ಭವಿಷ್ಯ 15-09-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಸೆಪ್ಟೆಂಬರ್ 14, 2017

ಭವಿಷ್ಯ 15-09-2017

ಭವಿಷ್ಯ

ಮೇಷ 
ವಾಹನ ಖರೀದಿ ಕಾರ್ಯಗತ ವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಬಲವು ಉತ್ತಮ ಫ‌ಲಿತಾಂಶವನ್ನು ತರಲಿದೆ. ಗುರು ಹಿರಿಯರ ಅನುಗ್ರಹದಿಂದ ಸಾಂಸಾರಿಕ ಜೀವನವು ನೆಮ್ಮದಿ ತರಲಿದೆ.
ವೃಷಭ
ಉದ್ಯೋಗಿಗಳಿಗೆ ವರ್ಗಾವಣೆಯ ಬದಲಾವಣೆ ಇರುತ್ತದೆ. ನೂತನ ವಸ್ತುಗಳ ಖರೀದಿಯಿಂದ ಧನವ್ಯಯವಾದೀತು. ಕಾಲೋಚಿತವಾದ ನಡೆನುಡಿ ಮುನ್ನಡೆಗೆ ಸಾಧ್ಯವಾಗಲಿದೆ.
ಮಿಥುನ
ಸಾಮಾಜಿಕ ರಂಗದಲ್ಲಿ ನಿಮ್ಮ ಕೆಲಸ ಕಾರ್ಯಗಳು ನೆರವೇರುತ್ತವೆ. ಪ್ರತಿಷ್ಠಿತರು ನಿಮಗೆ ಸಹಕಾರವನ್ನು ನೀಡಲಿದ್ದಾರೆ. ಅವಿವಾಹಿತರು ಬಂದ ಸಂಬಂಧಗಳನ್ನು ಸದುಪಯೋಗಿಸಬೇಕು.
ಕಟಕ
ಆರ್ಥಿಕ ಲಾಭ ತೋರಿಬಂದು ನಿಮ್ಮ ಕೆಲಸ ಕಾರ್ಯಗಳು ಅನುಕೂಲವಾಗಿ ನಡೆದು ಹೋಗಲಿದೆ. ನೂತನ ವ್ಯಾಪಾರ, ವ್ಯವಹಾರಗಳಿಗೆ ಈಗ ಸಕಾಲ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು.
ಸಿಂಹ
ಯಾವುದೇ ವಿಚಾರವನ್ನು ಯೋಚಿಸಿ, ಚಿಂತಿಸಿ ಮುಂದುವರಿಯಿರಿ. ದೇಹಾರೋಗ್ಯ ಆಗಾಗ ಏರುಪೇರಾಗಬಹುದು. ವಿದ್ಯಾರ್ಥಿಗಳು ಆಗಾಗ ಹಿನ್ನಡೆಯನ್ನು ಅನುಭವಿಸಲಿರುವರು. ಜಾಗ್ರತೆಯಿಂದ ಮುಂದುವರಿಯಿರಿ.
ಕನ್ಯಾ
ಯೋಗ್ಯ ವಯಸ್ಕರು ಸದ್ಯದಲ್ಲೇ ಕಂಕಣಬಲವನ್ನು ಹೊಂದಲಿದ್ದಾರೆ. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ ಲಾಭಕರವಾಗಲಿದೆ. ರಾಜಕೀಯ ವರ್ಗ ದವರು ಸ್ಥಾನಮಾನವನ್ನು ಗಳಿಸಲಿದ್ದಾರೆ. ದಿನಾಂತ್ಯ ಶುಭ.
ತುಲಾ
ಶನಿಯ ಲಾಭಸ್ಥಾನ ಆರ್ಥಿಕವಾಗಿ ಮುನ್ನಡೆಯನ್ನು ತರಲಿದೆ. ರಾಶಿಸ್ಥಿತ ಗುರು ಹೊಸ ಚಿಂತನೆಗೆ ಅವಕಾಶವನ್ನು ಮಾಡಿಕೊಡಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಮುನ್ನಡೆ ತೋರಿಬರಲಿದೆ. ಸದುಪಯೋಗಿಸಿಕೊಳ್ಳಿ.
ವೃಶ್ಚಿಕ
ಶನಿಯ ಪ್ರತಿಕೂಲತೆ ಆಗಾಗ ಗೋಚರಕ್ಕೆ ಬರಲಿದ್ದು ಶಾಂತಿ, ಸಮಾಧಾನವನ್ನು ಕಳೆದುಕೊಳ್ಳುವಿರಿ. ಯಾವುದೇ ವಿಚಾರದಲ್ಲಿ ದುಡುಕದೆ ಚಿಂತಿಸಿ ಮುಂದುವರಿಯಿರಿ. ಸಂಚಾರದಲ್ಲಿ ಜಾಗ್ರತೆ ಇರಲಿ.
ಧನು
ಕೋಪ, ತಾಪಗಳು ಅನಾವಶ್ಯಕವಾಗಿ ನಿಷ್ಠುರತೆಯನ್ನು ತಂದುಕೊಳ್ಳಬಹುದು. ಏಕಾದಶದ ಗುರು ನಿಮ್ಮ ಮನೋಕಾಮನೆ ಯನ್ನು ಸದ್ಯದಲ್ಲೇ ಈಡೇರಿಸಲಿದ್ದಾನೆ. ಆದರೂ ದೃಢ ನಿರ್ಧಾರ, ಪ್ರಯತ್ನಬಲ ಮುಂದುವರಿಸಿರಿ.
ಮಕರ
ಶುಭಮಂಗಲ ಕಾರ್ಯಗಳಿಗೆ ಅಡೆತಡೆ ತೋರಿಬರುವುದು. ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿರಿ. ಶ್ರೀ ದೇವತಾ ದರ್ಶನ ಭಾಗ್ಯ ನೆಮ್ಮದಿಯನ್ನು ಮನಃಶಾಂತಿಯನ್ನು ನೀಡಬಲ್ಲುದು.
ಕುಂಭ
ಗುರುಬಲ, ರಾಹುಬಲ, ಶನಿಬಲ ನಿಮಗೆಲ್ಲಾ ವಿಚಾರದಲ್ಲಿ ಮುನ್ನಡೆಯನ್ನು ತಂದುಕೊಡಲಿದೆ. ಸಾಮಾಜಿಕ ರಂಗದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ. ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ನೋಡಿಕೊಳ್ಳಿರಿ.
ಮೀನ
ಪಂಚಮದ ರಾಹು ಆಗಾಗ ಮನೋವಿಕಲ್ಪತೆ ಯನ್ನು ತಂದು ಕೊಡಬಹುದು. ಕೌಟುಂಬಿಕವಾಗಿ ಯಾರನ್ನೂ ನಂಬಂದಂತಹ ಪರಿಸ್ಥಿತಿ ತೋರಿಬರುವುದು. ಯಾವುದೇ ಕೆಲಸ ಕಾರ್ಯಗಳು ನಿರೀಕ್ಷಿತ ರೀತಿಯಲ್ಲಿ ನಡೆಯದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here