ಭವಿಷ್ಯ 26-09-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಸೋಮವಾರ, ಸೆಪ್ಟೆಂಬರ್ 25, 2017

ಭವಿಷ್ಯ 26-09-2017

ಭವಿಷ್ಯ 

ಮೇಷ
ನಿಮ್ಮ ಮಗುವಿನ ಸಾಧನೆ ನಿಮಗೆ ಅಪಾರ ಸಂತೋಷ ನೀಡಬಹುದು. ದೊಡ್ಡ ಯೋಜನೆಗಳನ್ನು ಮತ್ತು ಕಲ್ಪನೆಗಳಿರುವ ಯಾರಾದರೂ ನಿಮ್ಮ ಗಮನ ಸೆಳೆಯುತ್ತಾರೆ - ಯಾವುದೇ ಹೂಡಿಕೆಗಳನ್ನು ಮಾಡುವ ಮೊದಲು ವ್ಯಕ್ತಿಯ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ದೃಢೀಕರಿಸಿ. ನಿಮ್ಮ ಸಂಗಾತಿಯ ಆರೋಗ್ಯದ ನಿಮ್ಮನ್ನು ಚಿಂತೆಗೀಡುಮಾಡಬಹುದು. ನೀವು ವಾಸ್ತವಾಂಶಗಳನ್ನು ಎದುರಿಸುತ್ತಿದ್ದ ಹಾಗೆ ಪ್ರೀತಿಪಾತ್ರರನ್ನು ಮರೆಬೇಕಾಗುತ್ತದೆ. ಯಾವುದೇ ಹೊಸ ಜಂಟಿ ಯೋಜನೆಗಳು ಮತ್ತು ಪಾಲುದಾರಿಕೆಗಳಿಗೆ ಸಹಿ ಹಾಕಬೇಡಿ. ನೀವು ಇಂದು ಮಾಡುವ ಸ್ವಯಂ ಸೇವೆಯ ಕೆಲಸ ನೀವು ಸಹಾಯ ಮಾಡುವವರಿಗೆ ಮಾತ್ರವಲ್ಲದೇ ನಮ್ಮನ್ನು ನೀವೇ ಹೆಚ್ಚು ಸಕಾರಾತ್ಮಕವಾಗಿ ನೋಡಲು ಸಹಾಯ ಮಾಡುತ್ತದೆ. ಒಂದು ಸಂಬಂಧಿಕರು ಇಂದು ನಿಮ್ಮನ್ನು ಅಚ್ಚರಿಗೊಳಿಸಬಹುದು, ಆದರೆ ಇದು ನಿಮ್ಮ ಯೋಜನೆಗೆ ತೊಂದರೆಯುಂಟುಮಾಡಬಹುದು.
ವೃಷಭ
ರಕ್ತದೊತ್ತಡವಿರುವ ರೋಗಿಗಳು ತಮ್ಮ ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಕೊಲೆಸ್ಟರಾಲ್ ನಿಯಂತ್ರಣದಲ್ಲಿರಿಸಲು ಕೆಂಪು ವೈನ್ ತೆಗೆದುಕೊಳ್ಳಬಹುದು. ಇದು ಅವರಿಗೆ ಮತ್ತಷ್ಟು ವಿಶ್ರಾಂತಿ ತರುತ್ತದೆ. ಹೊಸ ಆರ್ಥಿಕ ಒಪ್ಪಂದ ಕುದುರಿಸಲಾಗುತ್ತದೆ ಮತ್ತು ಹೊಸ ಹಣ ಬರುತ್ತದೆ. ಒಬ್ಬ ಹತ್ತಿರದ ಸಂಬಂಧಿಗೆ ಹೆಚ್ಚು ಗಮನ ನೀಡಬೇಕಾಗಬಹುದಾದರೂ ಅವರು ಬೆಂಬಲ ಮತ್ತು ಆರೈಕೆ ನೀಡಬಹುದು. ನೀವು ಪ್ರೀತಿಯ ನೋವನ್ನು ಅನುಭವಿಸಬಹುದು. ಇಂದು ವಿಶ್ರಾಂತಿ ಪಡೆಯಲು ಸಮಯವಿಲ್ಲ ಬಾಕಿಯಿರುವ ಕೆಲಸಗಳು ನಿಮ್ಮನ್ನು ವ್ಯಸ್ತವಾಗಿಡುತ್ತವೆ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ಇಂದು ನೀವು ನಿಮ್ಮ ಸಂಗಾತಿ ನಿಮ್ಮ ಹುಟ್ಟುಹಬ್ಬವನ್ನು ಮರೆತಂಥ ಹಳೆಯ ವಿಷಯದ ಬಗ್ಗೆ ಜಗಳವಾಡಬಹುದು. ಆದರೆ ಕೊನೆಗೆ ಎಲ್ಲವೂ ಸರಿಹೋಗುತ್ತದೆ.
ಮಿಥುನ
ಒಬ್ಬ ಸ್ನೇಹಿತ ನಿಮ್ಮ ಮುಕ್ತ ಮನಸ್ಸು ಮತ್ತು ಸಹಿಷ್ಣುತೆಯ ಪರಮಾವಧಿಯನ್ನು ಪರೀಕ್ಷಿಸಬಹುದು. ನೀವು ನಿಮ್ಮ ಮೌಲ್ಯಗಳೊಂದಿಗೆ ರಾಜಿಯಾಗದಿರುವಂತೆ ಮತ್ತು ಸಕಾರಣವಾದ ನಿರ್ಧಾರಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ವಹಿಸಬೇಕು. ದೀರ್ಘಕಾಲದ ದೃಷ್ಟಿಕೋನದಿಂದ ಹೂಡಿಕೆ ಮಾಡಬೇಕು. ನಿಮ್ಮ ಅತಿಯಾದ ಜೀವನಶೈಲಿ ಮನೆಯಲ್ಲಿ ಆತಂಕ ಸೃಷ್ಟಿಸಬಹುದು ಆದ್ದರಿಂದ ತಡರಾತ್ರಿಯನ್ನು ಹಾಗೂ ಇತರರ ಮೇಲೆ ಬಹಳ ಖರ್ಚು ಮಾಡುವುದನ್ನು ತಪ್ಪಿಸಿ. ಪ್ರೀತಿಯ ಜೀವನ ಇಂದು ನಿಜವಾಗಿಯೂ ಸುಂದರವಾಗಿ ಅರಳುತ್ತದೆ. ಕೆಲಸದಲ್ಲಿನ ಸಂಕಷ್ಟಗಳು ಸಹಚರರ ಸಕಾಲಿಕ ಸಹಾಯದಿಂದ ಕಳೆದುಹೋಗುತ್ತವೆ. ಇದು ನಿಮಗೆ ನಿಮ್ಮ ವೃತ್ತಿಪರತೆಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಪ್ರಯಾಣಕ್ಕೆ ಒಳ್ಳೆಯ ದಿನವಲ್ಲ. ನೀವು ಜಗಳಗಳ ಸರಣಿಯನ್ನೇ ಹೊಂದಿರುತ್ತಿದ್ದು ನಿಮ್ಮ ಸಂಬಂಧವನ್ನು ಬಿಟ್ಟುಬಿಡುವ ಭಾವನೆಯನ್ನು ಇದು ಮೂಡಿಸುತ್ತದೆ. ಆದರೆ, ಅಷ್ಟು ಸುಲಭವಾಗಿ ಬಿಡಬೇಡಿ.
ಕರ್ಕ
ಪೋಷಕರ ಆರೋಗ್ಯ ಚಿಂತೆಗೆ ಕಾರಣವಾಗಬಹುದು. ಮನರಂಜನೆ ಅಥವಾ ಹೊರನೋಟದ ಸುಧಾರಣೆಗಾಗಿ ಹೆಚ್ಚು ಖರ್ಚು ಮಾಡಬೇಡಿ. ಸ್ನೇಹಿತರು ನಿಮ್ಮ ವೈಯಕ್ತಿಕ ಜೀವನದಲ್ಲಿ ಅಗತ್ಯಕ್ಕಿಂತಲೂ ಹೆಚ್ಚು ಹಸ್ತಕ್ಷೇಪ ಮಾಡುತ್ತಾರೆ. ಇಂದು ಆನಂದ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಉದ್ಭವಿಸುವ ವಿರೋಧಕ್ಕೆ ವಿವೇಚನಾಯುಕ್ತರೂ ಮತ್ತು ಧೈರ್ಯಶಾಲಿಗಳೂ ಆಗಿರಿ. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ಒಂದು ನಷ್ಟ ನಿಮ್ಮ ವೈವಾಹಿಕ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.
ಸಿಂಹ
ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ. ನೀವು ಜನರು ನಿಮ್ಮಿಂದ ಏನು ಬಯಸುತ್ತಾರೆಂದು ನಿಖರವಾಗಿ ತಿಳಿದಿರುವಂತೆ ತೋರುತ್ತದೆ -ಆದರೆ ಇಂದು ನಿಮ್ಮ ಖರ್ಚುಗಳಲ್ಲಿ ತುಂಬಾ ಉದಾರಿಯಾಗದಿರಲು ಪ್ರಯತ್ನಿಸಿ. ನೀವು ಪ್ರೀತಿಸುವವರಿಂದ ಉಡುಗೊರೆಗಳನ್ನು ಪಡೆಯಲು ಹಾಗೂ ನೀಡಲು ಪವಿತ್ರವಾದ ದಿನ. ಪ್ರೀತಿ ಮಿತಿಯಿಲ್ಲದ್ದಾಗಿದೆ, ಅಪಾರವಾಗಿದೆ; ನೀವು ಈ ಮುಂಚೆ ಈ ವಿಷಯಗಳನ್ನು ಕೇಳಿರಬೇಕು. ಆದರೆ ಇಂದು, ನೀವು ಇದನ್ನು ಅನುಭವಿಸುತ್ತೀರಿ. ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ನಿಮ್ಮ ಪರವಾಗಿ ಕೆಲಸ ಮಾಡುತ್ತದೆ. ಆದರೆ ನೀವು ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು. ನೀವು ಹಾನಿಯುಂಟುಮಾಡಿದವರಲ್ಲಿ ನೀವು ಕ್ಷಮೆಯಾಚಿಸಬೇಕು. ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ ಆದರೆ ಮೂರ್ಖರು ಮಾತ್ರ ಅದನ್ನು ಪುನರಾವರ್ತಿಸುತ್ತಾರೆನ್ನುವುದನ್ನು ನೆನಪಿಡಿ. ಇಂದು ನೀವು ಸಾಕಷ್ಟು ಆಸಕ್ತಿದಾಯಕ ಆಮಂತ್ರಣಗಳನ್ನು ಪಡೆಯುತ್ತೀರಿ - ಮತ್ತು ಒಂದು ಅಚ್ಚರಿಯ ಕೊಡುಗೆಯೂ ನಿಮಗೆ ಸಿಗಬಹುದು. ಮದುವೆಯ ನಂತರ, ಪಾಪವೇ ಪೂಜೆಯಾಗುತ್ತದೆ, ಮತ್ತು ನೀವು ಇಂದು ಬಹಳಷ್ಟು ಪೂಜೆ ಮಾಡಬಹುದು.
ಕನ್ಯಾ
ದೇಹದ ನೋವು ಮತ್ತು ಒತ್ತಡ ಸಂಬಂಧಿತ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಯೋಜಿತವಲ್ಲದ ಮೂಲಗಳಿಂದ ಹಣದ ಲಾಭ ನಿಮ್ಮ ದಿನವನ್ನು ಬೆಳಗಿಸುತ್ತದೆ. ಸರಿಯಾದ ಸಂಭಾಷಣೆ ಮತ್ತು ಸಹಕಾರ ಸಂಗಾತಿಯ ಜೊತೆಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ. ನಿಮ್ಮ ಪ್ರೀತಿಪಾತ್ರರು ಮಾಡಿದ ಟಿಪ್ಪಣಿಗಳಿಗೆ ನೀವು ತುಂಬ ಸಂವೇದನಾಶೀಲರಾಗಿರುತ್ತೀರಿ – ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಮತ್ತು ನಂತರ ಪಶ್ಚಾತ್ತಾಪಪಡುವಂಥದ್ದನ್ನು ಏನೂ ಮಾಡಬೇಡಿ. ನೀವು ಇನ್ನು ಮುಂದೆ ನಿಮ್ಮ ಕಾಮಪ್ರಚೋದಕ ಕಲ್ಪನೆಗಳ ಬಗ್ಗೆ ಕನಸು ಕಾಣಬೇಕಾಗಿಲ್ಲ; ಅವು ಇಂದು ನಿಜವಾಗಬಹುದು. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ನಿಮಗೆ ಇಂದು ನಿಮ್ಮ ಸಂಗಾತಿಯಿಂದ ಹಾನಿಗೊಳಗಾದಂತೆ ಅನ್ನಿಸಬಹುದು.
ತುಲಾ
ಮಾನಸಿಕ ಶಾಂತಿಗಾಗಿ ನಿಮ್ಮ ಒತ್ತಡವನ್ನು ಪರಿಹರಿಸಿ. ವ್ಯಾಪಾರ ಸಾಲಕ್ಕಾಗಿ ನಿಮ್ಮ ಬಳಿ ಬರುವವರನ್ನು ನಿರ್ಲಕ್ಷಿಸಿ. ಸಂಬಂಧಿಗಳು ನಿಮ್ಮ ದುಃಖ ಹಂಚಿಕೊಳ್ಳುತ್ತಾರೆ. ಅವರೊಂದಿಗೆ ನಿಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ನೀವು ಖಂಡಿತವಾಗಿಯೂ ಅವುಗಳನ್ನು ಬಗೆಹರಿಸಿಕೊಳ್ಳುತ್ತೀರಿ. ನಿಮ್ಮ ಪ್ರೀತಿಪಾತ್ರರಿಗೆ ಒರಟಾಗಿ ಏನೂ ಹೇಳಬೇಡಿ-ಇಲ್ಲದಿದ್ದರೆ ನೀವು ನಂತರ ಪಶ್ಚಾತ್ತಾಪಪಡಬಹುದು. ಇದು ಕೆಲಸದಲ್ಲಿ ಅದ್ಭುತ ದಿನದಂತೆ ತೋರುತ್ತಿದೆ. ಇಂದು ನೀವು ಉತ್ತಮ ವಿಚಾರಗಳಿಂದ ತುಂಬಿರುತ್ತೀರಿ ಮತ್ತು ಚಟುವಟಿಕೆಗಳ ನಿಮ್ಮ ಆಯ್ಕೆ ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನಿಮ್ಮ ಸಂಗಾತಿಯ ಇಂದು ಅವರ ಕೆಲಸದಲ್ಲಿ ಮುಳುಗಿಹೋಗಬಹುದು ಹಾಗೂ ಇದು ನಿಮ್ಮನ್ನು ಬೇಸರಗೊಳಿಸುತ್ತದೆ.
ವೃಶ್ಚಿಕ
ನಿಮ್ಮ ನಿರಾಶಾದಾಯಕ ನಡವಳಿಕೆಯಂದಾಗಿ ನೀವು ಯಾವುದೇ ಪ್ರಗತಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ. ಚಿಂತೆ ನಿಮ್ಮ ಚಿಂತನಾ ಶಕ್ತಿ ಯನ್ನು ಕುಂಠಿತಗೊಳಿಸಿದೆಯಂದು ಕಂಡುಕೊಳ್ಳಲು ಇದು ಸಕಾಲ. ಸಕಾರಾತ್ಮಕವಾಗಿ ಆಲೋಚಿಸಿ ಮತ್ತು ನಿಮ್ಮ ವಿವೇಚನೆಯಲ್ಲಿ ಗಮನಾರ್ಹ ಬದಲಾವಣೆ ಕಾಣುತ್ತದೆ. ಆರ್ಥಿಕ ನಿರ್ಬಂಧಗಳನ್ನು ತಪ್ಪಿಸಲು ನಿಮ್ಮ ಬಜೆಟ್‌ಗೆ ಅಂಟಿಕೊಳ್ಳಿ. ಸಂಜೆ ನಿಮ್ಮ ಮಕ್ಕಳೊಂದಿಗೆ ಸ್ವಲ್ಪ ಆಹ್ಲಾದಕರ ಸಮಯ ಕಳೆಯಿರಿ. ನಿಮ್ಮ ಸಂಪೂರ್ಣ ಹಾಗೂ ಪ್ರಶ್ನಾತೀತ ಪ್ರೀತಿ ಒಂದು ಜಾದುವಿನಂಥ ಸೃಜನಶೀಲ ಶಕ್ತಿಯನ್ನು ಹೊಂದಿದೆ. ಹೊಸ ಯೋಜನೆಗಳು ಮತ್ತು ವಿಚಾರಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ಇದು ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಜೀವನದ ಅತ್ಯುತ್ತಮ ದಿನವಾಗಿರಬಹುದು
ಧನು
ನಿಮ್ಮ ಧೀರ್ಘಕಾಲೀನ ಅನಾರೋಗ್ಯದ ಜೊತೆ ಹೋರಾಡುವಾಗ ಆತ್ಮ ವಿಶ್ವಾಸ ಶೌರ್ಯದ ಮೂಲವೆಂದು ತಿಳಿದಿರಿ. ನೀವು ಇಂದು ಹಣ ಉಳಿಸುವುದು ಕಷ್ಟ – ನೀವು ಇಂದು ಅತಿಯಾಗಿ ಖರ್ಚು ಮಾಡುವ ಅಥವಾ ನಿಮ್ಮ ಪರ್ಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ –ನಿರ್ಲಕ್ಷ್ಯತನದಿಂದ ಕೆಲವು ಸಮಸ್ಯೆಗಳು ಖಂಡಿತ. ನೀವು ಶಾಂತಿ ಕಾಪಾಡಲು ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಲು ನಿಮ್ಮ ಕೋಪವನ್ನು ಮೆಟ್ಟಿ ನಿಲ್ಲಬೇಕು ಪ್ರೀತಿ ಮತ್ತು ಪ್ರಣಯ ನಿಮ್ಮನ್ನು ಸಂತೋಷದ ಮನೋಭಾವದಲ್ಲಿಡುತ್ತದೆ. ನಿಮ್ಮ ಸೃಜನಶೀಲತೆ ನಷ್ಟವಾಗಿದೆ ಎಂದು ನಿಮಗನಿಸುತ್ತದೆ ಮತ್ತು ನಿಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಕಷ್ಟವಾಗುತ್ತದೆ. ಇಂದು ಕೈಗೊಂಡ ನಿರ್ಮಾಣ ಕಾರ್ಯ ನಿಮಗೆ ತೃಪ್ತಿಯಾಗುವ ಹಾಗೆ ಪೂರ್ಣಗೊಳ್ಳುತ್ತದೆ. ಕೆಲವರು ವೈವಾಹಿಕ ಜೀವನ ಕೇವಲ ಜಗಳ ಮತ್ತು ಲೈಂಗಿಕತೆಯ ಬಗೆಗಿದೆಯೆಂದುಕೊಳ್ಳುತ್ತಾರೆ, ಆದರೆ ಇಂದು ಎಲ್ಲವೂ ಪ್ರಶಾಂತವಾಗಿರುತ್ತದೆ.
ಮಕರ
ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ವೈದ್ಯರನ್ನು ಭೇಟಿ ಮಾಡುವುದು ಅಥವಾ ಔಷಧಿಗಳ ತೆಗೆದುಕೊಳ್ಳುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ದಿನದ ಕೊನೆಗೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ. ಜಂಟಿ ಯೋಜನೆಗಳು ಮತ್ತು ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ತಪ್ಪು ಸಮಯದಲ್ಲಿ ತಪ್ಪು ವಿಷಯಗಳನ್ನು ಹೇಳದಿರಲು ಪ್ರಯತ್ನಿಸಿ - ನೀವು ಪ್ರೀತಿಸುವವರನ್ನು ನೋಯಿಸದಂತೆ ಎಚ್ಚರ ವಹಿಸಿ. ಪ್ರೀತಿ ಕೇವಲ ವಸಂತ; ಹೂಗಳು, ಗಾಳಿ, ಬಿಸಿಲು, ಚಿಟ್ಟೆಗಳು. ನೀವು ಇಂದು ಪ್ರಣಯದ ಕಚಗುಳಿಯನ್ನು ಅನುಭವಿಸುತ್ತೀರಿ. ನಿಮ್ಮ ಸಂಗಾತಿಯು ಇಂದು ಇಡೀ ದಿನ ನಿಮ್ಮ ಬಗ್ಗೆ ಚಿಂತಿಸುತ್ತೀರಿ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ಸುದೀರ್ಘ ಸಮಯದ ನಂತರ, ನೀವು ಇಂದು ನಿಮ್ಮ ಸಂಗಾತಿಯಿಂದ ಸ್ನೇಹಶೀಲ ಮತ್ತು ಬೆಚ್ಚಗಿನ ಅಪ್ಪುಗೆಯನ್ನು ಪಡೆಯುತ್ತೀರಿ.
ಕುಂಭ
ನೀವು ಆರೋಗ್ಯ ಸಮಸ್ಯೆಯಿಂದಾಗಿ ಒಂದು ಪ್ರಮುಖ ಕೆಲಸಕ್ಕೆ ಹೋಗಲು ಸಾಧ್ಯವಾಗದಿರುವುದರಿಂದ ಕೆಲವು ಹಿನ್ನಡೆ ಎದುರಿಸುವ ಸಾಧ್ಯತೆಯಿದೆ. ಆದರೆ ನಿಮ್ಮನ್ನು ಮೇಲೆತ್ತಲು ನಿಮ್ಮ ತಾರ್ಕಿಕತೆಯನ್ನು ಬಳಸಿ. ಯಾವುದೇ ದೀರ್ಘಕಾಲೀನ ಹೂಡಿಕೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸ್ನೇಹಿತರ ಜೊತೆ ಕೆಲವು ಆಹ್ಲಾದಕರ ಕ್ಷಣಗಳನ್ನು ಕಳೆಯಲು ಪ್ರಯತ್ನಿಸಿ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. ಪ್ರಣಯ ನಿಮ್ಮ ಹೃದಯ ಮತ್ತು ಮನಸ್ಸನ್ನು ಆಳುತ್ತದೆ. ಹೊಸ ಕೌಶಲ್ಯ ಮತ್ತು ತಂತ್ರಗಳನ್ನು ಬಳಸಿಕೊಳ್ಳುವುದು ವೃತ್ತಿಯ ಬೆಳವಣಿಗೆಗೆ ಅಗತ್ಯವಾಗಬಹುದು. ವೈಯಕ್ತಿಕ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಬಾಸ್ ಇಂದು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು.
ಮೀನ
ಆರೋಗ್ಯದ ಸಮಸ್ಯೆಗಳು ನಿಮ್ಮ ಹತ್ತಿರವೇ ಇವೆ - ಆದ್ದರಿಂದ ನಿಯಮಿತ ವ್ಯಾಯಾಮವನ್ನು ನಿಮ್ಮ ದಿನಚರಿಯಾಗಿಸಿ ಮತ್ತು ತಡೆಗಟ್ಟುವಿಕೆ ಚಿಕಿತ್ಸೆಗಿಂತ ಒಳ್ಳೆಯದೆಂದು ನಂಬಿ. ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಹಠಾತ್ ಪ್ರಣಯ ಪ್ರಸಂಗಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಬಹುದು. ಸಮಯ ಇಂದು ನಿಜವಾಗಿಯೂ ಕಠಿಣವಾಗಿದೆ. ಕೆಲಸಕ್ಕೆ ಹೊರಡುವ ಮೊದಲು ತಯಾರಾಗಿರಿ. ಅನಕೂಲಕರ ಗ್ರಹಗಳು ಇಂದು ನೀವು ಸಂತೋಷ ಅನುಭವಿಸಲು ಸಾಕಷ್ಟು ಕಾರಣಗಳನ್ನು ತರುತ್ತವೆ. ಇಂದು ನಿಮ್ಮ ಸಂಗಾತಿ ಕೆಲವೇ ಕ್ಷಣಗಳಲ್ಲಿ ನಿಮ್ಮ ನೋವನ್ನು ಮುತ್ತಿನಿಂದ ದೂರ ಮಾಡುತ್ತಾಳೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here