ಭವಿಷ್ಯ 13-09-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಮಂಗಳವಾರ, ಸೆಪ್ಟೆಂಬರ್ 12, 2017

ಭವಿಷ್ಯ 13-09-2017

ಭವಿಷ್ಯ


ಮೇಷ 
ವಾಹನದಿಂದ ಲಾಭವಾಗಲಿದೆ. ಮನೆಯ ರಿಪೇರಿಯಂತಹ ಕೆಲಸಗಳಿಗೆ ಆನುಕೂಲವಾಗಲಿದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯಲ್ಲಿ ಅಭಿವೃದ್ಧಿಯನ್ನು ಸಾಧಿಸಲಿದ್ದಾರೆ. ರೈತ ಜನರಿಗೆ ಸಂತಸದ ವಿಚಾರ.
ವೃಷಭ 
ಪುಣ್ಯ ಕಾರ್ಯ, ದೇವತಾಕಾರ್ಯ ಗಳು ಮನಸ್ಸಿಗೆ ಸಮಾಧಾನ ತರಲಿವೆ. ಉದ್ಯೋಗಿಗಳಿಗೆ ಉದ್ಯೋಗ ಭಾಗ್ಯ ತಂದು ಕೊಡಲಿದೆ. ವ್ಯಾಪಾರ, ವಹಿವಾಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ಕಳ್ಳರ ಭೀತಿ ಬಂದೀತು.
ಮಿಥುನ 
ಚಿನ್ನಾಭರಣಾದಿಗಳಿಗೆ ಧನವ್ಯಯ ವಾದೀತು. ಅಧಿಕಾರಿ ವರ್ಗದವರಿಗೆ ಉದ್ಯೋಗದ ಭಡ್ತಿಯ ಅವಕಾಶವಿದೆ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಾದಾವು. ಹಣ ಹೂಡಿಕೆ ಬಗ್ಗೆ ಜಾಗ್ರತೆ ವಹಿಸುವುದು.
ಕಟಕ 
ಮಹತ್ಕಾರ್ಯ ಸಾಧನೆಗಾಗಿ ಕೈ ಖಾಲಿ ಎನಿಸಬಹುದು. ಕೋರ್ಟು ಕಚೇರಿ ವ್ಯವಹಾರದಲ್ಲಿ ಧನವ್ಯಯವಾದರೂ ಲಾಭ ನಿಮಗಿರುತ್ತದೆ. ಕೌಟುಂಬಿಕ ಖರ್ಚುವೆಚ್ಚಗಳು ಅಧಿಕವಾದರೂ ಧನಾಗಮನ ವಿರುವುದು.
ಸಿಂಹ 
ಸರಕಾರಿ ಕೆಲಸಕಾರ್ಯಗಳಲ್ಲಿ ವಿಳಂಬ ಪ್ರವೃತ್ತಿ ತೋರಿ ಬಂದರೂ ಕಾರ್ಯಸಾಧನೆಯಾಗಲಿದೆ. ವಯಸ್ಕರಿಗೆ ತೀರ್ಥಯಾತ್ರಾ ಯೋಗವಿದೆ. ಪಿತ್ತ, ಉಷ್ಣ ಪ್ರವೃತ್ತಿ ಯಿಂದ ಆರೋಗ್ಯವು ಹಾಳಾಗುವ ಸಂಭವ.
ಕನ್ಯಾ 
ದುಡುಕು ವರ್ತನೆಯಿಂದ ಪಶ್ಚಾತ್ತಾಪವಾದೀತು. ದೂರ ಪ್ರಯಾಣ ಸದ್ಯಕ್ಕೆ ಬೇಡ . ಮಾತು ಮಾತಿಗೆ ಮುನಿಸು ತೋರುವ ಮನದನ್ನೆಯ ಮನಕ್ಕೆ ಮುದ ನೀಡಲು ಮರೆಯದಿರಿ. ದಿನಾಂತ್ಯ ಸಿಹಿ ಸುದ್ಧಿ ಇದೆ.
ತುಲಾ 
ಸರಕಾರಿ ಕೆಲಸಗಳು ಶೀಘ್ರ ರೂಪದಲ್ಲಿ ನಡೆದು ಹೋಗಲಿವೆ. ಸ್ವಾಭಿಮಾನ ಬದಿಗೊತ್ತಿ ಮೇಲಧಿಕಾರಿಗಳ ಕೃಪೆ ಪಡೆಯಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸಬಲದಲ್ಲಿ ಮುನ್ನಡೆ ಇದೆ. ಶ್ರೀದೇವರ ಅನುಗ್ರಹಕ್ಕಾಗಿ ಪ್ರಾರ್ಥಿಸಿರಿ.
ವೃಶ್ಚಿಕ 
ಪರರಿಂದ ತೆಗೆಸಿಕೊಟ್ಟ ಸಾಲ ಸಮಸ್ಯೆ ತರಲಿದೆ. ಮಕ್ಕಳ ಅಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ಕಂಡು ಬರಲಿದೆ. ಕೌಟುಂಬಿಕವಾಗಿ ಎಲ್ಲರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಸಮಸ್ಯೆ ಇದೆ.
ಧನು 
ದಂಪತಿಗಳಲ್ಲಿ ವಿರಸ ತಂದೀತು. ಕೆಲಸಗಾರರಿಗೆ ವರ್ಗಾವಣೆಯ ಯೋಗ ವಿದೆ. ವೃತ್ತಿರಂಗದಲ್ಲಿ ಮೇಲಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುತ್ತದೆ. ಪ್ರೀತಿಯ ಮಡದಿಯ ಸಲಹೆಯನ್ನು ಸ್ವೀಕರಿಸಿರಿ.
ಮಕರ 
ರಾಜಕೀಯ ವರ್ಗದವರಿಗೆ ಕಿರಿಕಿರಿ ತಪ್ಪಲಾರದು. ಉದ್ಯೋಗಿಗಳಿಗೆ ಸ್ನೇಹಿತ ವರ್ಗದವರಿಂದ ಹಾಳು ವ್ಯಸನ, ಧನ ನಷ್ಟಕ್ಕೆ ದಾರಿಯಾದೀತು. ಮಂಗಳ ಕಾರ್ಯ, ದೇವತಾ ಕಾರ್ಯಗಳು ನಡೆಯಬಹುದು.
ಕುಂಭ 
ಕೆಟ್ಟ ಜನರಿಂದ ಕೆಟ್ಟ ಮಾತು. ಮಾತಿನಿಂದ ತತ್ತರಿಸಬೇಕಾದೀತು. ದುಡಿಮೆ ಲಾಭದಾಯಕವಾಗಲಿದೆ. ಹಳೆಯ ಬಾಕಿ ಮರು ಪಾವತಿಯಾಗಿ ಸಮಾಧಾನ ತರಲಿದೆ. ರಾಹು ಶತ್ರುಬಾಧಾ ನಿವಾರಕನಾದಾನು.
ಮೀನ 
ನಿರುದ್ಯೋಗಿಗಳಿಗೆ ಹೊರ ದೇಶಕ್ಕೆ ಹೋಗುವ ಪ್ರಸಂಗ ಬಂದೀತು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಅಲಸ್ಯ ವಿರುತ್ತದೆ. ಆರ್ಥಿಕವಾಗಿ ಮೂಲಧನಕ್ಕೆ ಮೋಸವಾಗದು. ಸಮಾರಂಭಕ್ಕಾಗಿ ಓಡಾಟ ವಿರುತ್ತದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here