ಚಿತ್ರ : ನಂಜುಂಡಿ ಕಲ್ಯಾಣ
ನಿರ್ಮಾಪಕ : ಶಿವಣ್ಣ ದಾಸನಪುರ
ನಿರ್ದೇಶಕ : ರಾಜೇಂದ್ರ ಕಾರಂತ್
ಛಾಯಾಗ್ರಹಣ : ಮಂಜುನಾಥ್ .ಬಿ. ನಾಯಕ್
ಸಂಗೀತ : ಅನೂಪ್ ಸಿಳಿನ್
ತಾರಾಗಣ : ತನುಷ್, ಶ್ರಾವ್ಯರಾವ್, ಕುರಿ ಪ್ರತಾಪ್, ಪದ್ಮಜಾ ರಾವ್, ರಾಜೇಂದ್ರ ಕಾರಂತ್ ಹಾಗೂ ಮುಂತಾದವರು...
ರೇಟಿಂಗ್ : 3.5/5
ಬಹಳ ಸಮಯದ ನಂತರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಬಂದಿದೆ ನಂಜುಂಡಿ ಕಲ್ಯಾಣ ಎನ್ನಬಹುದು. ವಿದೇಶದಲ್ಲಿ ನೆಲೆಸಿರುವ ಮಗ ತನ್ನ ತಾಯಿಯ ಅಹಂಕಾರವನ್ನು ಮುರಿದು ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವ ಕಥೆಯೇ ನಂಜುಂಡಿ ಕಲ್ಯಾಣದ ಮೂಲ ಕಥಾವಸ್ತು. ಅಮ್ಮನ ಸೊಕ್ಕನ್ನು ಮುರಿಯಲೆಂದೇ ಮಗ 'ಗೆ' ಅವತಾರ ತಾಳುತ್ತಾನೆ. ಅಮ್ಮ ಮಗ ಇವರಿಬ್ಬರ ನಡುವೆ ನಡೆಯೋ ಈ ಕಥೆಯನ್ನು ಚಿತ್ರದಲ್ಲಿ ಹಾಸ್ಯರೂಪದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

ಇದೊಂದು ಪಕ್ಕಾ ಕಾಮಿಡಿ ಸಿನಿಮಾ. ಇಡೀ ಚಿತ್ರದಲ್ಲಿ ಪ್ರೇಕ್ಷಕರನ್ನು ಎಷ್ಟು ಸಾಧ್ಯವೋ ಅಷ್ಟು ನಗಿಸುವ ಪ್ರಯತ್ನ ಮಾಡಲಾಗಿದೆ.
ಹಾಗಾಗಿ ಚಿತ್ರದ ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಪ್ರೇಕ್ಷಕ ಯಾವಿದೇ ಟ್ವಿಸ್ಟ್ ನಿರೀಕ್ಷಿಸುವ ಹಾಗಿಲ್ಲ. ವಿದೇಶದಲ್ಲಿರುವ ನಾಯಕ ನಂಜುಡಿ (ತನುಷ್)ಗೆ ಮದುವೆ ಮಾಡಬೇಕು ಎಂದು ಅವನ ತಾಯಿ ಹುಡುಗಿಯನ್ನು ಹುಡುಕುತ್ತಿರುತ್ತಾರೆ. ಹಠಮಾರಿಯಾದ ಈ ಅಮ್ಮನಿಗೆ ದುಡ್ಡಿನ ಮದವಿರುತ್ತದೆ. ಮಗನಿಗೆ ಬಂದ ಸಣ್ಣ ಪುಟ್ಟ ಸಂಬಂಧಗಳನ್ನು ಅವಮಾನ ಮಾಡಿ ಕಳುಹಿಸುತ್ತಿರುತ್ತಾಳೆ. ಆದರೆ ನಂಜುಂಡಿಗೆ ಮಾತ್ರ ತನ್ನ ಅತ್ತೆಯ ಮಗಳು ವಿಂದ್ಯಾ (ಶ್ರಾವ್ಯ) ಮೇಲೆ ಲವ್. ಹೇಗಾದರೂ ಮಾಡಿ ಅಮ್ಮನ ಕೊಬ್ಬು ಇಳಿಸಿ, ತಾನು ಪ್ರೀತಿಸಿದ ವಿಂದ್ಯಾಳನ್ನೇ ಕೈಹಿಡಿಯಬೇಕೆಂದು ನಂಜುಡಿ ಫಾರಿನ್‍ನಿಂದ ವಾಪಾಸಾಗುತ್ತಾನೆ.

ಅಲ್ಲಿಂದ ಬರುವಾಗ ತನ್ನ ಸ್ನೇಹಿತ(ಕುರಿ ಪ್ರತಾಪ್)ನಿಗೆ 'ಗೆ' ಗೆಟಪ್ ಹಾಕಿಸಿ ತಾನು ಆಕೆಯನ್ನೇ ಮದುವೆಯಾಗಿದ್ದೇನೆ ಎಂದು ತನ್ನ ಮನೆಗೆ ಕರೆದುಕೊಂಡು ಬರುತ್ತಾನೆ. ಈ ನಾಟಕ ಮುಂದುವರೆಸಿದ ನಂಜುಡಿ ಹೇಗೆ ಅಮ್ಮನ ಗರ್ವಭಂಗವನ್ನು ಮಾಡುತ್ತಾನೆ, ಎನ್ನುವುದೇ ನಂಜುಂಡಿ ಕಲ್ಯಾಣ ಚಿತ್ರದ ಕಥೆ. ನಂಜುಡಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ತನುಷ್ ಆಕ್ಷನ್ ಸೀನ್‍ಗಳನ್ನು ಪರ್‍ಫೆಕ್ಟಾಗಿ ನಿಭಾಯಿಸಿದ್ದಾರೆ.
ಇಡೀ ಸಿನಿಮಾದಲ್ಲಿ ನಾಯಕಿ ಶ್ರಾವ್ಯ ಪಾತ್ರಕ್ಕೆ ಮಾತು ತುಂಬಾ ಕಮ್ಮಿ, ಕ್ಲೈಮ್ಯಾಕ್ಸ್ ಬಿಟ್ಟರೆ ಶ್ರಾವ್ಯ ತನ್ನ ನಟನೆಯನ್ನು ಸಾಬೀತು ಮಾಡಲು ಹೆಚ್ಚು ಅವಕಾಶ ಸಿಕ್ಕಿಲ್ಲ. ಕುರಿ ಪ್ರತಾಪ್ ಇಲ್ಲಿ 'ಗೆ' ಪಾತ್ರ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಆದರೆ ಅವರ ಬಾಯಲ್ಲಿ ಪದೇ ಪದೇ ಡಬಲ್ ಮಿನಿಂಗ್ ಡೈಲಾಗ್‍ಗಳು ಬರುವುದನ್ನು ಸಹಿಸಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ.
ನಿರ್ದೇಶನ ರಾಜೇಂದ್ರ ಕಾರಂತ್ ಅವರಿಗಿರುವ ಅನುಭವದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಅವರು ನಿರೀಕ್ಷೆಯ ಮಟ್ಟ ತಲುಪಿಲ್ಲ. ಅವರು ಇನ್ನೂ ಒಳ್ಳೆಯ ಪ್ರಯತ್ನ ಮಾಡಬಹುದಿತ್ತು. ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡಿದ್ದು, ಸಿನಿಮಾದಲ್ಲಿ ಮೂರು ಹಾಡುಗಳಿವೆ. ಇಡೀ ಸಿನಿಮಾದಲ್ಲಿ ಕ್ಯಾಮರಾ ವರ್ಕ್ ಮತ್ತು ಎಡಿಟಿಂಗ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಮನರಂಜನೆಗಾಗಿ ಸಿನಿಮಾ ನೋಡಲು ಹೋಗುವವರಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ. ಒಟ್ಟಲ್ಲಿ ಸಿನಿಪ್ರಿಯರು ಈ ಚಿತ್ರವನ್ನು ನೋಡಿ ಎಂಜಾಯ್ ಮಾಡಬಹುದು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ