ಬೆಂಗಳೂರು, ಸೆ.21: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ
ವಿ.ಜಿ. ಸಿದ್ದಾರ್ಥ್ ಮಾಲಕತ್ವದ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ವಿಭಾಗದ
ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ಚಿಕ್ಕಮಗಳೂರಿನಲ್ಲಿನ 20 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಿದ್ದಾರ್ಥ್ ಪ್ರಖ್ಯಾತ ಕಾಫಿ ಡೇ ಕಫೆಗಳ ಸಹ ಮಾಲಕರಾಗಿದ್ದಾರೆ. ಬೆಂಗಳೂರಿನಲ್ಲಿರುವ ಕೆಫೆ ಕಾಫಿ ಡೇ ಮುಖ್ಯ ಕಚೇರಿ ಹಾಗೂ ಸಿದ್ದಾರ್ಥ್ ಮಾಲಕತ್ವದ ಎಬಿಸಿ ಸಂಸ್ಥೆಗಳು, ಸದಾಶಿವನಗರದಲ್ಲಿರುವ ಅವರ ಮನೆಗಳ ಮೇಲೂ ಐಟಿ ದಾಳಿ ನಡೆದಿದೆ.
ಸಿದ್ದಾರ್ಥ್ ಕುಟುಂಬದವರಿಗೆ ಸೇರಿರುವ ಚೆನ್ನೈನಲ್ಲಿರುವ ಲಾಜಿಸ್ಟಿಕ್ ಕಂಪೆನಿಯ ಮೇಲೆಯೂ ದಾಳಿ ನಡೆದಿದೆ.
ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ಸಿದ್ದಾರ್ಥ್ ಮಾಲಿಕತ್ವದ ಕಾಫಿ ಡೇ ಶಾಪ್ ಹಾಗೂ ರೆಸಾರ್ಟ್ಗಳ ಮೇಲೆ ದಾಳಿ ನಡೆದಿದೆ.
ಸಿದ್ದಾರ್ಥ್ರ ಮಾವ ಎಸ್‌ಎಂ ಕೃಷ್ಣ 46 ವರ್ಷಗಳ ಕಾಲ ಕಾಂಗ್ರೆಸ್ ನಾಯಕರಾಗಿದ್ದರು, ಈ ವರ್ಷದ ಮಾರ್ಚ್ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಎಸ್‌ಎಂ ಕೃಷ್ಣ ಯುಪಿಎ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ