ಮಂಡ್ಯ: ಪ್ರಧಾನಿ ಕುರ್ಚಿಯಲ್ಲಿ ಕೂತಿರೋ ಮೋದಿಗೆ ಯಾರಾದ್ರೂ ಸಮಸ್ಯೆ ಹೇಳಿ ಪತ್ರ ಬರೆದ್ರೆ ಅದಕ್ಕೆ ತಕ್ಷಣ ಸ್ಪಂದಿಸ್ತಾರೆ. ಹೀಗೆ ಮಂಡ್ಯದ ಯುವತಿ ಸಾರಾ ಎಂಬಾಕೆಯ ಮನಸ್ಸುನ್ನು ಮೋದಿ ಗೆದ್ದಿದ್ದಾರೆ.
ಸಾರಾ ತನ್ನ ಎಂಬಿಎ ವ್ಯಾಸಂಗಕ್ಕೆ ಲೋನ್ ಕೊಡೋಕೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ನಿರಾಕರಿಸಿದಾಗ ಆಕೆ ಸಹಾಯ ಯಾಚಿಸಿ ಮೋದಿಗೆ ಪತ್ರ ಬರೆದಿದ್ದರು. ಹತ್ತೇ ದಿನದಲ್ಲಿ ಪ್ರಧಾನಿ ಕಚೇರಿಯಿಂದ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸಹಾಯ ಮಾಡುವಂತೆ ಪತ್ರ ಬಂದಿತ್ತು. ಆದ್ರೂ ಸೆಂಟ್ರಲ್ ಬ್ಯಾಂಕ್‍ನವರು ಸಾಲ ಕೊಟ್ಟಿರಲಿಲ್ಲ. ಕೊನೆಗೆ ಮೋದಿ ಪತ್ರ ಗಮನಿಸಿದ ವಿಜಯ್ ಬ್ಯಾಂಕ್‍ನವರು ಸಾರಾಗೆ ಲೋನ್ ಕೊಟ್ರು.
ಸದ್ಯ ಸಾರಾ ಎಂಬಿಎ ಪದವಿ ಓದುತ್ತಿದ್ದು, ಇಂದು ಹುಟ್ಟು ಹಬ್ಬದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಸಾರಾ, ಪ್ರಧಾನಿಯವರು ಸಹಾಯ ಮಾಡಿರುವುದು ನನಗೊಬ್ಬಳಿಗೆ ಅಲ್ಲ. ಇಂತಹ ಅನೇಕ ಉದಾಹರಣೆಗಳಿವೆ. 125 ಕೋಟಿ ಜನ ಇರೋ ಈ ದೇಶದಲ್ಲಿ ಪ್ರತಿಯೊಬ್ಬರ ಪತ್ರಕ್ಕೆ ಪ್ರತಿಕ್ರಿಯಿಸುತ್ತಾರೆ ಅಂದ್ರೆ ನಿಜಕ್ಕೂ ಅವರೊಬ್ಬರು ಗ್ರೇಟ್ ಲೀಡರ್. ಇದೇ ರೀತಿ ನಾಲ್ಕು ಮಂದಿ ಲೀಡರ್ ಆದ್ರೆ ಭಾರತ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅಂತ ಹೇಳಿದ್ರು.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ