ಭವಿಷ್ಯ 07-09-2017 - Panchajanya TV

Breaking

Panchajanya TV provides a unique blend of Kannada and multi-language programming consisting primarily of entertainment, mini-series, dramas, sports, movies, music videos and children's educational programs...!!!

Header Ads

test banner

Post Top Ad

Responsive Ads Here

Post Top Ad

Responsive Ads Here

ಬುಧವಾರ, ಸೆಪ್ಟೆಂಬರ್ 6, 2017

ಭವಿಷ್ಯ 07-09-2017

ಭವಿಷ್ಯ


ಮೇಷ
ವೃತ್ತಿರಂಗದಲ್ಲಿ ಹೆಚ್ಚುವರಿ ಹೊಣೆಗಾರಿಕೆ ನಿರ್ವಹಿಸಬೇಕಾಗುತ್ತದೆ. ಅಗತ್ಯದ ಖರ್ಚುಗಳಲ್ಲಿ ಹಿಡಿತ ಮಾಡದಿರಿ. ಆಹಾರ ಸೇವನೆಯಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ. ದಿನಾಂತ್ಯ ಶುಭವಿದೆ. 
 
 

ವೃಷಭ
ಸಾಮಾಜಿಕ ರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆಯಲಿದ್ದೀರಿ. ಆರ್ಥಿಕವಾಗಿ ಖರ್ಚುವೆಚ್ಚಗಳು ತೋರಿಬಂದರೂ ಉತ್ತಮ ಧನಾಗಮನವಿರುತ್ತದೆ. ವಿವಾಹಾಪೇಕ್ಷಿಗಳಿಗೆ ಉತ್ತಮ ಪ್ರಸ್ತಾವಗಳು ಬರಲಿವೆ.
 
 

ಮಿಥುನ
ಮುಖ್ಯವಾಗಿ ಹಣದ ಉಳಿತಾಯದ ಬಗ್ಗೆ ಗಮನಹರಿಸಬೇಕಾಗುತ್ತದೆ. ಅಭಿವೃದ್ಧಿಗೆ ಪೂರಕವಾದ ದಿನವಾಗುತ್ತದೆ. ಹಿಂದಿನ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲಿವೆ. ಶುಭದಿನ. 
 
 

ಕಟಕ
ಆರ್ಥಿಕವಾಗಿ ಅನಿರೀಕ್ಷಿತ ಧನಾಗಮನವಿರುತ್ತದೆ. ಸಾಂಸಾರಿಕವಾಗಿ ಮನೆಯವರ ಆವಶ್ಯಕತಗಳು ಪೂರೈಸಲ್ಪಡ ಬೇಕಾಗುತ್ತದೆ. ಹೂಡಿಕೆಗಳಿಗೆ ವ್ಯಾಪಾರ, ವ್ಯವಹಾರದಲ್ಲಿ ಲಾಭವಿರುತ್ತದೆ.
 
 

ಸಿಂಹ
ಕೆಲಸ ಕಾರ್ಯಗಳನ್ನು ಸಮತೋಲನ ವಾಗಿಟ್ಟುಕೊಳ್ಳಿರಿ. ಆಹಾರ ಸೇವನೆಯಲ್ಲಿ ಜಾಗ್ರತೆ ವಹಿಸಿರಿ. ಬಂಧು ಮಿತ್ರರ ಸಹಕಾರ ನಿಮಗಿರುತ್ತದೆ. ಪ್ರಯತ್ನ ಬಲದಲ್ಲಿ ದೃಢ ನಿರ್ಧಾರ ತಾಳಿರಿ. ದಿನಾಂತ್ಯ ಶುಭ.
 
 

ಕನ್ಯಾ
ಸಾಂಸಾರಿಕ ಭಾಂದವ್ಯ ವೃದ್ಧಿಸಲಿದೆ. ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾಶೀಲತೆಗೆ ತಕ್ಕ ಫ‌ಲ ದೊರಕಲಿದೆ. ನೌಕರ ವರ್ಗದವರಿಗೆ ಭಡ್ತಿ. ಸಂತಸ ತಂದೀತು. ಭೂ ಖರೀದಿಗೆ ವಾಹನ ಖರೀದಿಗೆ ಅನುಕೂಲವಾಗಲಿದೆ.
 
 

ತುಲಾ
ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ದಾರಿ ಮುನ್ನಡೆ ಸಾಧಿಸಲಿದೆ. ಶುಭ ಮಂಗಲ ಕಾರ್ಯಗಳಿಗೆ ಆರ್ಥಿಕ ವ್ಯಯವಾದೀತು. ಸೂಕ್ತ ಜನರ ಸಲಹೆಗಳು ಹಿರಿಯರಿಂದ ದೊರೆಯಲಿದೆ. ಸ್ಪಂದಿಸಿರಿ. 
 
 

ವೃಶ್ಚಿಕ
ಜಾಗ್ರತೆಯಿಂದ ಮುಂದುವರಿದಲ್ಲಿ ಕಾರ್ಯಸಾಧನೆಯಾಗಲಿದೆ. ಲಾಭಸ್ಥಾನದ ಗುರು ಹೋದರೂ ನಿಮ್ಮ ಪ್ರಯತ್ನ ಬಲಕ್ಕೆ ಫ‌ಲ ಇದ್ದೇ ಇರುತ್ತದೆ. ಕೌಟುಂಬಿಕವಾಗಿ ಹೊಂದಾಣಿಕೆ ಮನೋಭಾವವಿರಲಿ.
 
 

ಧನು
ಹಣ ಉಳಿತಾಯದತ್ತ ಗಮನಹರಿಸಿರಿ. ಸಾಂಸಾರಿಕವಾಗಿ ಮಿತ್ರ ಬಾಂಧವರ ಸಹಕಾರವು ಸಿಗಲಿದೆ. ಯಾವುದೇ ಕೆಲಸವನ್ನು ಮಾಮೂಲಿ ಎಂದು ನಿರ್ಲಕ್ಷ್ಯ ತೋರದಿರಿ. ಶುಭವಿದೆ. 
 
 

ಮಕರ
ವೈಯಕ್ತಿಕ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ದೂರ ಸಂಚಾರದಲ್ಲಿ ಕಾರ್ಯ ಸಿದ್ಧಿಯಾಗಲಿದೆ. ಆರ್ಥಿಕವಾಗಿ ವ್ಯವಹಾರಗಳನ್ನು ಅತೀ ಎಚ್ಚರಿಕೆಯಿಂದ ನಿರ್ವಹಿಸುವುದು ಉತ್ತಮ.
 
 

ಕುಂಭ
ಕೌಟುಂಬಿಕ ಸಂಘರ್ಷಗಳಿಗೆ ಕಾರಣರಾಗದಿರಿ. ಹೂಡಿಕೆಗಳಿಗೆ ಮನಸ್ಸು ಮಾಡಬಹುದು. ಆಗಾಗ ಸಂಚಾರ ಒದಗಿ ಬರಬಹುದು. ಉದ್ಯೋಗಿಗಳಿಗೆ ಅನೇಕ ಅವಕಾಶಗಳು ಒದಗಿ ಬರಲಿವೆ.
 


ಮೀನ
ವಾಹನ ಖರೀದಿಗೆ ಸೂಕ್ತವಾದ ದಿನಗಳಿವು. ಯೋಗ್ಯ ವಯಸ್ಕರು ಕಂಕಣಲಾಭವನ್ನು ಪಡೆಯಲಿದ್ದಾರೆ. ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ನಡೆಯಲಿವೆ. ಗ್ರಹನಿರ್ಮಾಣಕ್ಕೆ ಭೂ ಖರೀದಿಗೆ ಅನುಕೂಲವಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Post Top Ad

Responsive Ads Here