1993 ಮುಂಬೈ ಸ್ಫೋಟ:ಅಬುಲ್ ಸಲೆಂಗೆ ಜೀವಾವಧಿ ಶಿಕ್ಷೆ; ಇಬ್ಬರಿಗೆ ಮರಣ ದಂಡನೆ; ಕೋರ್ಟ್ ಮಹತ್ವದ ತೀರ್ಪು - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಗುರುವಾರ, ಸೆಪ್ಟೆಂಬರ್ 7, 2017

1993 ಮುಂಬೈ ಸ್ಫೋಟ:ಅಬುಲ್ ಸಲೆಂಗೆ ಜೀವಾವಧಿ ಶಿಕ್ಷೆ; ಇಬ್ಬರಿಗೆ ಮರಣ ದಂಡನೆ; ಕೋರ್ಟ್ ಮಹತ್ವದ ತೀರ್ಪು

ಮುಂಬೈ, ಸೆಪ್ಟೆಂಬರ್ 7: 1993 ದ ರೂವಾರಿ ಅಬು ಸಲೇಂ ಗೆ ವಿಶೇಷ ಟಾಡಾ(Terrorist and Disruptive Activity) ನ್ಯಾಯಾಲಯ ಇಂದು(ಸೆ.7) ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ದಾವೂದ್ ಇಬ್ರಾಹಿಂ ಬಲಗೈ ಬಂಟ ಅಬು ಸಲೇಂ ಮತ್ತು ಕರೀಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೆ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. ಇನ್ನೊಬ್ಬ ಅಪರಾಧಿ ರಿಯಾಜ್ ಸಿದ್ದಿಖಿಗೆ 10 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.
ಇದೇ ವರ್ಷದ ಜೂನ್ ನಲ್ಲಿ, ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ 6 ಜನರನ್ನು ಅಪರಾಧಿಗಳು ಎಂದು ಟಾಡಾ ನ್ಯಾಯಾಲ ತೀರ್ಪು ನೀಡಿತ್ತು. ಆದರೆ ಕೋರ್ಟು ತೀರ್ಪು ನೀಡಿದ ಎರಡು ವಾರದಲ್ಲಿ ಮುಸ್ತಫಾ ದೋಸ್ಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇಂದು ಉಳಿದ 5 ಜನರಿಗೆ ಶಿಕ್ಷೆ ಪ್ರಕಟಿಸಲಾಗಿದೆ.
ಮಾರ್ಚ್ 12, 1993 ರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 257 ಜನ ಅಸುನೀಗಿದ್ದರೆ, 700 ಜನ ಗಂಭೀರವಾಗಿ ಗಾಯಗೊಂಡಿದ್ದರು. ಬಾಂಬ್ ಸ್ಫೋಟದ ಹಿಂದಿದ್ದಿದ್ದು ಮೋಸ್ಟ್ ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ಎಂಬುದು ಸಾಬೀತಾಗಿತ್ತು.


1) ಅಬು ಸಲೆಂ: ಜೀವಾವಧಿ
2) ಕರೀಮುಲ್ಲಾ ಖಾನ್: ಜೀವಾವಧಿ
3) ತಾಹಿರ್ ಮರ್ಚೆಂಟ್: ಮರಣದಂಡನೆ
4) ಫಿರೋಜ್ ಖಾನ್: ಮರಣದಂಡನೆ
5) ರಿಜಾಜ್ ಸಿದ್ದಿಕಿ: 10 ವರ್ಷ ಜೈಲು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here