ಬೆಂಗಳೂರು, ಸೆಪ್ಟೆಂಬರ್ 14: ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಹಲವಾರು ಕಡೆ
ಮಳೆರಾಯ ತನ್ನ ರುದ್ರ ನರ್ತನ ತೋರಿದ್ದಾನೆ. ಇತರ ಪರಿಣಾಮವಾಗಿ, ಬಾಗಲಕೋಟೆ ಜಿಲ್ಲೆಯ
ಕೆರೂರಿನಲ್ಲಿ ಅತಿ ಹೆಚ್ಚು (12 ಸೆಂ.ಮೀ.) ಮಳೆಯಾಗಿದ್ದು ಜನರ ಜೀವನ
ಅಸ್ತವ್ಯಸ್ತಗೊಂಡಿದೆ.
ಬಾಗಲಕೋಟೆ ಮಾತ್ರವಲ್ಲದೆ, ಕಲಬುರಗಿ, ಬೆಳಗಾವಿ, ಗದಗ, ವಿಜಯಪುರ, ರಾಯಚೂರು, ಕೊಪ್ಪಳ, ಬೀದರ್ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಆ ಭಾಗದ ಜನರು ತಲ್ಲಣಿಸುವಂತಾಗಿದೆ.
ಇದರೊಂದಿಗೆ ದಕ್ಷಿಣ ಒಳನಾಡಿನಲ್ಲೂ ಕೆಲವಾರು ಕಡೆ ಭಾರೀ ಮಳೆಯಾಗಿ, ತೊಂದರೆಯುಂಟಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕದ ಕೆಲವು ಕಡೆ ದಾಖಲಾಗಿರುವ ಮಳೆಯ ಪ್ರಮಾಣ ಹೀಗಿದೆ.

| ಜಿಲ್ಲೆ ಮಳೆಯ ಪ್ರಮಾಣ | ಸೆಂ.ಮೀ.ಗಳಲ್ಲಿ |
| ಚಿತ್ತಾಪುರ (ಕಲಬುರಗಿ ಜಿಲ್ಲೆ) | 11 |
| ಕಲಬುರಗಿ, ಸೇಡಂ, ಯೆದ್ರಾಮಿ (ಕಲಬುರಗಿ) | ತಲಾ 10 |
| ಗೋಕಾಕ್ (ಬೆಳಗಾವಿ) | 7 |
| ಕೆಂಭಾವಿ (ಯಾದಗಿರಿ) | 7 |
| ಬಾಗಲಕೋಟೆ, ಲೋಕಪುರ (ಬಾಗಲಕೋಟೆ ಜಿಲ್ಲೆ) | ತಲಾ 6 |
| ಮುದ್ಗಲ್ (ರಾಯಚೂರು) | 6 |
| ಚಿಂಚೋಳಿ, ನೆಲೋಗಿ, ಸುಲೇಪೇಟೆ (ಕಲಬುರಗಿ ಜಿಲ್ಲೆ) | 6 |
| ಮಂಕಿ (ಉತ್ತರ ಕನ್ನಡ ಜಿಲ್ಲೆ) | 5 |
| ಶಿರಹಟ್ಟಿ (ಗದಗ ಜಿಲ್ಲೆ) | 5 |
| ಬೀದರ್, ಕಲ್ಗಿ (ಕಲಬುರಗಿ ಜಿಲ್ಲೆ) | 5 |
| ವಿಜಯಪುರ | 5 |
| ಕಮಲಾಪುರ (ಕಲಬುರಗಿ ಜಿಲ್ಲೆ) | 5 |
| ಮಂಗಳೂರು ಏರ್ ಪೋರ್ಟ್ (ಮಂಗಳೂರು ಜಿಲ್ಲೆ) | 6 |
| ಧರ್ಮಸ್ಥಳ (ದಕ್ಷಿಣ ಕನ್ನಡ) | 5 |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ