ಸಿನಿಮಾ ಡೆಸ್ಕ್ : ಈ ಹಿಂದೆ ಸುದೀಪ್
ಅವರ ಜೊತೆಯಲ್ಲಿ ಯೋಗರಾಜ್ ಭಟ್ ಮತ್ತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೇಳಿ
ಬಂದಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದೆ.
ಯೆಸ್..ಯೋಗರಾಜ್
ಭಟ್ ಮತ್ತು ಸುದೀಪ್ ಕಾಂಬಿನೇಷ್ ನಲ್ಲಿ ಮೂಡಿ ಬರುವ ಸಿನಿಮಾಕ್ಕೆ ಹಣ ಹೂಡಲು
ನಿರ್ಮಾಪಕರೊಬ್ಬರು ಸಿದ್ದವಾಗಿದ್ದಾರಂತೆ. ಹೌದು ಭಟ್ಟರು ಮತ್ತು ಕಿಚ್ಚನ ಕಾಂಬಿನೇಷನ್
ಸಿನಿಮಾ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಈ ಪ್ರಾಜೆಕ್ಟ್ ಮತ್ತೊಂದು ಹಂತ
ತಲುಪಿದೆಯಂತೆ.
ಅಂದು 'ರಂಗ
ಎಸ್.ಎಸ್.ಎಲ್.ಸಿ' ಚಿತ್ರವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಎಂ.ಎನ್ ಕುಮಾರ್
ಭಟ್ರು-ಕಿಚ್ಚ ಕಾಂಬಿನೇಷನ್ ನ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಅದೇನೆ ಇರಲಿ ಮತ್ತೆ ಯೋಗರಾಜ್ ಭಟ್ ಮತ್ತು ಸುದೀಪ್ ಕಾಂಬಿನೇಷ್ ನಲ್ಲಿ ಮತ್ತೊಂದು
ಸಿನಿಮಾ ತಯಾರಾಗುತ್ತಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ