಮ ಕುಟುಂಬದ ಸದಸ್ಯರಿಗೆ ಕಡಿಮೆ ಕಾಳಜಿ ಮತ್ತು ಪ್ರಾಮುಖ್ಯತೆಯನ್ನು ನೀಡಬಹುದು.
ಮೀನ ರಾಶಿ
ಪ್ರೀತಿ, ಭರವಸೆ, ನಂಬಿಕೆ, ಸಹಾನುಭೂತಿ, ಆಶಾವಾದ ಮತ್ತು ನಿಷ್ಠೆಗಳಂಥ ಧನಾತ್ಮಕ ಭಾವನೆಗಳನ್ನು ಗ್ರಹಿಸಲು ಮನಸ್ಸನ್ನು ಪ್ರೋತ್ಸಾಹಿಸಿ. ಒಮ್ಮೆ ಈ ಭಾವನೆಗಳು ಸಂಪೂರ್ಣವಾಗಿ ಹತೋಟಿಗೆ ತೆಗೆದುಕೊಂಡ ನಂತರ ಮನಸ್ಸು ತಾನಾಗಿಯೇ ಪ್ರತಿ ಪರಿಸ್ಥಿತಿಗೂ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತದೆ. ನೀವು ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಮನಸ್ಥಿತಿಯಲ್ಲಿರುತ್ತೀರಿ. ಅದರೆ ಹಾಗೆ ಮಾಡಿದಲ್ಲಿ ನೀವು ವಿಷಾದಿಸುತ್ತೀರಿ. ಹಠಮಾರಿಯಾಗಬೇಡಿ- ನೀವು ಸುಲಭವಾಗಿ ಇತರರನ್ನು ನೋಯಿಸಬಹುದು. ಪ್ರೀತಿಯಲ್ಲಿ ಒಂದು ಅವಸರದ ಹೆಜ್ಜೆಯನ್ನು ತಪ್ಪಿಸಿ. ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ ಮತ್ತು ನೀವು ಅಧಿಕವಾಗಿ ಮಾಡಬಯಸುವ ವಿಷಯಗಳನ್ನು ಮಾಡುತ್ತೀರಿ. ನೀವು ಇಂದು ನಿಮ್ಮ ಸಂಗಾತಿಯಿಂದಾಗಿ ತೊಂದರೆಗೆ ಸಿಲುಕುತ್ತೀರಿ.














ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ