ಅಹಮದಾಬಾದ್, ಸೆಪ್ಟೆಂಬರ್ 13: ಜಪಾನ್-ಭಾರತ 12ನೇ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು
ಅಹಮದಾಬಾದ್ ಗೆ ಆಗಮಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರನ್ನು ಪ್ರಧಾನಿ ನರೇಂದ್ರ
ಮೋದಿ ಆಲಂಗಿಸಿ ಭವ್ಯ ಸ್ವಾಗತ ಕೋರಿದರು.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಅಬೆ ಹಾಗೂ ಪತ್ನಿ ಅಕಿ ಅಬೆಯವರನ್ನು ತೆರೆದ ಜೀಪಿನಲ್ಲಿ ರೋಡ್ ಶೋ ಮೂಲಕ ಸಾಬರಮತಿ ಆಶ್ರಮಕ್ಕೆ ಕರೆದೊಯ್ಯಲಾಗುತ್ತಿದೆ. 28 ರಾಜ್ಯಗಳ ಟ್ಯಾಬ್ಲೋಗಳು, ಶಾಲಾ ಮಕ್ಕಳು ರೋಡ್ ಶೋಗೆ ಕಳೆ ತುಂಬಿದೆ.
ರೋಡ್ ಶೋ ಹಿನ್ನಲೆಯಲ್ಲಿ ನರೇಂದ್ರ ಮೋದಿ ಮತ್ತು ಶಿಂಜೋ ಅಬೆಯವರ ಹೋರ್ಡಿಂಗ್ ಮತ್ತು ಫ್ಲೆಕ್ಸ್ ಗಳನ್ನು ದಾರಿ ತುಂಬಾ ಹಾಕಲಾಗಿದೆ.
ಮಹಾತ್ಮ ಗಾಂಧಿಯವರ ಸಾಬರಮತಿ ಆಶ್ರಮದಿಂದ ಉಭಯ ನಾಯಕರು 16ನೇ ಶತಮಾನದ ಸಿದಿ ಸಯ್ಯದ್ ಕಿ ಜಾಲಿ ಮಸೀದಿಗೆ ಭೇಟಿ ನೀಡಲಿದ್ದಾರೆ. ನಂತರ ಉಭಯ ನಾಯಕರು ಅಹಮದಾಬಾದ್ ನ ಖ್ಯಾತ ರೆಸ್ಟೋರೆಂಟ್ ನಲ್ಲಿ ರಾತ್ರಿಯ ಊಟ ಮಾಡಲಿದ್ದಾರೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ