'ಚಮಕ್' ಸೆಂಚುರಿ ಸಂಭ್ರಮ
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಚಮಕ್' ಸಿನಿಮಾ ಶತದಿನ ಪೂರೈಸಿದೆ. ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡಿದ್ದ ಈ ಸಿನಿಮಾ ಈ ವರ್ಷದಲ್ಲಿ ಸೆಂಚುರಿ ಬಾರಿಸಿದ ಎರಡನೇ ಸಿನಿಮಾ ಎನಿಸಿಕೊಂಡಿದೆ. ಡಿಸೆಂಬರ್ 30, 2017 ರಲ್ಲಿ ಚಮಕ್ ಸಿನಿಮಾ ಬಿಡುಗಡೆಯಾಗಿತ್ತು. ಇನ್ನು ವಿಶೇಷ ಅಂದ್ರೆ ಚಮಕ್ ಸಿನಿಮಾ ಆರಂಭವಾಗಿ ಕೂಡ ಒಂದು ವರ್ಷ ಆಗಿದೆ. ಕಳೆದ ವರ್ಷ ಏಪ್ರಿಲ್ 6 ರಂದು ಈ ಸಿನಿಮಾ ಮುಹೂರ್ತ ಮಾಡಿಕೊಂಡಿತ್ತು. ಹೀಗಾಗಿ, ಚಮಕ್ ಚಿತ್ರತಂಡಕ್ಕೆ ಇದು ಬಹಳ ಸಂತಸದ ದಿನವಾಗಿದೆ. ಈ ಬಗ್ಗೆ ನಟ ಗಣೇಶ್, ನಿರ್ದೇಶಕ ಸುನಿ ಮತ್ತು ನಟಿ ರಶ್ಮಿಕಾ ಮಂದಣ್ಣ ಟ್ವಿಟ್ಟರ್ ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ